April 27, 2024

Bhavana Tv

Its Your Channel

ಬೆಂಗಳೂರಿಗೆ ಇವತ್ತೂ ಕೊರೊನಾ ಬಿಗ್ ಶಾಕ್: ೧೧೪೮ ಜನರಿಗೆ ಸೋಂಕು,

ಬೆಂಗಳೂರು: ಬೆಂಗಳೂರು ನಗರದಲ್ಲಿ ಇವತ್ತು ಒಂದೇ ದಿನ ೧೧೪೮ ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ ೧೨,೫೦೯ ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಇಂದು ೪೧೮ ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ ೨೨೨೮ ಜನ ಬಿಡುಗಡೆಯಾಗಿದ್ದಾರೆ.
ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೧೦,೧೦೩ ಕ್ಕೆ ಏರಿಕೆಯಾಗಿದೆ. ಇದುವರೆಗೆ ೧೭೭ ಜನ ಸಾವನ್ನಪ್ಪಿದ್ದಾರೆ. ರಾಜಧಾನಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವುದು ಆತಂಕ ಹೆಚ್ಚಿಸಿದೆ.

ಚಾಮರಾಜನಗರ ಮತ್ತು ಕೊಡಗು ಜಿಲ್ಲೆ ಹೊರತುಪಡಿಸಿ ೨೮ ಜಿಲ್ಲೆಗಳ ಮೇಲೆ ಕೊರೋನಾ ದಾಳಿ ನಡೆಸಿದೆ.

ಬೆಂಗಳೂರು ನಗರ ೧೧೪೮, ದಕ್ಷಿಣ ಕನ್ನಡ ೧೮೩, ಧಾರವಾಡ ೮೯ ಹಾಗೂ ಕಲಬುರ್ಗಿ ಜಿಲ್ಲೆಯಲ್ಲಿ ೬೬ ಜನರಿಗೆ ಕೊರೊನಾ ಸೋಂಕು ತಗಲಿದೆ.

ಬಳ್ಳಾರಿ, ಮೈಸೂರು ತಲಾ ೫೯, ಬೆಂಗಳೂರು ಗ್ರಾಮಾಂತರ ೩೭, ರಾಮನಗರ ೩೪, ಚಿಕ್ಕಬಳ್ಳಾಪುರ ೩೨, ಉಡುಪಿ, ಹಾವೇರಿ ತಲಾ ೩೧, ಬೀದರ್ ೨೯, ಬೆಳಗಾವಿ ೨೭, ಹಾಸನ ೨೬, ಬಾಗಲಕೋಟೆ, ತುಮಕೂರು ತಲಾ ೨೪, ಚಿಕ್ಕಮಗಳೂರು ೨೩, ಮಂಡ್ಯ ೨೦, ಉತ್ತರಕನ್ನಡ ೧೯, ದಾವಣಗೆರೆ ೧೮, ರಾಯಚೂರು, ಶಿವಮೊಗ್ಗ ತಲಾ ೧೭, ಕೋಲಾರ ೧೬, ಯಾದಗಿರಿ, ಕೊಪ್ಪಳ ತಲಾ ೧೧, ಗದಗ ೫, ವಿಜಯಪುರ ೪, ಚಿತ್ರದುರ್ಗ ಜಿಲ್ಲೆಯಲ್ಲಿ ಇಬ್ಬರಿಗೆ ಸೋಂಕು ತಗುಲಿದೆ.

ರಾಜ್ಯದಲ್ಲಿ ಇಂದು ೨೦೬೨ ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ ೨೮,೮೭೭ ಕ್ಕೆ ಏರಿಕೆಯಾಗಿದೆ. ಇಂದು ೭೭೮ ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ ೧೧,೮೭೬ ಜನ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೧೬,೫೨೭ ಕ್ಕೆ ಏರಿಕೆಯಾಗಿದ್ದು, ೪೫೨ ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು ೫೪ ಮಂದಿ ಮೃತಪಟ್ಟಿದ್ದು, ಇದುವರೆಗೆ ಮೃತಪಟ್ಟವರ ಸಂಖ್ಯೆ ೪೭೦ ಕ್ಕೆ ಏರಿಕೆಯಾಗಿದೆ.

error: