April 29, 2024

Bhavana Tv

Its Your Channel

ಬೆಂಗಳೂರಿನಲ್ಲಿ ‘ಕೊರೊನಾ’ ರಣಕೇಕೆ : ಇಂದು ೮೦೦ ಮಂದಿಗೆ ವಕ್ಕರಿಸಿದ ಹೆಮ್ಮಾರಿ ಸೋಂಕು.!ರಾಜ್ಯದಲ್ಲಿ ೨೪ ಗಂಟೆಗಳಲ್ಲಿ ೧,೪೯೮ ಜನರಿಗೆ ಕೊರೊನಾ ಸೋಂಕು

ಬೆಂಗಳೂರು ;ರಾಜ್ಯದಲ್ಲಿ ಇಂದು ಕೂಡ ೧೪೯೮ ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡರೆ, ಕೊರೊನಾಕ್ಕೆ ರಾಜ್ಯದಲ್ಲಿ ೧೫ ಜನರು ಬಲಿಯಾಗಿದ್ದಾರೆ. ಬೆಂಗಳೂರು ನಗರವೊಂದರಲ್ಲಿಯೇ ೮೦೦ ಜನರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ದಕ್ಷಿಣಕನ್ನಡದಲ್ಲಿ ೮೩, ಧಾರವಾಡ ೫೭, ಜನರಲ್ಲಿ ಸೋಂಕು ದೃಢವಾಗಿದೆ. ಉಡುಪಿಯಲ್ಲಿ ೨೮ ಜನರಲ್ಲಿ ಸೋಂಕು ಪತ್ತೆಯಾಗಿದೆ. ಶಿವಮೊಗ್ಗದಲ್ಲಿ ಈ ಹಿಂದಿನ ಎಲ್ಲ ದಾಖಲೆಗಳನ್ನು ಹಿಂದಿಕ್ಕಿ ಇಂದು ೩೩ ಜನರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ.. ಇದರೊಂದಿಗೆ ಶಿವಮೊಗ್ಗದಲ್ಲಿ ಸೋಂಕಿತರ ಸಂಖ್ಯೆ ೩೧೮ಕ್ಕೆ ಏರಿಕೆಯಾಗಿದೆ. ಒಟ್ಟು ೧೩೭ ಜನ ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನೂ ೧೭೭ ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲಾವಾರು ಕೊರೊನಾ ಸೋಂಕಿತರ ಅಂಕಿ-ಅಂಶ..
ಬೆಂಗಳೂರು ನಗರ -೮೦೦, ದಕ್ಷಿಣ ಕನ್ನಡ -೮೩, ಧಾರವಾಡ -೫೭,ಕಲಬುರಗಿ -೫೧,
ಬೀದರ್ -೫೧, ಮೈಸೂರು -೪೯, ಬಳ್ಳಾರಿ -೪೫, ರಾಮನಗರ -೩೭,ಉತ್ತರ ಕನ್ನಡ -೩೫, ಶಿವಮೊಗ್ಗ -೩೩,ಮಂಡ್ಯ -೨೯,ಉಡುಪಿ -೨೮,ಹಾಸನ -೨೬,ಬಾಗಲಕೋಟೆ -೨೬,ರಾಯಚೂರು -೨೩,ವಿಜಯಪುರ -೨೨,ಬೆಳಗಾವಿ -೨೦,ತುಮಕೂರು -೧೬,ಕೊಡಗು -೧೪,ಯಾದಗಿರಿ -೧೦,ದಾವಣಗೆರೆ -೦೬,ಕೋಲಾರ -೦೬,ಹಾವೇರಿ -೦೬,ಚಾಮರಾಜನಗರ -೦೬,ಚಿಕ್ಕಮಗಳೂರು -೦೬,ಕೊಪ್ಪಳ -೦೬,ಗದಗ -೦೪,ಚಿಕ್ಕಬಳ್ಳಾಪುರ -೦೩,ಚಿತ್ರದರ‍್ಗ -೦೧,
ಜಿಲ್ಲಾವಾರು ಡಿಸ್ಚರ‍್ಜ್ ಆದವರ ಅಂಕಿ-ಅಂಶ..
ಬೆಂಗಳೂರು ನಗರ -೨೬೫,ಮೈಸೂರು -೩೫,ಉಡುಪಿ -೨೮,ಬಳ್ಳಾರಿ -೨೭,ದಕ್ಷಿಣ ಕನ್ನಡ -೨೬,ಹಾವೇರಿ -೨೧,ಹಾಸನ -೨೦,ಚಾಮರಾಜನಗರ -೨೦,ಕಲಬುರಗಿ -೧೯,
ವಿಜಯಪುರ -೧೮,ರಾಯಚೂರು -೧೬,ಮಂಡ್ಯ -೧೪,ರಾಮನಗರ -೧೩,ಶಿವಮೊಗ್ಗ -೧೨,
ಗದಗ -೦೯,ಕೋಲಾರ -೦೭,ತುಮಕೂರು -೦೬,ಉತ್ತರ ಕನ್ನಡ -೦೫,ಬಾಗಲಕೋಟೆ -೦೪,ಚಿತ್ರದರ‍್ಗ -೦೪,ಕೊಪ್ಪಳ -೦೨,

ಒಟ್ಟಾರೆ ರಾಜ್ಯದಲ್ಲಿ ೨೬,೮೧೫ ಕೊರೋನ ಸೋಂಕಿತರ ಪೈಕಿ ೧೧,೦೯೮ ಮಂದಿ ಸಂಪರ‍್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ ೫೭೧ ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ ೪೧೬ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ೧೫,೨೯೭ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

error: