May 5, 2024

Bhavana Tv

Its Your Channel

ಹೆಲ್ಮೆಟ್ ಹಾಕದೆ ವಾಹನ ಚಲಾಯಿಸಿದರೆ 3 ತಿಂಗಳ ಕಾಲ ಲೈಸೆನ್ಸ್ ರದ್ದು.

ಬೆಂಗಳೂರು: ಹೆಲ್ಮೆಟ್ ಹಾಕದೆ ವಾಹನ ಚಲಾಯಿಸಿದರೆ ಮೂರು ತಿಂಗಳು ಪರವಾನಗಿ ಅಮಾನತು ಮಾಡಲು ಸಾರಿಗೆ ಇಲಾಖೆ ಆದೇಶ ನೀಡಿದೆ.

ರಾಜ್ಯ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಿದ್ದು, ಕೇಂದ್ರ ಮೋಟಾರು ವಾಹನ ಕಾಯ್ದೆಯ ಪ್ರಕಾರ ದ್ವಿಚಕ್ರ ಸವಾರರು ( ಹಿಂಬದಿ ಸವಾರ ಸೇರಿದಂತೆ) ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ.

ಹೀಗಾಗಿ ಇನ್ನು ಮುಂದೆ ಹೆಲ್ಮೆಟ್ ಧರಿಸದೇ ಸಂಚರಿಸುವ ಎಲ್ಲಾ ವಾಹನ ಸವಾರರ ವಿರುದ್ಧ ಮೊಟಾರು ವಾಹನಗಳ ಕಾಯ್ದೆ 1988ರ ಕಲಂ 194-ಟಿ ಅನ್ವಯ, ದಂಡ ವಸೂಲಾತಿಯೊಂದಿಗೆ ವಾಹನ ಸವಾರರ ಚಾಲನಾ ಪರವಾನಗಿಯನ್ನು ಕನಿಷ್ಠ ಮೂರು ತಿಂಗಳ ಅವಧಿಗೆ ಅಮಾನತ್ತುಗೊಳಿಸಲು ತಕ್ಷಣದಿಂದ ಜಾರಿಗೆ ತರಲು ಸರ್ಕಾರ ಆದೇಶ ನೀಡಿದೆ.

2019ರಲ್ಲಿ ತಿದ್ದುಪಡಿಯಾಗಿ ಜಾರಿಗೆ ಬಂದ ರಾಷ್ಟ್ರೀಯ ಮೊಟಾರು ವಾಹನಗಳ ಕಾಯ್ದೆಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ವಿಮೆ (ಇನ್ಶೂರೆನ್ಸ್) ಇಲ್ಲದೆ ವಾಹನ ಚಲಾಯಿಸುವುವರಿಗೆ 2,000 ರೂ.ಗಳ ದಂಡ, ಹೆಲ್ಮೆಟ್‌ ಇಲ್ಲದೆ ವಾಹನ ಚಲಾಯಿಸುವುವರಿಗೆ 1,000 ರೂ.ಗಳ ದಂಡ ಮತ್ತು 3 ತಿಂಗಳ ಪರವಾನಗಿಯನ್ನು ಅಮಾನತುಗೊಳಿಸಲಾಗುತ್ತದೆ.

source: ಉದಯವಾಣಿ

error: