March 22, 2023

Bhavana Tv

Its Your Channel

ಕೋವಿಡ್ – ೧೯ರ ವಿರುದ್ಧ ಹೋರಾಟಕ್ಕೆ ಕಂಕಣ ತೊಟ್ಟ ಸುಮುಖ ಸರ್ಜಿಕಲ್ಸ್ ಸಂಸ್ಥೆ

ಕುಂದಾಪುರ ; ಜಗತ್ತಿನಾದ್ಯoತ ಭಯಾನಕತೆಯನ್ನು ಸೃಷ್ಟಿಸಿ ಪ್ರಮುಖ ದೇಶದ ನಗರಗಳನ್ನು ಲಾಕ್ ಡೌನ್ ಮಾಡಿಸುವ ಮಟ್ಟಿಗೆ ಭಯಹುಟ್ಟಿಸಿ ಸಾವಿರಾರು ಜನರ ಬಲಿ ಪಡೆದುಕೊಂಡಿರುವ ಕೊರೋನಾ ವೈರಸ್ ಕೋವಿಡ್ – ೧೯ರ ವಿರುದ್ಧ ಹೋರಾಟಕ್ಕೆ ಕುಂದಾಪುರ ತಾಲೂಕಿನ ಉಪ್ಪುಂದ ಎಂಬಲ್ಲಿರುವ ಸುಮುಖ ಸರ್ಜಿಕಲ್ಸ್ ಇಂಡಿಯಾ ಪ್ರೈ. ಲಿ. ಸಂಸ್ಥೆ ಪಣ ತೊಟ್ಟಿದೆ. ರಾಜ್ಯದ ಎಲ್ಲಾ ಫ್ಯಾಕ್ಟರಿಗಳು ಲಾಕ್ ಡೌನ್ ಆಗಿ ನೌಕರ ವರ್ಗ ಮನೆಯಲ್ಲಿ ಉಳಿದಿರುವ ಈ ಸಂದರ್ಭದಲ್ಲಿ ಈ ಸಂಸ್ಥೆಯು ದಿನದ ೨೪ ಗಂಟೆಯು ಕೊರೊನಾ ವಿರುದ್ಧದ ಹೋರಾಟದಲ್ಲಿ ವೈದ್ಯಕೀಯ ಲೋಕಕ್ಕೆ ಈ ಸಂಸ್ಥೆ ತನ್ನ ಸಾಥ್ ನೀಡಿದೆ.

ಕುಂದಾಪುರ ತಾಲೂಕಿನ ಉಪ್ಪುಂದ ಎಂಬಲ್ಲಿಯ ಕಂಚಿಕಾನ್ ರಸ್ತೆಯಲ್ಲಿರುವ ಸುಮುಖ ಸರ್ಜಿಕಲ್ಸ್ ಇಂಡಿಯಾ ಪ್ರೈ. ಲಿ. ಸಂಸ್ಥೆಯು ೨೦೧೨ರಿಂದ ವೈದ್ಯ ಲೋಕಕ್ಕೆ ಬೇಕಾದ ಉತ್ಪನ್ನಗಳನ್ನು ಧಾತ್ರಿ ಎಂಬ ಹೆಸರಿನ ಬ್ರಾಂಡ್ ನಲ್ಲಿ ಉತ್ಪಾದನೆ ಮಾಡಿ ಸರಬರಾಜು ಮಾಡುತ್ತಿದೆ. ವಿವಿಧ ಶಸ್ತ್ರಕ್ರಿಯೆಗೆ ಸಂಬAಧಿಸಿದAತೆ ವೈದ್ಯರು ಹಾಗೂ ರೋಗಿಗಳಿಗೆ ಬೇಕಾಗುವ ಡಿಸ್ಪೋಸಿಬಲ್ ಕಿಟ್ಗಳನ್ನು ತಯಾರಿಸಿ ರಾಜ್ಯದಾದ್ಯಂತ ಮಾತ್ರವಲ್ಲ ಹೊರರಾಜ್ಯಗಳಿಗೂ ಸರಬರಾಜು ಮಾಡಿ ಯಶಸ್ವಿಯಾಗಿರುವ ಸುಮುಖ ಸರ್ಜಿಕಲ್ಸ್ ಸಂಸ್ಥೆಗೆ ೨೦೧೮-೧೯ರಲ್ಲಿ ರಾಜ್ಯ ಸರ್ಕಾರ ಮತ್ತು ಕೈಗಾರಿಕಾ ಇಲಾಖೆ ಕೊಡಮಾಡುವ ಸರ್ ಎಂ. ವಿಶ್ವೇಶ್ವರಯ್ಯ ಶ್ರೇಷ್ಠ ಉತ್ಪಾದನಾ ಪ್ರಶಸ್ತಿ ಲಭಿಸಿತ್ತು. ಇದುವರೆಗೆ ವಿವಿಧ ಶಸ್ತ್ರ ಚಿಕಿತ್ಸೆಗೆ ಬೇಕಾದ ಕಿಟ್ಗಳನ್ನು ಸಿದ್ಧಪಡಿಸಿ ದೇಶದ ಮೂಲೆ ಮೂಲೆಗೆ ಸರಬರಾಜು ಮಾಡುತ್ತಿದ್ದ ಈ ಸಂಸ್ಥೆಗೆ ಕೊರೊನಾ ವೈರಸ್ ಬಾಧೆಯ ಬಳಿಕ ಹೆಚ್ಚಿನ ಜವಾಬ್ಧಾರಿಯನ್ನು ಹೊರಿಸಲಾಗಿದೆ. ಇದೀಗ ಕೋವಿಡ್ -೧೯ರ ವಿರುದ್ಧ ಹೋರಾಡಲು ಬೇಕಾಗುವ ಪಿಪಿಇ ಕಿಟ್ ಸಿದ್ಧಪಡಿಸಿ ಆಸ್ಪತ್ರೆಗಳಿಗೆ ಸರಬರಾಜು ಮಾಡುವ ಹೊಣೆಯನ್ನು ಉಡುಪಿ ಜಿಲ್ಲಾಡಳಿತ ಈ ಸಂಸ್ಥೆಗೆ ನೀಡಿದೆ. ಸಮಾಜ ಸೇವೆಯ ಮೂಲಕ ಉದ್ಯಮಕ್ಕೆ ಕಾಲಿರಿಸಿದ ಸಂಸ್ಥೆಯ ಮ್ಹಾಲಕ ಬಿ.ಎಸ್. ಸುರೇಶ್ ಶೆಟ್ಟಿ ಹಾಗೂ ನಿರ್ದೇಶಕ ಪಾಂಡುರAಗ ಪಡಿಯಾರ್ ಜೊತೆಯಾಗಿ ಈ ಜವಾಬ್ಧಾರಿಯನ್ನು ಸವಾಲಾಗಿ ಸ್ವೀಕರಿಸಿದ್ದು, ಕಂಪೆನಿಯ ಸಿಬ್ಬಂದಿಗಳು ಹೆಗಲು ಕೊಟ್ಟಿದ್ದಾರೆ. ಪ್ರತಿದಿನ ಸುಮಾರು ಐದು ಸಾವಿರ ಕಿಟ್ ಸಿದ್ಧಪಡಿಸುವ ಗುರಿ ಹೊಂದಿದ್ದು, ಹಗಲು ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ. ಬೆಂಗಳೂರಿನ ನುರಿತ ಹೊಲಿಗೆ ತಂತ್ರಜ್ಞರೂ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿ ಪಿಪಿಇ ಕಿಟ್ಗಳನ್ನು ಉತ್ಪಾದಿಸಿ ಸರಬರಾಜು ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಐದು ಲಕ್ಷ ಕಿಟ್ಗಳ ಬೇಡಿಕೆ ಇದೆ. ಅಲ್ಲದೇ ವಿವಿಧ ಆಸ್ಪತ್ರೆಗಳ ಬೇಡಿಕೆಗನುಸಾರವಾಗಿ ಕಿಟ್ಗಳ ಉತ್ಪಾದನೆಯಲ್ಲಿ ಏರಿಕೆಯಾಗಬಹುದು ಎನ್ನಲಾಗುತ್ತಿದೆ.

ಈ ಕಿಟ್ ನಲ್ಲಿ ವೈದ್ಯರಿಗೆ ಗ್ಲೌಸ್, ತಲೆಧರಿಸಿಸುವ ಕ್ಯಾಪ್, ಮಾಸ್ಕ್, ಗೌನ್, ಶೂ ಲೆಗ್ಗಿಂಗ್, ಏಪ್ರಾನ್ ಗಳು ಬರುತ್ತವೆ. ಇದನ್ನು ವಿವಿಧ ಸ್ಥರಗಳಲ್ಲಿ ಇಲ್ಲಿ ಉತ್ಪಾದಿಸಲಾಗುತ್ತಿದೆ. ಇಲ್ಲಿನ ನೌಕರರ ಆರೋಗ್ಯವನ್ನು ಗಮನದಲ್ಲಿರಿಸಿ ಅವರಿಗೆ ವೈದ್ಯಕೀಯ ಚೆಕ್ ಅಪ್, ಧರಿಸಲು ಮಾಸ್ಕ್, ಗ್ಲೌಸ್, ತಲೆಗೆ ಸ್ಕಾರ್ಪ್ ನೀಡಲಾಗುತ್ತಿದೆ. ಸೇವಾ ಮನೋಭಾವವಿರುವ ಉತ್ಸಾಹಿ ನೌಕರರ ಸಹಕಾರದಿಂದ ಕಿಟ್ ತಯಾರಿಸಲಾಗುತ್ತಿದೆ.

ಎಂದು ಸುಮುಖ ಸರ್ಜಿಕಲ್ ಸಂಸ್ಥೆ, ಉಪ್ಪುಂದ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಬಿ.ಎಸ್.ಸುರೇಶ್ ಶೆಟ್ಟಿ ಮಾತನಾಡಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕೊರೊನಾ ಕೋವಿಡ್ -೧೯ ಎನ್ನುವ ಭಯಾನಕ ಸಾಂಕ್ರಾಮಿಕ ಕಾಯಿಲೆ ಜನರನ್ನು ಪೀಡಿಸುತ್ತಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತ ಹಾಗೂ ವೈದ್ಯರ ಜೊತೆಗೆ ನಿಲ್ಲುವುದು ಸರ್ಜಿಕಲ್ಸ್ ಸಂಸ್ಥೆಯ ಜವಾಬ್ಧಾರಿ ಎಂದು ಭಾವಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಕೋವಿಡ್ -೧೯ರ ನಿರ್ಮೂಲನೆಗೆ ಪಣ ತೊಟ್ಟಿದ್ದೇವೆ ಎಂದರು.
ನಿರ್ದೇಶಕ ಪಾಂಡುರAಗ ಪಡಿಯಾರ್ ಮಾತನಾಡಿ ಕೊರೊನಾ ವಿರುದ್ಧದ ಹೋರಾಟಕ್ಕೆ ಸರ್ಕಾರ ಹಾಗೂ ಇಲಾಖೆಗಳು ಮುಂದಾಗಿದ್ದು, ಅವರ ಜೊತೆ ಕೈಜೋಡಿಸುವುದು ನಮ್ಮೆಲ್ಲರ ಕರ್ತವ್ಯ. ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.

About Post Author

error: