July 14, 2024

Bhavana Tv

Its Your Channel

ಸಂಗಮ್ ಜಂಕ್ಷನ್‌ಗೆ ಮೀನು ಮಾರಾಟ ಶಿಪ್ಟ್!

ಕುಂದಾಪುರ: ಕೊರೋನಾ ವೈರಸ್ ಹಿನ್ನೆಲೆ ಎಲ್ಲಡೆ ಲಾಕ್ ಡೌನ್ ಇದ್ದು ಇತ್ತೀಚೆಗಷ್ಟೆ ಸರಕಾರ ಮೀನುಗಾರಿಕೆಗೆ ಅನುಮತಿ ನೀಡಿತ್ತು. ಆದರೆ ಅಲ್ಲಲ್ಲಿ ಮೀನು ಮಾರಾಟ ಮಾಡುವಾಗ ಅಂತರ ಕಾಯ್ದುಕೊಳ್ಳದೆ ಗುಂಪುಗುoಪಾಗಿ ಸೇರುವುದು ಕಂಡುಬoದಿತ್ತು. ಅದಕ್ಕೆ ಕುಂದಾಪುರದಲ್ಲಿ ಅಧಿಕಾರಿಗಳು ಉತ್ತಮ ಮಾರ್ಗವೊಂದನ್ನು ಕಂಡುಕೊoಡಿದ್ದಾರೆ.

ಹಲವು ವರ್ಷಗಳಿಂದ ಕುಂದಾಪುರ ಹಳೆ ಬಸ್ಸು ನಿಲ್ದಾಣದ ಪುರಸಭೆ ಹಿಂಭಾಗದಲ್ಲಿ ಮೀನು ಮಾರುಕಟ್ಟೆ ಕಾರ್ಯಾಚರಿಸುತ್ತಿತ್ತು. ಆದರೆ ಜನತಾ ಕರ್ಫ್ಯೂ ದಿನದಿಂದ ಇಂದಿನವರೆಗೆ ಮೀನು ಮಾರುಕಟ್ಟೆ ಸ್ಥಗಿತಗೊಂಡಿದ್ದು ಸದ್ಯ ನಾಡಾ ದೋಣಿಯಿಂದ ಬರುವ ತಾಜಾ ಮೀನುಗಳು, ಸಿಗಡಿ, ಏಡಿ, ಇತರೆ ಮೀನುಗಳನ್ನು ಕುಂದಾಪುರದ ಸಂಗಮ್ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿಟ್ಟು ಮಾರಾಟ ಮಾಡಲಾಗುತ್ತಿದೆ. ಬೆಳಿಗ್ಗೆ ೭ ಗಂಟೆಯಿoದ ೧೧ ಗಂಟೆಯವರೆಗೆ ಮೀನು ಮಾರಾಟ ನಡೆಯುತ್ತದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಒತ್ತು…!

ಸಂಗಮ್ ಪರಿಸರದಲ್ಲಿ ಬೆಳಿಗ್ಗೆ ನಡೆಯುವ ಮೀನು ಮಾರಾಟ ಸಂದರ್ಭ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ನಿರ್ದೇಶನಗಳಿಲ್ಲದೆ ಹೆದ್ದಾರಿ ಬಳಿಯೇ ಪಾರ್ಕಿಂಗ್ ಮಾಡಿ ಮೀನು ಖರೀದಿಗೆ ಜನ ಮುಗಿಬೀಳುತ್ತಿದ್ದರು. ಬೆಳಿಗ್ಗೆನ ಸಮಯವಂತೂ ಗುಂಪು ಜನರು ಸೇರುವ ಕಾರಣ ಲಾಕ್ ಡೌನ್ ಆದೇಶ ಸಂಪೂರ್ಣ ಹಳ್ಳಹಿಡಿದಿತ್ತು. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು, ಎಎಸ್ಪಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಪೊಲೀಸ್, ಪುರಸಭೆಯವರ ಜಂಟಿಯಾಗಿ ಸಮರ್ಪಕ ವ್ಯವಸ್ಥೆ ಕಾರ್ಯ ನಡೆಸಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪೊಲೀಸ್ ಬ್ಯಾಂಡ್ ಬಳಸಿ ಭಾನುವಾರ ತಡರಾತ್ರಿಯವರೆಗೂ ಕುಂದಾಪುರ ಪಿಎಸ್‌ಐ ಹರೀಶ್ ಆರ್. ನಾಯ್ಕ್, ಎಎಸ್‌ಐ ಸುಧಾಕರ್ ಹಾಗೂ ಸಿಬ್ಬಂದಿಗಳು, ಪುರಸಭೆ ಸದಸ್ಯ ಶ್ರೀಧರ್ ಸೇರುಗಾರ್ ಮೊದಲಾದವರು ಆಯಕಟ್ಟಿನ ಜಾಗ ಸಿದ್ದಪಡಿಸಿ ಪ್ರತ್ಯೇಕ ಸರತಿ ಸಾಲು, ಅಂತರ ಕಾಯ್ದುಕೊಳ್ಳಲು ವೃತ್ತ ನಿರ್ಮಾಣ ಮಾಡಿದ್ದರು.
ಗೊಂದಲವಿಲ್ಲ….ಸುವ್ಯವಸ್ಥಿತ ಮಾರಾಟ..!

ಸೋಮವಾರ ಬೆಳಿಗ್ಗೆ ಮೀನು ಮಾರಾಟ ಎಂದಿಗಿAತ ಸುಗಮವಾಗಿ ಸಾಗಿತ್ತು. ಪ್ರತ್ಯೇಕ ಸಾಲು, ನಿಲ್ಲಲು ವೃತ್ತಗಳು ಇದ್ದರಿಂದ ಜನರು ಸಾವಕಾಶವಾಗಿ ಆಗಮಿಸಿ ಖರೀದಿಯಲ್ಲಿ ತೊಡಗಿಸಿಕೊಂಡರು. ಸಂಗಮ್ ಜಂಕ್ಷನ್ ಬಳಿ ಹೆದ್ದಾರಿ ಸಮೀಪದ ಸರ್ವೀಸ್ ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಯೇ ಸಮೀಪ ತರಕಾರಿ, ಹಣ್ಣು ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿತ್ತು.ಇಂದು ಸ್ಥಳಕ್ಕೆ ಭೇಟಿ ನೀಡಿದ ಕುಂದಾಪುರ ಎಸಿ ರಾಜು ಕೆ. ವ್ಯವಸ್ತೆ ಪರಿಶೀಲಿಸಿದರು. ಸೂಕ್ತ ಬೆಲೆಗೆ ಮೀನು ಮಾರಾಟ ಮಾಡಿ, ಅಂತರ ಕಾಯ್ದುಕೊಂಡು ವ್ಯಾಪಾರ ನಡೆಸುವಂತೆ ಮೀನು ವ್ಯಾಪಾರಸ್ಥರಿಗೆ ಪಿಎಸ್‌ಐ ಹರೀಶ್ ಆರ್. ನಾಯ್ಕ್ ಸೂಚಿಸಿದರು. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

error: