September 18, 2024

Bhavana Tv

Its Your Channel

ಹೃದಯ ಕಾಯಿಲೆಗೂ, ಕೋವಿಡ್‌ಗೂ ನೇರ ಸಂಬoಧವಿಲ್ಲ – ಡಾ. ಪದ್ಮನಾಭ ಕಾಮತ್

ಹೊನ್ನಾವರ ಎ. ೧೬ : ಹಲವಾರು ಹೃದಯ ರೋಗಿಗಳು ಕೋವಿಡ್‌ಗೆ ಮತ್ತು ಹೃದಯ ರೋಗಕ್ಕೆ ಸಂಬoಧವಿದೆಯೇ ಎಂದು ದೂರವಾಣಿಯಲ್ಲಿ ಪ್ರಶ್ನಿಸುತ್ತಿದ್ದಾರೆ. ಈ ಎರಡೂ ರೋಗಗಳಿಗೆ ನೇರ ಸಂಬAಧವಿಲ್ಲ. ಗಾಬರಿ ಬೇಡ ಎಂದು ಮಂಗಳೂರು ಕೆಎಂಸಿಯ ಹೃದಯ ವಿಭಾಗದ ಮುಖ್ಯಸ್ಥ ಡಾ. ಪದ್ಮನಾಭ ಕಾಮತ್ ಹೇಳಿದ್ದಾರೆ. ಅವರು ದೂರವಾಣಿಯಲ್ಲಿ ಸಂದರ್ಶನ ನೀಡಿ ಹೀಗೆ ಹೇಳಿದರು.
ವಯಸ್ಸು ೭೦ದಾಟಿದವರಿಗೆ, ಸಾಧಾರಣವಾಗಿ ಹೃದಯ ಸಮಸ್ಯೆ ಇರುತ್ತದೆ. ಇನ್ನೂ ಕೆಲವರಿಗೆ ಅನಿಯಂತ್ರಿತ ಮಧುಮೇಹ ಇರುತ್ತದೆ. ಕೆಲವರಿಗೆ ಅದಾಗಲೇ ಹೃದಯಾಘಾತ ಆಗಿರುತ್ತದೆ. ಇಂಥವರಲ್ಲಿ ವಯಸ್ಸಿಗೆ ಮತ್ತು ಕಾಯಿಲೆಗೆ ಅನುಗುಣವಾಗಿ ರೋಗನಿರೋಧಕ ಶಕ್ತಿ ಕಡಿಮೆಯಿರುವುದರಿಂದ ಕೋವಿಡ್ ಸೋಂಕು ಬೇಗ ತಗುಲುವ ಸಾಧ್ಯತೆ ಇರುತ್ತದೆಯೇ ವಿನಃ ನೇರ ಸಂಬAಧ ಇರುವುದಿಲ್ಲ. ಆದ್ದರಿಂದ ಈ ದೇಶದ ಪ್ರಧಾನಿಗಳೂ, ಎಲ್ಲ ವೈದ್ಯರೂ ಹೇಳುವುದು ಇಂತಹ ಸಮಸ್ಯೆಯುಳ್ಳವರು ಮನೆಯಲ್ಲಿಯೇ ಇರಿ ಎಂಬುದಾಗಿದೆ.
ಹೃದಯ ಸಮಸ್ಯೆ ಉಂಟಾದರೆ ಎದೆ ನೋವು ಬರುತ್ತದೆ. ಮೊದಲು ಎದೆನೋವು ಎಂದು ಹೇಳುತ್ತ ಬರುತ್ತಿದ್ದವರು ಈಗ ದಮ್ಮು ಬಂದಿದೆ, ಉಸಿರು ಕಟ್ಟುತ್ತದೆ ಎಂದು ಹೇಳುತ್ತ ಬರುತ್ತಿದ್ದಾರೆ. ಇಂತವರನ್ನು ಮೊದಲು ಕೋವಿಡ್ ತಂಡ ಪರೀಕ್ಷೆ ಮಾಡುವುದು ಅನಿವರ‍್ಯವಾಗುತ್ತದೆ. ಒಂದು ದಿನದ ನಂತರ ಕೋವಿಡ್ ಇಲ್ಲ ಎಂದಾದ ಮೇಲೆ ಹೃದಯ ತಪಾಸಣೆಗೆ ಬರುತ್ತಾರೆ. ಶೇ. ೧೦ರಲ್ಲಿ ೮ರಷ್ಟು ರೋಗಿಗಳು ದಮ್ಮು ಎಂದು ಹೇಳುತ್ತ ಬರುತ್ತಿರುವುದು ಹೆಚ್ಚಾಗಿದೆ. ಆದ್ದರಿಂದ ಗಾಬರಿಪಡದೆ, ತಮಗೆ ಆಗುವ ತೊಂದರೆಯನ್ನು ಗಮನವಿಟ್ಟು ಸಂಬAಧಪಟ್ಟ ವೈದ್ಯರನ್ನು ಕಾಣಬೇಕು. ಹೃದಯ ಸಮಸ್ಯೆ, ಎದೆ ನೋವು ಇದ್ದವರಿಗೆ ನಮ್ಮ ತಂಡ ಎಲ್ಲ ಸಮಯದಲ್ಲಿ ಚಿಕಿತ್ಸೆ ನೀಡಲು ಸಿದ್ಧವಿದೆ, ಗಾಬರಿ ಬೇಡ ಎಂದು ಅವರು ಹೇಳಿದ್ದಾರೆ.

error: