April 27, 2024

Bhavana Tv

Its Your Channel

ನಾಳೆ ದಿ.ಕಾಳಿಂಗ ನಾವುಡ ಸಂಸ್ಮರಣಾ ಕಾರ್ಯಕ್ರಮ

??????

ಉಡುಪಿ: ಯಕ್ಷಗಾನ ಭಾಗವತಿಗೆಯಲ್ಲಿ ಕ್ರಾಂತಿ ಪುರುಷ ಎನಿಸಿಕೊಂಡ, ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿಯ ವಿದ್ಯಾರ್ಥಿಯಾಗಿ ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರ ಶಿಷ್ಯರಾಗಿದ್ದ ದಿ| ಕಾಳಿಂಗ ನಾವುಡರ ಸಂಸ್ಮರಣಾ ಕಾರ್ಯಕ್ರಮವು ಮೇ 26 ರಂದು ಯಕ್ಷಗಾನ ಕಲಾಕೇಂದ್ರದ ಗುಂಡ್ಮಿಯಲ್ಲಿರುವ ಸದಾನಂದ ರಂಗ ಮಂಟಪದಲ್ಲಿ ಆಯೋಜಿಸಲಾಗಿದೆ.
ಅಂದು ಸಂಜೆ ಗಂಟೆ 5-00 ಕ್ಕೆ ಪ್ರಾರಂಭವಾಗುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಮರಣಾ ಸಮಿತಿಯ ಆಧ್ಯಕ್ಷರಾದ ಪಟ್ಟಣ ಪಂಚಾಯತ್ ಸದಸ್ಯರಾದ ರಾಜು ಪೂಜಾರಿಯವರು ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೈದರಾಬಾದಿನ ಖ್ಯಾತ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ,ಉಡುಪಿಯ ತಲ್ಲೂರು ಫ್ಯಾಮಿಲಿ ಟ್ರಸ್ಟನ ಡಾ| ತಲ್ಲೂರು ಶಿವರಾಮ ಶೆಟ್ಟಿ, ಕಲಾಕೇಂದ್ರದ ಗೌರವಾಧ್ಯಕ್ಷರಾದ ಆನಂದ ಸಿ. ಕುಂದರ್, ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಾಳಿಂಗ ನಾವಡರ ಸಹೋದರ ಗಣಪಯ್ಯ ನಾವಡರು ಭಾಗವಹಿಸಲಿದ್ದಾರೆ.
ಕಾಳಿಂಗ ನಾವಡರ ಕುರಿತು ನೆನಪಿನ ಮಾತುಗಳನ್ನು ಹಿರಿಯ ಯಕ್ಷಗಾನ ಕಲಾವಿದ, ನಾವುಡರ ಸಹವರ್ತಿ ಕೊಂಡದಕುಳಿ ರಾಮಚಂದ್ರ ಹೆಗಡೆಯವರು ಮಾಡಲಿದ್ದಾರೆ. ಕಾಳಿಂಗ ನಾವುಡರ ನೆನಪಿನಲ್ಲಿ ಕೊಡಮಾಡುವ “ನಮ್ಮ ಕಾಳಿಂಗ” ಪ್ರಶಸ್ತಿಯನ್ನು ಹಿರಿಯ ಕಲಾವಿದ, ಒಡನಾಡಿ ಎಂ.ಎ.ನಾಯ್ಕರಿಗೆ ಪ್ರದಾನ ಮಾಡಲಿದ್ದು, ಸಭಾಕಾರ್ಯಕ್ರಮದ ನಂತರ ಮಯ್ಯ ಯಕ್ಷ ಬಳಗದವರಿಂದ ವಿಜಯ ವಿಸ್ಮಯ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆಯಂದು ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ತಿಳಿಸಿರುತ್ತಾರೆ.

error: