April 26, 2024

Bhavana Tv

Its Your Channel

ಕೊರೋನಾ ಸೋಂಕಿನಿoದ ಮುಕ್ತಿ ಪಡೆದು ಬಿಡುಗೊಂಡ ಭಟ್ಕಳದ ಗರ್ಭೀಣಿ; ಅನುಭವ ಹಂಚಿಕೊoಡ ಗರ್ಭೀಣಿ,

ಉಡುಪಿ: ವಿದೇಶದಿಂದ ಬಂದ ಪತಿಯಿಂದಾಗಿ ಕೊರೋನಾ ಸೋಂಕು ಪಡೆದುಕೊಂಡಿದ್ದ ಭಟ್ಕಳದ ೨೬ವರ್ಷದ ಗರ್ಭಿಣಿಯೊಬ್ಬರು ಉಡುಪಿಯ ಕೋವಿಡ್-೧೯ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಶುಕ್ರವಾರದಂದು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡರು.

ನಂತರ ತನ್ನ ಅನುಭವವನ್ನು ಮಾಧ್ಯಮ ಪ್ರತಿನಿಧಗಳೊಂದಿಗೆ ಹಂಚಿಕೊAಡಿರುವ ಅವರು ಇಲ್ಲಿ ನಾನು ಆರಂಭದಲ್ಲಿ ತುಂಬ ಆತಂಕಿತಳಾಗಿದ್ದೆ. ಆದರೆ ನಂತರದ ದಿನಗಳಲ್ಲಿ ನಾನು ನನ್ನ ಮನೆಯಲ್ಲಿದ್ದೇನೆ ಎನ್ನುವ ಅನುಭವಾಯಿತು. ಇಲ್ಲಿ ವೈದ್ಯರ ಆತ್ಮೀಯತೆಯಿಂದಾಗಿ ನನಗೆ ಸೋಂಕಿನ ಕುರಿತು ಯಾವುದೇ ಭಯ ಇರಲಿಲ್ಲ ಎಂದರು.

ಗಲ್ಫ್ ದೇಶದಿಂದ ಮರಳಿದ ಪತಿಯಿಂದಾಗಿ ಕೊರೋನ ಸೋಂಕಿಗೆ ತುತ್ತಾಗಿದ್ದ ೨೬ರ ಹರೆಯದ ಗರ್ಭಿಣಿಯನ್ನು ವಿಶೇಷ ಪ್ರಕರಣ ಎಂಬುದಾಗಿ ಪರಿಗಣಿಸಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕ ಚೇತರಿಸಿಕೊಂಡ ಅವರ ಎರಡು ಪರೀಕ್ಷಾ ವರದಿಗಳು ನೆಗೆಟಿವ್ ಬಂದ ಹಿನ್ನೆಲೆ ಯಲ್ಲಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಜಿಲ್ಲಾಡಳಿತದ ಪರವಾಗಿ ಗರ್ಭಿಣಿ ಮಹಿಳೆಯನ್ನು ಮಲ್ಲಿಗೆ ಹೂ, ಹಣ್ಣು ಹಂಪಲು ಹಾಗೂ ಸಿಹಿ ತಿಂಡಿ ನೀಡಿ ಬಿಳ್ಕೋಡಲಾಯಿತು. ಈ ಸಂದರ್ಭ ದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್, ಎಸ್ಪಿ ವಿಷ್ಣುವರ್ದನ್, ಜಿಪಂ ಸಿಇಒ ಪ್ರೀತಿ ಗೆಹ್ಲೋಟ್, ಡಿಎಚ್‌ಒ ಮೊದಲಾದವರು ಹಾಜರಿದ್ದರು.

ಉಡುಪಿ ಜಿಲ್ಲೆಗೆ ಇಂದು ಶುಭ ದಿನ ಹಾಗೂ ಶುಭ ಸುದ್ದಿ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅಸಾಧ್ಯ ಎಂಬುದಾಗಿ ಉಡುಪಿ ಕೋವಿಡ್ ಆಸ್ಪತ್ರೆಗೆ ಕರೆತಂದಿದ್ದ ಈ ಪ್ರಕರಣವನ್ನು ಸವಾಲು ಆಗಿ ಸ್ವೀಕರಿಸಿ ಚಿಕಿತ್ಸೆ ನೀಡಲಾಗಿದೆ. ಈಗ ಆಕೆ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ತಮ್ಮ ಮನೆಗೆ ತೆರಳಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ನೀಡಿದ ಅತ್ಯುತ್ತಮ ಸೇವೆಗೆ ಗರ್ಭಿಣಿ ಮಹಿಳೆ, ವೈದ್ಯರು, ನರ್ಸ್ಗಳು ಹಾಗೂ ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸಿದರು

error: