October 5, 2024

Bhavana Tv

Its Your Channel

ಮೂರು ಹೊಸ ಪ್ರಕರಣ ಸೇರಿ ಉಡುಪಿಯಲ್ಲಿ 111ಕ್ಕೇರಿದ ಸೋಂಕಿತರು

ಉಡುಪಿ : ಜಿಲ್ಲೆಯಲ್ಲಿ 32 ಸೋಂಕು ಪ್ರಕರಣಗಳ ಮೂಲಕ ನಿನ್ನೆ ಶತಕದ ಗಡಿ ದಾಟಿದ್ದ ಇಂದು ಮತ್ತೆ 3 ಹೊಸ ಪ್ರಕರಣಗಳು ದೃಢವಾಗಿದೆ.
ಸೋಂಕಿತರು ಮಹಾರಾಷ್ಟ್ರದಿಂದ ಬಂದಿದ್ದು ಅವರಲ್ಲಿ 9 ವರ್ಷದ ಮಗು ಸೇರಿ 27 ವರ್ಷದ ಪುರುಷ , 30 ವರ್ಷದ ಮಹಿಳೆ ಯಲ್ಲಿ ಸೋಂಕು ತಗುಲಿದು ಎಲ್ಲರು ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಸ್ಪಷ್ಟ ಪಡಿಸಿದ್ದಾರೆ.
ಈ ತಿಂಗಳ ಆರಂಭದವರೆಗೂ ಕೇವಲ ಮೂರು ಸೋಂಕು ಪ್ರಕರಣಗಳನ್ನು ಹೊಂದಿದ್ದ ಉಡುಪಿ ಜಿಲ್ಲೆಯಲ್ಲಿ ಸದ್ಯ ಸೋಂಕಿತರ ಸಂಖ್ಯೆ ಅಪಾಯಕಾರಿ ಮಟ್ಟದಲ್ಲಿ ಏರಿಕೆ ಕಾಣುತ್ತಿದೆ. ಸೋಮವಾರ ಒಂದೇ ದಿನ 32 ಹೊಸ ಸೋಂಕು ಪ್ರಕರಣಗಳು ಕಂಡು ಬಂದಿದ್ದವು.
ಉಡುಪಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 111ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಕಂಡು ಬರುತ್ತಿರುವ ಹೆಚ್ಚಿನ ಪ್ರಕರಣಗಳು ಮಹಾರಾಷ್ಟ್ರದಿಂದ ಆಗಮಿಸುತ್ತಿರುವವರಿಂದ ಆಗುತ್ತಿದೆ. ಅದರಲ್ಲೂ ಹತ್ತು ವರ್ಷಕ್ಕಿಂತ ಸಣ್ಣ ಪ್ರಾಯದ ಮಕ್ಕಳಿಗೆ ಹೆಚ್ಚಾಗಿ ಸೋಂಕು ಕಾಣಿಸಿಕೊಳ್ಳುತ್ತಿದೆ.

source: News Hunt

error: