April 26, 2024

Bhavana Tv

Its Your Channel

ಠಾಣಾದಿಕಾರಿಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೋಲೀಸ್ ಉಪ ವರಿಷ್ಠಾಧಿಕಾರಿ ಯವರಿಗೆ ಮನವಿ

ಕಾರ್ಕಳ : ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ ಕಾರ್ಕಳದ ಹೀರ್ಗಾನ ರಾಧಾಕೃಷ್ಣ ನಾಯಕ್ ರವರ ಮೇಲೆ ಒಂದು ವರ್ಷದ ಹಿಂದಿನ ನಕಲಿ ಪ್ರಕರಣದಡಿಯಲ್ಲಿ ಕಾರ್ಕಳ ನಗರ ಠಾಣೆಗೆ ಕರೆಸಿ ಹಲ್ಲೆ ನಡೆಸಿದ ಪ್ರಕರಣದ ವಿರುಧ್ದ ಬ್ಲಾಕ್ ಕಾಂಗ್ರಸ್ ಕಾರ್ಕಳ, ಹೆಬ್ರಿ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಕಾರ್ಕಳದ ಬಂಡಿಮಠದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಮಂಜುನಾಥ ಪೂಜಾರಿ ಮಾತಾಡಿ ಕಾರ್ಕಳದಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕಾಂಗ್ರೆಸ್ ಪಕ್ಷದ ವರ್ಚಸ್ಸನ್ನು ಸಹಿಸಲಾಗದೆ ನಕಲಿ ಫೇಸ್ ಬುಕ್ ಖಾತೆ ನಿರ್ಮಿಸಿ ಅವರನ್ನು ಹೆಣೆಯಲು ನೋಡುತ್ತಿದೆ. ಇದರ ಹಿಂದೆ ಇಲ್ಲಿನ ಶಾಸಕರ ಪಿತೂರಿ ಇದೆ ಎಂದು ಹೇಳಿದರು.
ಜಿಲ್ಲಾ ವಕ್ತಾರ ಬಿಪಿನಚಂದ್ರ ಪಾಲ್ ಮಾತಾಡಿ ಆಡಳಿತ ನಡೆಸುವ ಅಧಿಕಾರಿಗಳು ತಮ್ಮ ೬೦ ವರ್ಷಗಳ ಶಾಶ್ವತ ಅಧಿಕಾರವನ್ನು ರಾಜಕೀಯದ ೫ ವರ್ಷಗಳ ಅಧಿಕಾರಕ್ಕೆ ಶರಣಾಗಿಸ ಬಾರದು. ಶಾಸಕ ಸುನೀಲ್ ಕುಮಾರ್ ರವರ ಪ್ರಚೋದನೆಯೇ ಈ ಪ್ರಕರಣಕ್ಕೆ ಕಾರಣವಾಗಿದ್ದು ಅವರಿಗೆ ಕಾಂಗ್ರೆಸ್ ಪಕ್ಷ ಮತ್ತು ಪಕ್ಷದ ನಾಯಕರ ರಾಷ್ಟ್ರ ಪ್ರೇಮದ ಬಗ್ಗೆ ಪ್ರಶ್ನಿಸುವ ನೈತಿಕ ಹಕ್ಕಿಲ್ಲ ಎಂದರು.
ಪುರಸಭಾ ಸದಸ್ಯ ಶುಭದಾ ರಾವ್ ಮಾತಾಡಿ ನಮ್ಮ ಹೋರಾಟ ಪೊಲೀಸ್ ಇಲಾಖೆಯ ವಿರುದ್ಧವಲ್ಲ. ಒಂದು ಸುಳ್ಳು ಪ್ರಕರಣದಡಿಯಲ್ಲಿ ಅಮಾಯಕ ಕಾಂಗ್ರೆಸ್ ಕಾರ್ಯಕರ್ತನೊಬ್ಬನನ್ನು ಠಾಣೆಗೆ ಕರೆಸಿ ಅಮಾನವೀಯವಾಗಿ ಹಲ್ಲೆ ನಡೆಸಿದ ಒಬ್ಬ ಪೊಲೀಸ್ ಅಧಿಕಾರಿಯ ವಿರುದ್ದ. ನಕಲಿ ಖಾತೆ ತೆರದು ದೇಶದ ಸೈನಿಕರನ್ನು ನಿಂದಿಸಿದ ನಕಲಿ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸುವ ಬದಲು ಖಾತೆದಾರನನ್ನೆ ಶಿಕ್ಷಿಸುವುದು ಯಾವ ನ್ಯಾಯ ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ಅದ್ಯಕ್ಷ ದೀಪಕ್ ಕೋಟ್ಯಾನ್, ಡಿಸಿಸಿ ಉಪಾಧ್ಯಕ್ಷ ಕಿಶನ್ ಹೆಗ್ಡೆ ಮಾತಾಡಿ ನಗರ ಠಾಣಾಧಿಕಾರಿ ಮಧು ಇವರನ್ನು ಕೂಡಲೆ ಅಮಾನಾತು ಗೊಳಿಸ ಬೇಕು ಎಂದು ಒತ್ತಾಯಿಸಿದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ರವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ ಇನ್ನಾ, ಜಿಲ್ಲಾ ಇಂಟಕ್ ಅಧ್ಯಕ್ಷ ಮುರಳಿ ಶೆಟ್ಟಿ, ಡಿಸಿಸಿ ಕಾರ್ಯದರ್ಶಿ ಹರೀಶ್ ಕಿಣಿ, ಜಿಲ್ಲಾ ಸಾಮಾಜಿಕ ಜಾಲತಾಣದ ರೋಷನ್ ಸೆಟ್ಟಿ, ಯತೀಶ್ ಕರ್ಕೇರ, ಬ್ಲಾಕ್ ಕಾಂಗ್ರೆಸ್ ವಿವಿಧ ಘಟಕಗಳ ಅಧ್ಯಕ್ಷರು, ಮಾಜಿ ಪುರಸಬಾ ಅಧ್ಯಕ್ಷರುಗಳಾದ ಸುಭೀತ್ ಕುಮಾರ್ , ರೆಹಮತ್ ಶೇಖ್, ಪ್ರತಿಮಾ ಹಾಗೂ ಪುರಸಭಾ ಸದಸ್ಯರು, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು, ಗ್ರಾಮ ಪಂಚಾಯತು ಹಾಗೂ ಗ್ರಾಮೀಣ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಪೋಲೀಸ್ ಉಪ ವರಿಷ್ಠಾಧಿಕಾರಿ ವಿಜಯಪ್ರಸಾದ್ ರವರಿಗೆ ನಗರ ಠಾಣಾದಿಕಾರಿಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯ್ತು.

error: