May 21, 2024

Bhavana Tv

Its Your Channel

ಕೊರೊನಾ ಪ್ರಕರಣಗಳು ಹೆಚ್ಚಳವಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಿ- ಶಾಸಕ ವಿ.ಸುನೀಲ್‌ಕುಮಾರ್ ಸೂಚನೆ

ಕಾರ್ಕಳ: ತಾಲೂಕಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳವಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮವಾಗಿ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಾಲೂಕು ಆಡಳಿತಕ್ಕೆ ಶಾಸಕ ಹಾಗೂ ಸರಕಾರದ ಮುಖ್ಯ ಸಚೇತಕ ವಿ.ಸುನೀಲ್‌ಕುಮಾರ್ ಸೂಚಿಸಿದರು.
ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ ರವಿವಾರ ಮಧ್ಯಾಹ್ನ ಅಧಿಕಾರಿಗಳ ಮಟ್ಟದಲ್ಲಿ ಏರ್ಪಡಿಸಲಾಗಿದ್ದ ತುರ್ತು ಸಭೆಯಲ್ಲಿ ತಾಲೂಕಿನಲ್ಲಿ ಕೋವಿಡ್ ಪ್ರಕರಣ, ಚಿಕಿತ್ಸಾ ವಿಧಾನ, ಲಸಿಕೆ ನೀಡುವ ಕುರಿತು
ಅಧಿಕಾರಿಗಳಿಂದ ಮಾಹಿತಿ ಪಡೆದರು.

ತಾಲೂಕು ಆರೋಗ್ಯಧಿಕಾರಿ ಡಾ.ಕೃಷ್ಣಾನಂದ ಅವರು ಸಭೆಗೆ ಮಾಹಿತಿ ನೀಡಿ ತಾಲೂಕಿನಲ್ಲಿ ಇದುವರೆಗೆ ೨೪೬ ಆಕ್ಟೀವ್ ಪ್ರಕರಣ ಇದ್ದು, ಸೋಂಕು ತಡೆಗೆ ಅಗತ್ಯವಿದ್ದ ಕಡೆಗಳಲ್ಲಿ ಸೀಲ್ಡ್ಡೌನ್ ಮಾಡಿ ಆಹಾರ ಕಿಟ್ ವಿತರಿಸುವಂತೆ ಸೂಚಿಸಿದರು. ಕೊರೊನಾ ಸೋಂಕು ಹೆಚ್ಚಾಗದಂತೆ ಆರಂಭ ಹಂತದಲ್ಲೆ ಜಾಗೃತೆ ವಹಿಸಬೇಕು. ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದ ಅವರು ಲಸಿಕೆ ಹೆಚ್ಚಳ, ಆಕ್ಟೀವ್ ಪ್ರಕರಣಗಳ ಮೂಲ ಪತ್ತೆಗೆ ಟ್ರೇಸಿಂಗ್ ಮಾಡುವಂತೆ ಹೇಳಿದರು.
ಆಸ್ಪತ್ರೆಯಲ್ಲಿ ಎಲ್ಲ ವಿಭಾಗಗಳನ್ನು ನಿಗಾದಲ್ಲಿಡುವುದು. ಆಸ್ಪತ್ರೆಗೆ ಬರುವ ಸಾರ್ವಜನಿಕ ರೋಗಿಗಳ ಅನುಕೂಲಕ್ಕೆ ಆಸ್ಪತ್ರೆ ಆವರಣದಲ್ಲಿ ತಾತ್ಕಾಲಿಕ ಸಹಾಯ ಕೇಂದ್ರ ತೆರೆಯುವುದು. ಕೇಂದ್ರಕ್ಕೆ ಅಗತ್ಯ ವೈದ್ಯರನ್ನು ನಿಯೋಜಿಸುವಂತೆ ಅವರು ಸೂಚಿಸಿದರು. ಮಕ್ಕಳ ಮೇಲಿನ ಹಾನಿ ತಪ್ಪಿಸಲು ಸಾಕಷ್ಟು ಮುಂಜಾಗೃತೆ ವಹಿಸುವಂತೆ ಸೂಚಿಸಿದರು.
ಮಕ್ಕಳ ಐಸಿಯು ಬೆಡ್ ತೆರೆಯುವ ಸ್ಥಳ, ಆಕ್ಸಿಜನ್ ಜನರೇಟರ್ ಕೊಠಡಿಗಳನ್ನು ಶಾಸಕರು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಧಿಕಾರಿ ಡಾ. ನಾಗಭೂಷಣ ಉಡುಪ, ತಹಶೀಲ್ದಾರ್ ಪ್ರಕಾಶ್ ಮರಬಳ್ಳಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್, ಪುರಸಭೆ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ವೈದ್ಯರಾದ ಡಾ.ಉದಯಕುಮಾರ್, ಡಾ. ಜೋಸ್ನ, ಹಿರಿಯ ಆರೋಗ್ಯ ಸಹಾಯಕ ಶಿವರಾಮ ರಾವ್, ನಿರ್ಮಿತಿ ಕೇಂದ್ರದ ಅಧಿಕಾರಿ ಪವನ್‌ಮೊದಲಾದವರು ಉಪಸ್ಥಿತಿರಿದ್ದರು.

ವರದಿ: ಅರುಣ ಭಟ್ಟ ಕಾರ್ಕಳ

error: