May 17, 2024

Bhavana Tv

Its Your Channel

ಬಡ ಕುಟುಂಬದಲ್ಲಿ ಓದುತ್ತಿದ್ದ ಮೂರು ಮಕ್ಕಳಿಗೆ ಸೋಲಾರ್ ಬೆಳಕಿನ ನೆರವು ನೀಡಿದ ಉಡುಪಿ ಡಿಡಿಪಿಐ

ಕಾರ್ಕಳ : ಬ್ರಹ್ಮಾವರ ತಾಲೂಕಿನ ಮರವಂತೆ ಸಮೀಪದ ಹೆಗ್ಗುಂಜೆ ಗ್ರಾಮದಲ್ಲಿ ಮುರಾರಿ ಮತ್ತು ಪ್ರಭಾವತಿ ಮರಾಠಿ ದಂಪತಿಗಳು ವಾಸವಾಗಿದ್ದರು. ಈ ಕುಟುಂಬದಲ್ಲಿ ಮೂವರು ಮಕ್ಕಳಾದ ಅನೀಶ ೭ನೇ ತರಗತಿ, ಅಕ್ಷತಾ ೬ನೇ ತರಗತಿ, ಆಶೀಸ್ ೫ನೇ ತರಗತಿಯಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆ(ಅನುದಾನಿತ) ಮಂದಾರ್ತಿ ತಾ: ಬ್ರಹ್ಮಾವರ ದಲ್ಲಿ ಓದುತ್ತಿದ್ದರು. ಇವರ ಓದಿಗೆ ವಿದ್ಯುತ್ ಬೆಳಕಿನ ವ್ಯವಸ್ಥೆ ಇದ್ದಿಲ್ಲ. ಅವರು ತಮ್ಮ ಅಭ್ಯಾಸವನ್ನು ಕತ್ತಲೆ ಬೆಳಕಿನಲ್ಲಿ ಮಾಡುತ್ತಿದ್ದರು. ಈ ವಿಷಯ ಪತ್ರಿಕೆಯಲ್ಲಿ ಪ್ರಸಾರವಾದದ್ದನು ಗಮನಿಸಿದ ಉಡುಪಿ ಡಿ.ಡಿ.ಪಿ.ಐ ಮನನೊಂದ್ದು ನಾನು ೧ ನೇ ತರಗತಿಯಿಂದ ಬಿ.ಇಡಿ ಪದವಿ ಮುಗಿಸುವವರೆಗೆ ದೀಪದ ಬೆಳಕಲ್ಲೇ ಓದಿದ್ದೆ. ದೀಪದ ಬೆಳಕಿನ ಓದಿನ ಕಷ್ಟವು ನನಗೆ ಅರಿವಿದ್ದು. ಇದರಿಂದ ಆ ವಿದ್ಯಾರ್ಥಿಗಳಿಗೆ ಭಾನುವಾರ ಕುಟುಂಬ ಸಮೇತ ಹೆಗ್ಗುಂಜೆ ಗ್ರಾಮದಲ್ಲಿರುವ ಮುರಾರಿ ಮನೆಗೆ ಹೋಗಿ ಅವರ ಓದಿಗಾಗಿ ಒಂದು ಸೋಲಾರ್ ಲ್ಯಾಂಪ್ ಉಚಿತವಾಗಿ ನೀಡಿ ಬಂದಿದ್ದೇನೆ. ಅವರ ಕಲಿಕೆಗೆ ಬೇರೆ ಏನಾದರೂ ತೊಂದರೆ ಇದ್ದರೆ ತಿಳಿಸಿ ಬಂದಿರುವೆನು. ಉತ್ತಮ ಕಲಿಕೆ ಮಾಡಲು ಮೂರು ಮಕ್ಕಳಿಗೆ ತಿಳಿಸಿರುವೆನು. ಈ ಪುಟ್ಟ ಕಾರ್ಯವು ನಮ್ಮ ಕುಟುಂಬಕ್ಕೆ ಅತೀವ ಸಂತೋಷ ನೀಡಿದೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ

ವರದಿ:ಅರುಣ ಭಟ್ಟ ಕಾರ್ಕಳ

error: