May 21, 2024

Bhavana Tv

Its Your Channel

ವಾತ್ಸಲ್ಯದಿಂದ ಕೊರೊನಾ ದೂರ :ಡಾ ಕಿಶನ್ ಆಳ್ವ

ಮುಂಡ್ಕೂರು :ಕೊರೊನಾ ವ್ಯಾಧಿಯ ಮೂರನೆಯ ಅಲೆಯಿಂದ ಮಕ್ಕಳನ್ನು ರಕ್ಷಿಸುವ ನಿಟ್ಟಿನಲ್ಲಿ ಕಾರ್ಕಳ ಶಾಸಕ ವಿ.ಸುನಿಲ್‌ಕುಮಾರ್ ಹಮ್ಮಿಕೊಂಡ ವಾತ್ಸಲ್ಯ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿದ್ದು ಈ ಕಾರ್ಯಕ್ರಮದ ಪರಿಣಾಮಕಾರೀ ಅನುಷ್ಠಾನದಿಂದ ಕೊರೊನಾ ಹಿಮ್ಮೆಟ್ಟುವುದು ಖಂಡಿತ ಎಂದು ಮಂಗಳೂರಿನ ಖ್ಯಾತ ಮಕ್ಕಳ ತಜ್ಞ , ‘ಕ್ಷೇಮ’ದ ಸಹಾಯಕ ಪ್ರಾಧ್ಯಾಪಕ ಡಾIIಪಿ.ಕಿಶನ್ ಆಳ್ವ ಹೇಳಿದರು.

ಅವರು ಮುಂಡ್ಕೂರಿನ ಶ್ರೀ ದುರ್ಗಾಪರಮೇಶ್ವರೀ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಕ್ಕಳ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ರಾಜ್ಯದಲ್ಲೇ ವಿಶಿಷ್ಠವಾದ ಈ ಕಾರ್ಯಕ್ರಮ ನಾಡಿನಾದ್ಯಂತ ವಿಸ್ತರಿಸಲು ಸರಕಾರ ಮುಂದಾಗ ಬೇಕು ಮತ್ತು ಕಾರ್ಕಳ ಶಾಸಕರ ಈ ಕಾರ್ಯಕ್ರಮದ ಯಶಸ್ಸಿಗೆ ತನ್ನಿಂದಾದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಬೆಳ್ಮಣ್ ಕ್ಷೇತ್ರದ ನಿಕಟಪೂರ್ವ ಜಿ.ಪಂ.ಸದಸ್ಯೆ ರೇಷ್ಮಾ ಉದಯ ಶೆಟ್ಟಿ ವಾತ್ಸಲ್ಯ ಕಾರ್ಯಕ್ರಮದ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿಗಳ ಎಲ್ಲಾ ಪುಟಾಣಿಗಳಿಗೆ ಪೌಷ್ಟಿಕಾಂಶಗಳ ಕಿಟ್ ವಿತರಿಸಲಾಯಿತು.
ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ವತಿಯಿಂದ ನೀಡಲಾದ, ಈ ವಾತ್ಸಲ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ಮಕ್ಕಳಿಗೆ ೫ ಉಪಯುಕ್ತ ವಸ್ತುಗಳನ್ನೊಳಗೊಂಡ ವಿಶೇಷ ಕಿಟ್‌ಗಳನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರವೀಂದ್ರ ಹೆಚ್.ಶೆಟ್ಟಿ ಮುಲ್ಲಡ್ಕಪರಾರಿ ಇವರು ವಿತರಿಸಿದರು. ಉದ್ಘಾಟಕರಾದ ಡಾIIಪಿ.ಕಿಶನ್ ಆಳ್ವರವರನ್ನು ಸಂಮಾನಿಸಿ ಗೌರವಿಸಲಾಯಿತು.
ಮುಂಡ್ಕೂರುಗ್ರಾಮ ಪಂಚಾಯತ್‌ಉಪಾಧ್ಯಕ್ಷ ಭಾಸ್ಕರ ಎಮ್.ಶೆಟ್ಟಿ ಸ್ವಾಗತಿಸಿದರು.ಕಾರ್ಕಳ ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ರಘುವೀರ್ ಶೆಣೈ ಪ್ರಸ್ತಾವನೆಗೈದರು. ಸಚ್ಚೇರಿಪೇಟೆ ಪ್ರಾಥಮಿಕÀ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾIIಸತೀಶ್‌ರಾವ್ ಕೊರೋನಾ ತಡೆಗಟ್ಟುವಿಕೆ ಮತ್ತು ಲಸಿಕಾ ಕಾರ್ಯಕ್ರಮದ ಮಾಹಿತಿ ನೀಡಿದರು.
ಕಾರ್ಕಳ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿಯ ವೈದ್ಯಾಧಿಕಾರಿ ಡಾIIಸ್ಮಿತಾ,ಕಾರ್ಕಳ ಸರಕಾರಿ ಆಸ್ಪತ್ರೆಯ ಮಕ್ಕಳ ತಜ್ಞೆ ಡಾIIಸೌಜನ್ಯಾ, ಶಿಕ್ಷಣ ಸಂಯೋಜಕ ಚಂದ್ರಕಾAತ ಡೇಸಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಂಡ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲಾಬಾಬು ಸಮಾರಂಭದ ಅಧ್ಯಕ್ಶತೆ ವಹಿಸಿದ್ದರು.
ಮುಂಡ್ಕೂರು ವಿ.ಎಸ್.ಎಸ್.ಎನ್‌ಇದರ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಅರುಣ್‌ಕುಮಾರ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಗ್ರಾಮಪಂಚಾಯತ್ ಸದಸ್ಯಎಂ.ದೇವಪ್ಪ ಸಪಳಿಗ ವಂದಿಸಿದರು.

error: