May 17, 2024

Bhavana Tv

Its Your Channel

ಕಾರ್ಕಳ ತಾಲೂಕು ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಸಂಘದ ವತಿಯಿಂದ ವರ್ಷದ ಶೈಕ್ಷಣಿಕ ಚಟುವಟಿಕೆಯ ಕುರಿತ ವಿಶೇಷ ಸಭೆ

ಕಾರ್ಕಳ ತಾಲೂಕು ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಸಂಘದ ವತಿಯಿಂದ ವರ್ಷದ ಶೈಕ್ಷಣಿಕ ಚಟುವಟಿಕೆಯ ಕುರಿತ ವಿಶೇಷ ಸಭೆಯು ಕಾರ್ಕಳದ ಶ್ರೀ ಮದ್ ಭುವನೇಂದ್ರ ಪ್ರೌಢಶಾಲೆಯ ವರದೇಂದ್ರ ಸಭಾಭವನದಲ್ಲಿ ನಡೆಯಿತು

ಈ ಸಭೆಯ ಅಧ್ಯಕ್ಷತೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ ಆಡಳಿತ ವಿಭಾಗ ಉಡುಪಿ ಇದರ ವಿದ್ಯಾಂಗ ಉಪನಿರ್ದೇಶಕರಾದ ಎನ್ ಎಚ್ ನಾಗೂರರವರು ವಹಿಸಿ ಉಡುಪಿ ಜಿಲ್ಲೆಯ ಶೈಕ್ಷಣಿಕ ಸಾಧನೆಗೆ ಕಾರ್ಕಳ ಶಿಕ್ಷಣ ವಲಯವೂ ಪ್ರತೀ ವಿಭಾಗದಲ್ಲೂ ಉತ್ತಮ ಸಾಧನೆಯನ್ನು ಮಾಡುತ್ತಿದ್ದು ಉಡುಪಿ ಜಿಲ್ಲೆಗೆ ಕೀರ್ತಿ ತರುತ್ತಿದ್ದಾರೆ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾದ ಕಾರ್ಕಳ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳಿಗೆ ಅಂತೆಯೇ ಚಟು ಟಿಕೆಗಳಿಗೆ ಇಲ್ಲಿನ ಪ್ರತೀ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರುಗಳ ಸಹಕಾರ ಮತ್ತು ಮಾರ್ಗದರ್ಶನ ನಿರಂತರವಾಗಿ ದೊರೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಉಡುಪಿ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದ ಉಪಪ್ರಾಂಶುಪಾಲರಾದ ಡಾ ಅಶೋಕ ಕಾಮತ್ ಉಪಸ್ಥಿತರಿದ್ದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಇವರನ್ನು ಇತ್ತೀಚೆಗೆ ಹಂಪಿ ವಿಶ್ವ ವಿದ್ಯಾಲಯ ನೀಡಿದ ಡಾಕ್ಟರೇಟ್ ಪದವಿ ಪಡೆದ ಸಾಧನೆಗೆ ತಾಲೂಕು ಮುಖ್ಯೋಪಾಧ್ಯಾಯರ ಸಂಘದಿAದ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ತಾಲೂಕು ಅಕ್ಷರ ದಾಸೋಹ ನಿರ್ದೇಶಕರಾದ ಭಾಸ್ಕರ್ ಟಿ ಉಪಸ್ಥಿತರಿದ್ದರು. ಕಾರ್ಕಳ ಶಿಕ್ಷಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಜಿ ನಾಯಕ್ ರವರು ಸಭೆಗೆ ಎಲ್ಲರನ್ನೂ ಸ್ವಾಗತಿಸಿದರು. ತಾಲೂಕಿನ ಪ್ರತೀ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರ ಸಹಕಾರವನ್ನು ಸ್ಮರಿಸಿ ಇಂತಹ ಸಹಕಾರ ನಿರಂತರವಾಗಿಲಿ ಎಂದು ಶುಭಾಶಯವನ್ನು ಬಯಸಿ ಮಾಹಿತಿ ನೀಡಿದರು ಬಳಿಕ ತಾಲೂಕು ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರು ಆಯುರ್ವೇದ ಭೂಷಣ ಎಂ ವಿ ಶಾಸ್ತ್ರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಕಾಶ್ ರಾವ್ ಇನ್ನಾ ಧನ್ಯವಾದವಿತ್ತರು ಕಾರ್ಯಕ್ರಮ ದಲ್ಲಿ ಶ್ರೀಮದ್ ಭುವನೇಂದ್ರ ಪ್ರೌಡ ಶಾಲಾ ಮುಖ್ಯೋಪಾಧ್ಯಾಯಿನಿ ವೃಂದಾ ಶೆಣೈ ಉಪಸ್ಥಿತರಿದ್ದರು. ಭುವನೇಂದ್ರ ಪ್ರೌಢ ಶಾಲಾ ಶಿಕ್ಷಕಿ ಪೂರ್ಣಿಮಾ ಶೆಣೈ ಪ್ರಾರ್ಥಿಸಿದರು. ಹೆಬ್ರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಮುಖ್ಯೋಪಾಧ್ಯಾಯರಾದ ದಿವಾಕರ ಮರಕಲರವರು ಕಾರ್ಯಕ್ರಮ ನಿರೂಪಿಸಿದರು. . ಸಭೆಯಲ್ಲಿ ಮುಖ್ಯೋಪಾಧ್ಯಾಯರ ಸಂಘದ ಪದಾಧಿಕಾರಿಗಳು ತಾಲೂಕಿನ ಸರಕಾರಿ ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢ ಶಾಲಾ ಮುಖ್ರೋಪಾಧ್ಯಾಯರು ಉಪಸ್ಥಿತರಿದ್ದರು..

ವರದಿ: ಅರುಣ ಭಟ್ಟ ಕಾರ್ಕಳ

error: