May 22, 2024

Bhavana Tv

Its Your Channel

ಆಟೋರಿಕ್ಷಾ ಮತ್ತು ಟ್ಯಾಕ್ಸಿಗಳಿಗೆ ಉಚಿತ ಪಾಸಿಂಗ್ ವ್ಯವಸ್ಥೆಯನ್ನು ಉದ್ಘಾಟಿಸಿದ ಸಚಿವ ವಿ ಸುನಿಲ್ ಕುಮಾರ್

ಕಾರ್ಕಳ: ವಿಕಾಸ ಸೇವಾ ಸಂಸ್ಥೆ ಕಾರ್ಕಳ ಮತ್ತು ಅಟೋ ರಿಕ್ಷಾ ಚಾಲಕ-ಮಾಲಕ ಸಂಘ ಕಾರ್ಕಳ ತಾಲೂಕು ಇವರ ಸಹಯೋಗದೊಂದಿಗೆ ಕಾರ್ಕಳ ವಿಧಾನಸಭಾ ಕ್ಷೇತ್ರದ ಆಟೋರಿಕ್ಷಾ ಮತ್ತು ಟ್ಯಾಕ್ಸಿಗಳಿಗೆ ಉಚಿತ ಪಾಸಿಂಗ್ ವ್ಯವಸ್ಥೆಯನ್ನು ಕಾರ್ಕಳ ಬಂಡೀಮಠದ ಬಸ್ ನಿಲ್ದಾಣದಲ್ಲಿ ರಾಜ್ಯದ ಇಂಧನ ಸಚಿವ ವಿ ಸುನಿಲ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ನಾವು ಈಗಾಗಲೇ ನಿಮ್ಮಲ್ಲಿ ಆತ್ಮವಿಶ್ವಾಸ ಮೂಡಿಸುವಂತಹ ಕೆಲಸವನ್ನು ಮಾಡುತ್ತಿದ್ದೇವೆ. ಸುಮಾರು ಮೂರು ವರ್ಷದ ಹಿಂದೆ ರಿಕ್ಷಾಚಾಲಕರಿಗೆ ಮಣಿಪಾಲದ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ಕಾರ್ಡನ್ನು ವಿತರಿಸಿದ್ದೇವೆ. ನಾವು ಯಾವ ಟೀಕೆಗೂ ಬಗ್ಗೋದಿಲ್ಲ ಯಾರ ಟೀಕೆಗೂ ಉತ್ತರಿಸಲು ಹೋಗುವುದಿಲ್ಲ ಕೇವಲ ಅಭಿವೃದ್ಧಿ ಮಂತ್ರ ನನ್ನದಾಗಿದೆ ಎಂದು ಹೇಳಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆಪಿ ಗಂಗಾಧರ್ ಪೆಟ್ರೋಲ್ ಹಾಗೂ ಡೀಸೆಲ್ ಓಡಾಡುವ ವಾಹನಗಳಿಗೆ ವಾಯುಮಾಲಿನ್ಯ ಪತ್ರ ಅಗತ್ಯವಾಗಿರುತ್ತದೆ. ಪತ್ರ ಪಡೆದ ವಾಹನಗಳು ವಿಷಪೂರಿತ ಅನಿಲವನ್ನು ಬಿಡುಗಡೆ ಮಾಡುವುದಿಲ್ಲ ಎಂದು ಅರ್ಥ. ಬಾಡಿಗೆ ಮಾಡುವ ವಾಹನಗಳು ಸರಕಾರಿ ರಸ್ತೆಯಲ್ಲಿ ಓಡಾಡುವಾಗ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಹಾಗು ವಾಹನದ ವಿಮೆಯು ಮಾಡಿಸುವುದು ಕಡ್ಡಾಯವಾಗಿರುತ್ತದೆ. ನಂತರ ಮಾತನಾಡಿದ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ ಇಂದು ಸುಮಾರು ೧೨೫ ಆಟೋರಿಕ್ಷ ಗಳು ಹಲವಾರು ಟ್ಯಾಕ್ಸಿಗಳ ಉಚಿತ ಪಾಸಿಂಗ್ ಮಾಡಿದ ನಮ್ಮ ಜನಪ್ರಿಯ ಮಂತ್ರಿಗಳಾದ ಸುನಿಲ್ ಕುಮಾರ್‌ರಿಗೆ ನಾವು ಅಭಾರಿಯಾಗಿದ್ದೇವೆ. ನಾವಿಂದು ಮುಂದಕ್ಕೂ ಅವರಿಂದ ಉತ್ತಮ ಸಹಕಾರ ಸಹಕಾರವನ್ನು ನಿರೀಕ್ಷಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನೇಮಿರಾಜ ಆರಿಗ ಪ್ರಾಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು ವೇದಿಕೆಯಲ್ಲಿ ಪುರಸಭಾ ಅಧ್ಯಕ್ಷರಾದ ಸುಮ ಕೇಶವ್, ಪೊಲೀಸ್ ಉಪಾಧೀಕ್ಷಕ ರಾದ ವಿಜಯಪ್ರಸಾದ್, ರವೀಂದ್ರ ಮೊಯಿಲಿ, ನ್ಯಾಯವಾದಿ ಎಂಕೆ ವಿಜಯ್ ಕುಮಾರ್ ಉಪಸ್ಥಿತರಿದ್ದರು.

ವರದಿ: ಅರುಣ ಭಟ್ಟ ಕಾರ್ಕಳ.

error: