May 3, 2024

Bhavana Tv

Its Your Channel

ಕಾರ್ಕಳದ ನಿಟ್ಟೆ ಪಂಚಾಯತ್ ಸಭಾಂಗಣದಲ್ಲಿ ಕೋವಿಡ್-೧೯ ಲಸಿಕಾ ಅಭಿಯಾನ

ಕಾರ್ಕಳ: ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸ್ಥಳೀಯ ಗ್ರಾಮಸ್ಥರಿಗೆ ಇಂದು ನಿಟ್ಟೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ೧೮ ವರ್ಷ ಮೇಲ್ಪಟ್ಟ ವರಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ತೆಗೆದುಕೊಂಡು ೮೪ದಿನ ಪೂರೈಸಿದ ನಂತರ ಏರಡನೆಯ ಡೋಸ್ ಕೋವಿಶೀಲ್ಡ್ ಲಸಿಕೆಯ ಮಹಾಮೇಳ ವನ್ನು ಆಯೋಜಿಸಲಾಗಿತ್ತು. ಸಮುದಾಯ ಆರೋಗ್ಯ ಕೇಂದ್ರ ನಿಟ್ಟೆಯ ಡಾಕ್ಟರ್ ನಿಖಿಲ್ ಶೆಟ್ಟಿ ಮಾದ್ಯಮಕ್ಕೆ ಲಸಿಕೆಯ ಬಗ್ಗೆ ಮಾಹಿತಿ ನೀಡಿದರು.

ಪಂಚಾಯತ್ ಅಧ್ಯಕ್ಷರಾದ ಸತೀಶ್ ಪೂಜಾರಿ ,ಹಾಗೂ ಪಂಚಾಯತ್ ಪಿಡಿಒ.ಶೇಖರ್ ಪೂಜಾರಿ ಮಾಧ್ಯಮದೊಂದಿಗೆ ಮಾತನಾಡಿದರು. ಪ್ರಯೋಗ ಶಾಲಾ ತಂತ್ರಜ್ಞರು ಪ್ರಕಾಶ್ ನಿಟ್ಟೆ ಸಮುದಾಯ ಕೇಂದ್ರ ,ಕಿರಿಯ ಮಹಿಳಾ ಆರೋಗ್ಯ ಕೇಂದ್ರದ ಶುಷ್ರುಕರು ದೀಪಿಕಾ, ಸುಪ್ರೀತಾ, ಅಮಿತಾ, ಹಾಗೂ ಆಶಾಕಾರ್ಯಕರ್ತೆ ವೈಶಾಲಿ, ಮತ್ತು ಆಪ್ತಸಮಾಲೋಚಕರಾದ ದಿನೇಶ್ ಸುವರ್ಣ,ಶಿಲ್ಪಾಶ್ರೀ, ಗ್ರೂಪ್ ಡಿ.ವಿನಂತಿ, ಪಂಚಾಯತ್ ನ ಅದ್ಯಕ್ಷರು ,ಉಪಾಧ್ಯಕ್ಷರು ವಾರ್ಡ್ ಸದಸ್ಯರು ಉಪಸ್ಥಿತರಿದ್ದರು.

ವರದಿ: ಅರುಣ ಭಟ್ ಕಾರ್ಕಳ

error: