April 27, 2024

Bhavana Tv

Its Your Channel

ಕೇಂದ್ರದ ಕೃಷಿ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ನಡೆದ ಸಾಂಕೇತಿಕ ರಸ್ತಾರೋಕೋ ಪ್ರತಿಭಟನೆ

ಕಾರ್ಕಳ: ಕೇಂದ್ರ ಸರಕಾರ ಕೃಷಿ ಕಾಯಿದೆ ತಿದ್ದುಪಡಿ ಮಸೂದೆ ಜಾರಿಯ ಮೂಲಕ ದೇಶದ ಬೆನ್ನೆಲೆಬಾಗಿರುವ ರೈತರ ಬೆನ್ನುಮೂಳೆ ಮುರಿದು ಅವರನ್ನು ಬಂಡವಾಳಶಾಹಿಗಳ ಗುಲಾಮರನ್ನಾಗಿಸುವ ವ್ಯವಸ್ಥಿತ ಹುನ್ನಾರ ನಡೆಸುತ್ತಿದೆ ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರಪಾಲ್ ನಕ್ರೆ ಹೇಳಿದ್ದಾರೆ.
ಅವರು ಇಲ್ಲಿನ ಬೈಪಾಸ್ ಸರ್ಕಲ್ ನಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕ ಆಯೋಜಿಸಿದ್ದ ಕೇಂದ್ರದ ಕೃಷಿ ತಿದ್ದುಪಡಿ ಮಸೂದೆಯನ್ನುವಿರೋಧಿಸಿ ನಡೆದ ಸಾಂಕೇತಿಕ ರಸ್ತಾರೋಕೋ ಪ್ರತಿಭಟನೆಯಲ್ಲಿ ಮಾತಾಡುತ್ತಿದ್ದರು.
ಸ್ವಾಮಿನಾಥನ್ ಆಯೋಗದ ಶಿಪಾರಸುಗಳನ್ನು ಗಾಳಿಗೆ ತೂರಿ ಕನಿಷ್ಟ ಬೆಂಬಲ ಬೆಲೆ ಘೋಷಿಸುವಲ್ಲಿ ರೈತರನ್ನು ಕತ್ತಲೆಯಲ್ಲಿಡಲಾಗಿದೆ. ಭೂ ಮಸೂದೆ ತಿದ್ದುಪಡಿಯ ಮೂಲಕ ಮತ್ತೊಮ್ಮೆ ಈ ದೇಶದಲ್ಲಿ ಊಳಿಗಮಾನ್ಯ ಪದ್ಧತಿ ಜರಿಗೆ ಬರುವಂತೆ ಮಾಡಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ರಾಜ್ಯ ಕಿಸಾನ್ ಘಟಕ ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ, ಸುಶಾಂತ್ ಸುಧಾಕರ್ ಸಂದರ್ಭೋಚಿತವಾಗಿ ಮಾತಾಡಿದರು ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಸುದಾಕರ ಕೋಟ್ಯಾನ್, ಕಾರ್ಕಳ ಬ್ಲಾಕ್ ಅಧ್ಯಕ್ಷ ಸದಾಶಿವ ದೇವಾಡಿಗ, ಕೆಪಿಸಿಸಿ ಕೋ ಓರ್ಡಿನೇಟರ್ ಕೃಷ್ಣಮೂರ್ತಿ, ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಅನಿತಾ ಡಿಸೋಜ, ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕ ಕಾರ್ಯಾದಕ್ಷ ಪ್ರಕಾಶ ಪೂಜಾರಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಮಾಲಿನಿ ರೈ, ಮಾಜಿ ಪುರಸಬಾ ಅಧ್ಯಕ್ಷ ಸುಬೀತ್ ಕುಮಾರ್, ಪ್ರತಿಮಾ ರಾಣೆ, ಪಂಚಾಯತ್ ಸದಸ್ಯೆ ಮಮತಾ ಶೆಟ್ಟಿ. ಪುರಸಬಾ ವಿರೋಧ ಪಕ್ಷದ ನಾಯಕ ಅಶ್ಪಕ್ ಅಹಮ್ಮದ್, ಐಟಿ ಸತೀಷ್, ಬ್ಲಾಕ್ ಕಾನೂನು ಘಟಕದ ರೆಹಮತುಲ್ಲ, ಎಸ್ಸಿ ಘಟಕದ ಅಧ್ಯಕ್ಷ ಅಣ್ಣಪ್ಪ, ಗ್ರಾಮೀಣ ಅದ್ಯಕ್ಷ ಥೋಮಸ್ ಮಸ್ಕರೆನಸ್, ವಿವೇಕಾನಂದ ಶೆಣೈ, ಸುಂದರ ಗೌಡ ಹಾಗೂ ವಿವಿಧ ಘಟಕಗಳ ಸದಸ್ಯರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದಾ ರಾವ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ ಕಾರ್ಯಕ್ರಮ ನಿರ್ವಹಿಸಿ ವಂದನಾರ್ಪಣೆ ಗೈದರು.

ವರದಿ: ಅರುಣ ಭಟ್ ಕಾರ್ಕಳ

error: