May 18, 2024

Bhavana Tv

Its Your Channel

ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಾರ್ಕಳದ ವಿವಿಧ ಸ್ಥಳಗಳಲ್ಲಿ ಕನ್ನಡ ನಾಡಗೀತೆ

ಕಾರ್ಕಳ ,ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಡೀ ರಾಜ್ಯಾದ್ಯಂತ ಲಕ್ಷ ಲಕ್ಷ ಕಂಠಗಳು ಕನ್ನಡ ಸಿರಿವಂತ ನಾದ ಗೀತೆಗಳು ಹಾಡಿದರು ಇದರ ಉದ್ದೇಶ ಕನ್ನಡ ಸಂಸ್ಕೃತಿ ಮತ್ತು ನಾಡಗೀತೆ ಗಳನ ಸೌರಕ್ಷಣೆ ಮಾಡಬೇಕಾದದ್ದು ಇದರ ಅಂಗವಾಗಿ ಸರಕಾರದ ಹಲವು ಪ್ರೇಕ್ಷಣೀಯ ಸ್ಥಳಗಳಲ್ಲಿ ಕನ್ನಡ ನಾಡ ಗೀತೆಯನ್ನುಹಾಡಲಾಯಿತು.ಕಾರ್ಕಳ ಬಾಹುಬಲಿ ಬೆಟ್ಟದ ತಪ್ಪಲಲ್ಲಿಯಿರುವ ಚತುರ್ಮುಖ ಬಸದಿ ಆವರಣದಲ್ಲಿ ನೂರಾರು ಶಾಲಾ ಮಕ್ಕಳು ಕನ್ನಡ ನಾಡ ಗೀತೆ ಹಾಡಿದರು.
ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ರೂಪಾ ಟಿ. ಶೆಟ್ಟಿ, ಮುಖ್ಯ ಕ್ಷೇತ್ರ ಶಿಕ್ಷಣ ಅಧಿಕಾರಿ ಸಂಗೀತ, ಶಿಕ್ಷಕರಾದ ಶ್ರೀ ಕೃಷ್ಣ, ಅನಂತ ಪದ್ಮನಾಭ ಭಟ್, ಮುನಿರಾಜ ರೆಂಜಾಳ, ಶಾಲಾ ಮುಖ್ಯೋಪಾದ್ಯಾಯರು ಅಧ್ಯಾಪಕ ಹಾಗೂ ಶಿಕ್ಷಕರು ಶಿಕ್ಷಕಿಯರು ಮುಂತಾದವರು ಉಪಸ್ಥಿತರಿದ್ದರು.

ವರದಿ: ಅರುಣ ಭಟ್

error: