May 16, 2024

Bhavana Tv

Its Your Channel

ಕಾರ್ಕಳ ವಕೀಲರ ಸಂಘದ ಚುನಾವಣೆ : ಅಧ್ಯಕ್ಷರಾಗಿ ಸುನಿಲ್ ಕುಮಾರ್ ಶೆಟ್ಟಿ ಆಯ್ಕೆ

ಕಾರ್ಕಳ : ಕಾರ್ಕಳ ವಕೀಲರ ಸಂಘದ ಅಧ್ಯಕ್ಷರಾಗಿ ಎಸ್‌ಕೆಎಸ್ ಲಾ ಚೇಂಬರ್‌ನ ಸುನಿಲ್ ಕುಮಾರ್ ಶೆಟ್ಟಿ ಆಯ್ಕೆಯಾದರು. ಅ. ೨೫ರಂದು ಬಾರ್ ಅಸೋಸಿಯೇಷನ್‌ನಲ್ಲಿ ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆದಿದ್ದು, ಸುನಿಲ್ ಕುಮಾರ್ ಶೆಟ್ಟಿ ಅಧ್ಯಕ್ಷರಾಗಿ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಪದ್ಮಪ್ರಸಾದ್ ಜೈನ್
ಪುನರಾಯ್ಕೆಯಾದರು.ಕಾರ್ಕಳ ಬಾರ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಈ ಹಿಂದೆ ಕೆಲಸ ನಿರ್ವಹಿಸಿರುವ ಅವರು ಕಾರ್ಕಳ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ರಾಗಿ, ಜನತಾದಳ ಕಾರ್ಕಳ ಅಧ್ಯಕ್ಷರಾಗಿ , ಕಾರ್ಕಳ ತಾಲೂಕಿನ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ರಾಗಿ, ಕಾರ್ಕಳ ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು
ಹಿರಿಯ ನ್ಯಾಯವಾದಿ ಕೆ ನವೀನ್ ಚಂದ್ರ ಹೆಗ್ಡೆ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು
ವರದಿ: ಅರುಣ ಭಟ್ ಕಾರ್ಕಳ

error: