May 19, 2024

Bhavana Tv

Its Your Channel

ಮೂವತ್ತು ಕೋಟಿ ವೆಚ್ಚದಲ್ಲಿ ಉನ್ನತೀಕರಣದ ಕಾಮಗಾರಿಯ ಪ್ರಗತಿ ವೀಕ್ಷಿಸಿದ ವಿ ಸುನಿಲ್ ಕುಮಾರ್

ಕಾರ್ಕಳ: ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಾರ್ಕಳ ಇಲ್ಲಿ ಟಾಟಾ ಟೆಕ್ನಾಲಜೀಸ್ ಸಹಭಾಗಿತ್ವದೊಂದಿಗೆ ಸರಿಸುಮಾರು ಮೂವತ್ತು ಕೋಟಿ ವೆಚ್ಚದಲ್ಲಿ ಉನ್ನತೀಕರಣದ ಕಾಮಗಾರಿಯ ಪ್ರಗತಿಯ ವೀಕ್ಷಣೆಯನ್ನು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ವಿ ಸುನಿಲ್ ಕುಮಾರ್ ವೀಕ್ಷಿಸಿದರು ಹಾಗೂ ಸಂಸ್ಥೆಯ ತರಬೇತಿ, ತರಬೇತಿದಾರರ ಬಗ್ಗೆಮತ್ತು ಸಂಸ್ಥೆಯ ಕುಂದು ಕೊರತೆಯ ಬಗ್ಗೆ ಮಾಹಿತಿಯನ್ನು ಪಡೆದರು.

ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರಾದ ಸುಮಾ ಕೇಶವ್ ,ಹಾಗೂ ವಾರ್ಡಿನ ಪುರಸಭಾ ಸದಸ್ಯರಾದ ಪ್ರವೀಣ್ ಶೆಟ್ಟಿ .ಟಾಟಾ ಟೆಕ್ನಾಲಜಿಸ್‌ನ ಅಧಿಕಾರಿಯಾದ ವೆಂಕಟರಮಣ ಬಳ್ಳಾಲ್ .ಸಂಸ್ಥೆಯ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗ ಮತ್ತು ಊರಿನ ಪ್ರಮುಖ ಮುಖಂಡರು ಉಪಸ್ಥಿತರಿದ್ದರು .
ವರದಿ: ಅರುಭ ಭಟ್ ಕಾರ್ಕಳ

error: