May 19, 2024

Bhavana Tv

Its Your Channel

ಕೃಷಿಕ ಕಿರಣ್ ಹೆಗ್ಡೆ ನೇತೃತ್ವದಲ್ಲಿ ಪತ್ರಿಕಾ ಗೋಷ್ಟಿ

ಕಾರ್ಕಳದಲ್ಲಿ ಕಿರಣ್ ಹೆಗ್ಡೆ ಅವರು ಕರೆಯಲಾದ ಪತ್ರಿಕಾ ಗೋಷ್ಟಿ. ಕಾರ್ಕಳ, ಹೈನುಗಾರಿಕೆ, ವಾಣಿಜ್ಯ ಬೆಳೆಗಳು ಸಮರ್ಪಕವಾದ ಮಾರುಕಟ್ಟೆ, ಸೂಕ್ತ ಬೆಂಬಲ ಬೆಲೆ, ದುಬಾರಿಯಾದ ಮೇವು, ದುಬಾರಿ ಗೊಬ್ಬರ, ಕೃಷಿ ಕಾರ್ಮಿಕರ ಕೊರತೆಯಿಂದ ಅವನತಿಯತ್ತ ಸಾಗುತ್ತಿದೆ,ಇದಕ್ಕೆ ಕಾರ್ಯಾಂಗ,ನ್ಯಾಯಾAಗ,ಶಾಸಕಾAಗ ನೇರ ಹೊಣೆ ಎಂದು ಕೃಷಿಕ,ಸಮಾಜ ಸೇವಕ,ಕಿರಣ್ ಹೆಗ್ಡೆ ಆರೋಪಿಸಿದರು.

ಕೃಷಿಕರು ಬೆಳೆದ ಬೆಳೆಗಳನ್ನು ಖರೀದಿಸಲು ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆ ಸರಿಯಾಗಿಲ್ಲ,ಕೃಷಿ ಉತ್ಪನ್ನ ಮಾರುಕಟ್ಟೆ ಮಾರುಕಟ್ಟೆಗಳಲ್ಲಿ ಸಭಾಭವನ ಕಟ್ಟುವ ಬದಲು ಕೃಷಿಕರಿಗೆ ಸೂಕ್ತ ಬೆಂಬಲ ಬೆಲೆಯನ್ನು ನೀಡಲು ಸರಕಾರ ಮುಂದಾಗಬೇಕು. ಕೃಷಿ ಉತ್ಪನ್ನ ಮಾರಕಟ್ಟೆ ಗಳಿಗೆ ಬಡ ಮತ್ತು ಸಣ್ಣ ರೈತರು ಬೆಳೆಗಳನ್ನು ತರಲು ತೀರಾ ತೊಂದರೆಯಾಗುತ್ತದೆ.ವಾಹನದ ವ್ಯವಸ್ಥೆ ಇಲ್ಲದೆ ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆ ಸಂಕೀರ್ಣಕ್ಕೆ ಒಯ್ಯಲು ತೊಂದರೆ ಅನುಭವಿಸುತ್ತಿರುವ ಬಗ್ಗೆ ಮನಗಂಡು ಮಾರುಕಟ್ಟೆಗಳನ್ನು ನಿರ್ಮಾಣ ಮಾಡುವ ಮೂಲಕ ರೈತರ ಬೆಳೆಗಳನ್ನು ಹೆಚ್ಚಿನ ಬೆಲೆ ನಿಗದಿ ಮಾಡಿ ಖರೀದಿಸುವಂತೆ ಆಗಬೇಕು ಎಂದು ಹೇಳಿದರು.

ನಗರ ಗ್ರಾಮೀಣ ಪ್ರದೇಶದಲ್ಲಿ ಇಂದು ನಿರುದ್ಯೋಗ ಸಮಸ್ಯೆ ತಾಂಡವ ವಾಡುತ್ತಿದೆ.ಕೊರೊನಾ ಲಾಕ್ ಡೌನ್ ನಿಂದ ಜನರು ಕೆಲಸ ಕಳೆದುಕೊಂಡಿದ್ದು ನಿರ್ಗತಿಕ ರಾಗಿದ್ದಾರೆ,ಹೋಟೆಲ್,ವ್ಯಾಪಾರ ಉದ್ಯಮ,ಕೈಗಾರಿಕೋದ್ಯಮ ನೆಲಕಚ್ಚುತ್ತಿದೆ. ಸಣ್ಣ ಪುಟ್ಟ ವ್ಯಾಪಾರಿಗಳು ತಮ್ಮ ನೆಲೆಗಳನ್ನು ಕಳೆದುಕೊಂಡರೆ ವಿಧಿಯಿಲ್ಲದೆ ತಮ್ಮ ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ನಿರ್ಗತಿಕ ರಾಗಿರುವುದು ಸರ್ವೇಸಾಮಾನ್ಯವಾಗುತ್ತಿದೆ. ಮಾತ್ರವಲ್ಲದೆ ರೈತರು ತಮ್ಮ ಜೀವನವನ್ನೇ ಕಳೆದುಕೊಂಡು ಅವರ ಸಂಸಾರ ಬೀದಿಗೆ ಬರುವಂತಾಗಿದೆ ಎಂದರು. ನ್ಯಾಯಾಂಗ ,ಕಾರ್ಯಾಂಗ,ಶಾಸಕಾAಗ,ಗಳು ತಮ್ಮ ಜವಾಬ್ದಾರಿ ಗಳನ್ನ ಮರೆತರೆ ಆಗುವುದಿಲ್ಲ, ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ವರದಿ: ಅರುಣ ಭಟ್ ಕಾರ್ಕಳ

error: