May 18, 2024

Bhavana Tv

Its Your Channel

ಕಾರ್ಕಳದಲ್ಲಿ ಪರಿಸರಕ್ಕಾಗಿ ಬೃಹತ್ ಸೈಕಲ್ ಜಾಥಾ

ಕಾರ್ಕಳ : ಯುವ ಜನತೆಯ ಶಕ್ತಿ ಅಮೋಘವಾದದ್ದು ಪರಿಸರ ಸಂರಕ್ಷಣೆಯಲ್ಲಿ ಮುಖ್ಯಪಾತ್ರ ನಿಮ್ಮದೇ ಎಂದು ಡಿವೈಎಸ್ಪಿ ವಿಜಯ್ ಪ್ರಸಾದ್ ಹೇಳಿದರು

ಜನತೆಯಲ್ಲಿ ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಕಾರ್ಕಳ ಪೇಟೆಯಲ್ಲಿ ಪರಿಸರಕ್ಕಾಗಿ ಸೈಕಲ್ ಜಾಥಾ ಕಾರ್ಯಕ್ರಮವು ರೋಟರಿ ಕ್ಲಬ್, ರೋಟರಾಕ್ಟ್ ಕ್ಲಬ್, ಲಯನ್ಸ್ ಕ್ಲಬ್, ಯುವವಾಹಿನಿ (ರಿ), ತಾಲೂಕು ಸ್ಕೌಟ್ & ಗೈಡ್ ಮತ್ತು ರೋವರ್ ರೇಂಜರ್, ತಾಲೂಕು ಎನ್ ಎಸ್ ಎಸ್ ಘಟಕ, ತಾಲೂಕು ಎಬಿವಿಪಿ ಸಂಘಟನೆ, ಪರ್ಯಾವರಣ ಗತಿವಿಧಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯಿತು.

ಆನೆಕರೆಯ ಸರ್ಕಲ್ ಬಳಿ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆಯ ಡಿವೈಎಸ್ಪಿ ವಿಜಯ್ ಪ್ರಸಾದ್, ಠಾಣಾ ಎಸ್‌ಐ ಮಧು. ಬಿ, ಪುರಸಭಾ ಸದಸ್ಯ ಸುಭದ್ ರಾವ್, ಸ್ಕೌಟ್ & ಗೈಡ್ ಮುಖ್ಯಸ್ಥೆ ಜ್ಯೋತಿ ಪೈ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಸೈಕಲ್ ಜಾಥಾ ಕಾರ್ಯಕ್ರಮದಲ್ಲಿ ೧೨೦ ಹೆಚ್ಚಿನ ಯುವಜನತೆ ಸೈಕಲ್ ಗಳನ್ನು ಚಲಾಯಿಸುದರ ಮೂಲಕ ಪರಿಸರ ಜಾಗೃತಿಯನ್ನು ಮೂಡಿಸಿದರು. ಜಾಥದಲ್ಲಿ ಭಾಗವಹಿಸಿದ ಎಲ್ಲರಿಗೂ ಲಯನ್ಸ್ ಕ್ಲಬ್ ಕಾರ್ಯದರ್ಶಿ ನಿತ್ಯಾನಂದ ಭಂಡಾರಿ ಮತ್ತು ಪದಾಧಿಕಾರಿಗಳು ಟೋಪಿಯನ್ನು ವಿತರಣೆಯನ್ನು ಮಾಡಿದರು. ಕಾರ್ಯಕ್ರಮದ ಪ್ರಸ್ತಾವನೆ ಪರ್ಯಾವರಣ ಸಂಚಾಲಕರಾಗಿರುವ ನಿಟ್ಟೆ ಪ್ರೊಫೆಸರ್ ಡಾ. ಸುಧೀಂದ್ರ ಶೆಟ್ಟಿ ಇವರು ನೆರವೇರಿಸಿದರು, ಸ್ವಾಗತ ರೋಟರಿ ಕ್ಲಬ್ ಅಧ್ಯಕ್ಷರಾದ ರೋ.ಸುರೇಶ್ ನಾಯಕ್, ಧನ್ಯವಾದ ಯುವವಾಹಿನಿ ಅಧ್ಯಕ್ಷರಾದ ತಾರಾನಾಥ್, ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಜಾಥದಲ್ಲಿ ಭಾಗವಹಿಸಿದ್ದವರಿಂದ ಪರಿಸರದ ಬಗ್ಗೆ ಪ್ರತಿಜ್ಞೆ ಯನ್ನು ಪಡೆದುಕೊಳ್ಳುವ ಮೂಲಕ ಪರಿಸರಕ್ಕೆ ನಾವೇನು ಕೊಡಬಲ್ಲವು ಎಂಬ ಮಾಹಿತಿಯನ್ನು ನೀಡಲಾಯಿತು.

ದಾರಿಯುದ್ದಕ್ಕೂ ಘೋಷಣೆ ಹಾಗೂ ಕಾರ್ಯಕ್ರಮದ ಸ್ವರೂಪವನ್ನು ತಿಳಿಸುವಲ್ಲಿ ಕಾರ್ಯಕ್ರಮ ಯಶಸ್ವಿ ಗೊಂಡಿತು. ಸಮಾರೋಪ ಕಾರ್ಯಕ್ರಮವನ್ನು ಎಬಿವಿಪಿ ತಾಲೂಕು ಸಂಚಾಲಕರಾಗಿರುವ ಅಭಿಷೇಕ್ ಸುವರ್ಣ ಅವರು ಬಂಡಿ ಮಠದಲ್ಲಿ ಸಂಪನ್ನ ಗೊಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಎಬಿವಿಪಿ ವಿದ್ಯಾರ್ಥಿನಿ ಮುಕ್ತಿ ವರ್ಧನ ಇವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಇಕ್ಬಾಲ್ ಅಹಮದ್, ಶೇಖರ್ ಎಚ್, ವಸಂತ್ ಎಮ್, ರಮಿತಾ ಶೈಲೇಂದ್ರ, ಗಣೇಶ್ ಸಾಲಿಯಾನ್, ಶೈಲೇಂದ್ರ ರಾವ್, ಗಣೇಶ್ ಜಾಲ್ಸೂರ್, ಮನೀಶ್, ವಿವೇಕ್ ಎಲ್ಲಾ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

ವರದಿ: ಅರುಣ ಭಟ್ ಕಾರ್ಕಳ

error: