May 18, 2024

Bhavana Tv

Its Your Channel

“ಅಂಬಾತನಯ ಮುದ್ರಾಡಿಯವರ ಸಾಹಿತ್ಯ ಒಂದು ಅಧ್ಯಯನ” ಕೃತಿ ಲೋಕಾರ್ಪಣೆ

ಕಾರ್ಕಳ: ಹೊಸಸಂಜೆ ಪ್ರಕಾಶನದ 28ನೇ ಕೃತಿ ಕಾರ್ಕಳದ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಮಿತ್ರಪ್ರಭ ಹೆಗ್ಡೆಯವರ “ಅಂಬಾತನಯ ಮುದ್ರಾಡಿ ಅವರ ಸಾಹಿತ್ಯ ಒಂದು ಅಧ್ಯಯನ” ಎಂಬ ಕೃತಿ ಕಾರ್ಕಳದ ಪ್ರಕಾಶ್ ಹೋಟೆಲಿನ ಸಂಭ್ರಮ ಸಭಾಭವನದಲ್ಲಿ ಹಿರಿಯ ಸಾಹಿತಿಗಳಾದ ಶ್ರೀ ಅಂಬಾತನಯ ಮುದ್ರಾಡಿ ಅವರ ಘನ ಅಧ್ಯಕ್ಷತೆಯಲ್ಲಿ ನೆರವೇರಿತು.
ಸಾಹಿತ್ಯ ಮನುಷ್ಯನ ಅವಿಭಾಜ್ಯ ಅಂಗವಾಗಬೇಕು ಕಂಡುAಡ ಅನುಭವದ ದಾಖಲೀಕರಣವೇ ಸಾಹಿತ್ಯ, ಕವಿ ಯಾವತ್ತು ಭಾವ ಜಡೆನಲ್ಲ ಹಾಗಾಗಿ ಪ್ರೇಮ ಜಡೆನೂ ಆಗಿರಲಾರ ಎನ್ನುತ್ತಾ ತಮ್ಮ ಕಿನ್ನರ ಕಿನ್ನರಿ ಪ್ರೇಮಗೀತೆಗಳ ಸಂಕಲನದಿAದ ಆಯ್ದ ಎರಡು ಪ್ರೇಮಗೀತೆಗಳನ್ನು ಹೇಳಿ ನಮ್ಮ ಜೀವನೋತ್ಸಾಹದ ಸೆಲೆಯನ್ನು ಕಟ್ಟಿಕೊಟ್ಟರು.ಪಂಡಿತ ಪರಂಪರೆಯ ಮಹಾನ್ ಕೊಂಡಿ ಹಳೆಗನ್ನಡ ಸಾಹಿತ್ಯದ ಮಾಹಿತಿಯ ಆಗರ ಡಾಕ್ಟರ್ ಪಾದೇಕಲ್ಲು ವಿಷ್ಣು ಭಟ್ಟರು ಕೃತಿಯನ್ನು ಲೋಕಾರ್ಪಣೆಗೈದು ಕನ್ನಡ ನಾಡು ನುಡಿ ಭಾಷಾ ವಿಷಯದ ಕುರಿತಾಗಿ ಮಾತನಾಡಿದರು.

ಲೇಖಕಿ ಮಿತ್ರ ಪ್ರಭಾ ಹೆಗಡೆಯವರು ಎಂಪಿಲ್ ಪದವಿಗಾಗಿ ಬರೆದ ಅಧ್ಯಯನದ ವಿಸ್ತೃತ ರೂಪದ ವಿಶ್ಲೇಷಣೆಯನ್ನು ಮಾಡುತ್ತಾ ಕೃತಿಯ ಹಿಂದಿನ ಚೋದಕ ಶಕ್ತಿ ಗಳನ್ನೆಲ್ಲಾ ಹೃದಯಾಂತರಾಳದಿAದ ಸ್ಮರಿಸಿಕೊಂಡರು.

ಪತ್ರಕರ್ತ ಪದ್ಮಾಕರ ಭಟ್ ಪ್ರಸ್ತಾವನೆಗೈದರು. ಸಂಯುಕ್ತ ಕರ್ನಾಟಕ ಪತ್ರಿಕೆಯ ನಿವೃತ್ತ ಪತ್ರಿಕಾ ಸಂಪಾದಕ ಶ್ರೀಕರ ಭಟ್ ಸಮಾರಂಭದ ಕುರಿತಾಗಿ ಸದಭಿಪ್ರಾಯವನ್ನು ವ್ಯಕ್ತಪಡಿಸಿದರು. ಮುನಿಯಾಲು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಬೇಬಿ ಶೆಟ್ಟಿಯವರು ತಮ್ಮ ಗುರುಗಳಾದ ಲೇಖಕಿ ಮಿತ್ರಪ್ರಭಾ ಹೆಗ್ಡೆಯವರ ಬಗ್ಗೆ ಅಭಿಮಾನದ ನುಡಿಗಳನ್ನಾಡಿದರು. ಏರ್ವೈಸ್ ಮಾರ್ಷಲ್ ರಮೇಶ್ ಕಾರಣಿಕರು ಹುತಾತ್ಮರ ದಿನದ ವಿಶೇಷತೆಯ ಬಗ್ಗೆ ಹಾಗೂ ರಾಷ್ಟ್ರಭಕ್ತಿಯ ಬಗ್ಗೆ ಅರಿವು ಮೂಡಿಸಿದರು. ಸ್ವರ ಸರಸ್ವತಿ ಪ್ರತಿಷ್ಠಾನ, ಉಡುಪಿ ಇದರ ಸಂಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯ ಬಾಸ್ರಿಯವರು ಕೃತಿ ಮತ್ತು ಸಮಾರಂಭದ ಕುರಿತಾಗಿ ಮೆಚ್ಚುಗೆಯ ಮಾತುಗಳನ್ನಾಡಿದರು. ಕಾರ್ಯಕ್ರಮದ ಆಯೋಜಕ ಹೊಸಸಂಜೆ ಪ್ರಕಾಶನದ ಸಂಪಾದಕರಾದ ಶ್ರೀ ಆರ್ ದೇವರಾಯ ಪ್ರಭು ಇವರು ಜನವರಿ 14ರಂದು ಆಯೋಜಿಸಿದ ಭಗವದ್ಗೀತಾ ಕಂಠಪಾಠ ಸ್ಪರ್ಧೆಯ ವಿಜೇತರನ್ನು ಅಭಿನಂದಿಸಿ ಶುಭಾಶಯವನ್ನು ಕೋರಿದರು. ಉಪನ್ಯಾಸಕಿ ಮಾಲತಿ ಜಿ ಫೈ ಕಾರ್ಯಕ್ರಮವನ್ನು ನಿರ್ವಹಿಸಿದರು. ವಿಜಯನಾರಾಯಣ ಮರಾಣe ಯವರು ವಂದಿಸಿದರು.

ವರದಿ: ಅರುಣ ಭಟ್ ಕಾರ್ಕಳ

error: