May 19, 2024

Bhavana Tv

Its Your Channel

ಸ್ಥಾಯಿ ಸಮಿತಿ ನೇಮಕ , ಮುಖ್ಯಾಧಿಕಾರಿ ಕಾನೂನುಬಾಹಿರವಾಗಿ ನಡೆ, ವಿಪಕ್ಷ ಸದಸ್ಯರು ಸಭಾತ್ಯಾಗ

ಕಾರ್ಕಳ:- ಕಾರ್ಕಳ ಉತ್ಸವ ಚರ್ಚೆಗೆ ಅವಕಾಶ ಮಾಡಿಕೊಟ್ಟು ಬಳಿಕ ಸ್ಥಾಯಿ ಸಮಿತಿ ನೇಮಕ ಸಂದರ್ಭ ಮುಖ್ಯಾಧಿಕಾರಿ ಕಾನೂನುಬಾಹಿರವಾಗಿ ನಡೆದುಕೊಂಡಿದ್ದಾರೆ ಎಂದು ಪುರಸಭೆ ವಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದ ಘಟನೆ ನಡೆಯಿತು.

ಕಾಟ ಪುರಸಭೆ ಸಾಮಾನ್ಯ ಸಭೆ ಸೋಮವಾರ ಅಧ್ಯಕ್ಷ ಕೇಶವ ಅಧ್ಯಕ್ಷತೆಯಲ್ಲಿ ನಡೆಯಿತು. ಉಪಾಧ್ಯಕ್ಷ ಪಲ್ಲವಿ ಸ್ಥಾಯಿ ಸಮಿತಿ ಅಧ್ಯಕ್ಷ ಯೋಗೀಶ್ ದೇವಾಡಿಗ ಮುಖ್ಯಾಧಿಕಾರಿ ಟಿ ರೂಪ ಶೆಟ್ಟಿ ವೇದಿಕೆ ಉಪಸ್ಥಿತರಿದ್ದರು.

ಕಾರ್ಕಳ ಉತ್ಸವ ಕುರಿತು ವಿಪಕ್ಷ ನಾಯಕ ಅಷ್ಫಾಕ್ ಅಹಮದ್ ವಿಷಯ ಪ್ರಸ್ತಾಪಿಸಿ ಕಾರ್ಕಳ ಉತ್ಸವಕ್ಕೆ ನಾಡಿನ ವಿವಿಧ ವಿವಿಧ ಕಡೆಯಿಂದ ಸಹಸ್ರಾರು ಮಂದಿ ಬರುವಾಗ ಎಲ್ಲವೂ ವ್ಯವಸ್ಥಿತವಾಗಿ ನಡೆಯಬೇಕು ಸ್ವಚ್ಛತೆ ನೀರು, ಅಲಂಕಾರಗಳಲ್ಲಿ ಪುರಸಭೆ ಜವಾಬ್ದಾರಿ ಪೂರ್ಣ ಸಹಕಾರವಿದೆ ಎಂದರು.
ನಂತರ ಸ್ಥಾಯಿ ಸಮಿತಿ ಏಕಪಕ್ಷೀಯವಾಗಿ ನಡೆದಿದೆ ಪುರಸಭೆ ಇತಿಹಾಸದಲ್ಲಿದೆ ಮೊದಲು ಪಕ್ಷದ ಸದಸ್ಯರ ಸಮಿತಿ ರಚನೆಯಾಗಿದೆ ಈ ರೀತಿ ಎಲ್ಲಿಯೂ ನಡೆಯುತ್ತಿಲ್ಲ ಆಡಳಿತ-ವಿಪಕ್ಷಗಳ ೧೧ ಮಂದಿ ಸದಸ್ಯರನ್ನು ಹೊಂದಿದ್ದೇವೆ. ಸ್ಥಾಯಿ ಸಮಿತಿ ನೇಮಕ ಸಂದರ್ಭದಲ್ಲಿ ವಿಪಕ್ಷ ಸದಸ್ಯರಲ್ಲಿ ಯಾರಿಗೂ ಅವಕಾಶ ನೀಡಿಲ್ಲ, ಆಡಳಿತ ಪಕ್ಷ ವಿಪಕ್ಷ ಸದಸ್ಯರ ಮಧ್ಯೆ ಒಳ ಒಪ್ಪಂದ ಚರ್ಚೆ ಮೇಲೆ ಸ್ಥಾಯಿ ಸಮಿತಿ ಆಯ್ಕೆ ಪುರಸಭೆಯಲ್ಲಿ ನಡೆಯುತ್ತಿತ್ತು ಅದು ಎಲ್ಲವನ್ನು ಗಾಳಿಗೆ ತೂರಿ ಕಾನೂನುಬಾಹಿರ ಸಂವಿಧಾನ ವಿರೋಧಿಯಾಗಿ ನಡೆದಿದೆ ಮುಖ್ಯ ಅಧಿಕಾರಿಗಳು ಈ ರೀತಿ ನಡೆದುಕೊಂಡಿದ್ದಾರೆ ಅವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಅಷ್ಫಾಕ್ ಅಹಮದ್ ಖಂಡಿಸಿದ್ದಾರೆ .

ಮುಖ್ಯಾಧಿಕಾರಿ ಸಂತೋಷ ಉತ್ತರಿಸಿ ಸ್ಥಾಯಿ ಸಮಿತಿಯಲ್ಲಿ ನಾನು ಸದಸ್ಯ-ಕಾರ್ಯದರ್ಶಿ ಅಷ್ಟೇ, ದಾಖಲು ಮಾಡುವುದೇ ನನ್ನ ಕೆಲಸ ಎಂದರು. ವಾರ್ಡ್ಗಳಲ್ಲಿ ನೀರಿನ ಸಮಸ್ಯೆ ಇರುವ ಬಗ್ಗೆ ಪ್ರತಿಮಾ ರಾಣಿ, ಪ್ರಭಾ ಕಿಶೋರ್ ಗಮನಕ್ಕೆ ತಂದರು. ಅಂಗಡಿ ತಳ ಬಾಡಿಗೆ ವಿಚಾರ ಪ್ರಸ್ತಾಪ ಗೊಂಡಿತು ನಗರದಲ್ಲಿ ೯೬ ಅಂಗಡಿಗಳು ಸ್ಥಳ ಬಾಡಿಗೆಯಲ್ಲಿ ಇವೆ. ಸುಮಾರು ೭೦, ೮೦ ಮಂದಿ ಅಂಗಡಿಯವರು ಬಾಡಿಗೆ ಕಟ್ಟುತ್ತಾರೆ, ಉಳಿದವರು ಕಟ್ಟುತ್ತಿಲ್ಲ, ಎಂದು ಅಧಿಕಾರಿ ಸಂತೋಷ ಅವರು ಹೇಳಿದರು.

ವರದಿ: ಅರುಣ ಭಟ್ ಕಾರ್ಕಳ

error: