May 3, 2024

Bhavana Tv

Its Your Channel

ಕಲೆ ಸಂಸ್ಕೃತಿಯನ್ನು ಬಿಂಬಿಸುವ ವೈಶಿಷ್ಟಮಯ ಕಾರ್ಕಳ ಉತ್ಸವಕ್ಕೆ ಚಾಲನೆ

ಕಾರ್ಕಳ : ಕಲೆ ಸಂಸ್ಕೃತಿಯನ್ನು ಬಿಂಬಿಸುವ ವೈಶಿಷ್ಟಮಯ ಕಾರ್ಕಳ ಉತ್ಸವಕ್ಕೆ ಇಂದು ಬೆಳಿಗ್ಗೆ ಚಾಲನೆ ದೊರೆಯಿತು.
ಬೆಳಿಗ್ಗೆ ಕರಾವಳಿ ಕರ್ನಾಟಕದ ಜಾನಪದ ಕಲೆಯಾದ ಯಕ್ಷಗಾನ ಹಾಗೂ ರಂಗಕಲೆಗಳ ಚಟುವಟಿಕೆ ಪ್ರಯೋಗಶೀಲತೆ ಹಾಗು ತರಬೇತಿಯನ್ನು ನೀಡುವ ಯಕ್ಷರಂಗಾಯಣದ ಗುದ್ದಲಿ ಪೂಜೆಯನ್ನು ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವರಾದ ಸುನಿಲ್ ಕುಮಾರ್ ನೆರವೇರಿಸಿದರು.

ಈ ಸಂಧರ್ಭದಲ್ಲಿ ಹೆಲಿಕಾಪ್ಟರ್ ಮೂಲಕ ಹೂ ಮಳೆ ಸುರಿಸಲಾಯಿತು. ಅನಂತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಥೀಮ್ ಪಾರ್ಕಿನ ಪರಿಸರವು ಮುಂದಿನ ದಿನಗಳಲ್ಲಿ ಸಂಸ್ಕೃತಿಕ ಲೋಕವನ್ನು ಸೃಷ್ಟಿಸಲಿದೆ ಎಂದರು. ರಂಗ ಕಲೆ ಮತ್ತು ಯಕ್ಷ ಕಲೆಗಳ ಚಟುವಟಿಕೆಯ ಕೇಂದ್ರ ನಿರ್ಮಾಣದ ಕಾರ್ಯವು ಮಾರ್ಚ್ ಅಂತ್ಯಕ್ಕೆ ಕೊನೆಗೊಳ್ಳಲಿದೆ ಎಂದು ಹೇಳಿದರು.

ಹೆಲಿಕಾಪ್ಟರ್ ವಿಹಾರ ಉದ್ಘಾಟನೆ:ಕಾರ್ಕಳದ ಪರಿಸರ ಹಾಗು ಅಲ್ಲಿನ ಧಾರ್ಮಿಕ ಕ್ಷೇತ್ರಗಳನ್ನು ಪರಿಚಯಿಸುವ ಹೆಲಿಕಾಪ್ಟರ್ ಉದ್ಘಾಟನೆಯನ್ನು ಖ್ಯಾತ ಉದ್ಯಮಿ ಬೋಳ ಪ್ರಭಾಕರ್ ಕಾಮತ್ ಅವರು ದೀಪ ಬೆಳಗಿಸಿ ನೆರವೇರಿಸಿದರು . ವಿಹಾರದ ಪ್ರಥಮ ತಂಡವಾಗಿ ಸಚಿವ ಸುನಿಲ್ ಕುಮಾರ್ ಹಾಗೂ 5 ಮಂದಿ ಪೌರ ಕಾರ್ಮಿಕರು
ಹೆಲಿಕಾಪ್ಟರ್ ನಲ್ಲಿ ವಿಹಾರಗೈದರು. ಕಾರ್ಕಳದ ಪರಿಸರದ ಜನತೆ ಹೆಲಿಕಾಪ್ಟರ್ ವಿಹಾರ ಕಣ್ಣುತುಂಬಿಕೊoಡು ಸಂಭ್ರಮ ಪಟ್ಟರು.

ವರದಿ: ಅರುಣ ಭಟ್ ಕಾರ್ಕಳ

error: