May 2, 2024

Bhavana Tv

Its Your Channel

ಕಾರ್ಕಳ ಜೋಡುರಸ್ತೆಯ ಪ್ರೈಮ್ ಮಾಲ್‌ನಲ್ಲಿ ಪೂರ್ಣಿಮಾ ಲೈಫ್ ಸ್ಟೈಲ್ ಮಳಿಗೆ ಉದ್ಘಾಟನೆ

ಕಾರ್ಕಳ:– ಗುಣಮಟ್ಟ ಪ್ರೀತಿ, ವಿಶ್ವಾಸಪೂರ್ಣ ಸೇವೆಯಿಂದ ಪೂರ್ಣಿಮಾ ಅಂಗಸoಸ್ಥೆಗಳು ಪ್ರಸಿದ್ದಿ ಪಡೆದಿವೆ. ಸಮಾಜ, ರಾಷ್ಟ್ರ ಕಟ್ಟುವ ಕಾರ್ಯದಲ್ಲೂ ಸಂಸ್ಥೆ ಸಹಭಾಗಿ ಆಗುತ್ತಿರುವುದು ಹೆಮ್ಮೆಯ ಸಂಗತಿ. ಜವುಳಿ ಉದ್ಯಮ ದಲ್ಲಿ ದಿ. ಪಾಂಡುರoಗ ಪ್ರಭು ಅವರ ಹೆಸರು ಶಾಶ್ವತ ಎಂದು ಸಚಿವ ಎ. ಸುನಿಲ್ ಕುಮಾರ್ ಹೇಳಿದರು.

ಕಾರ್ಕಳ ಜೋಡುರಸ್ತೆಯ ಪ್ರೈಮ್ ಮಾಲ್‌ನಲ್ಲಿ ಗುರುವಾರ ಪೂರ್ಣಿಮಾ ಲೈಫ್‌ಸ್ಟೈಲ್ ಮಳಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜೋಡುರಸ್ತೆಗೆ ಹೊಸ ಕಳೆ ಬರುವಲ್ಲಿ ಪೂರ್ಣಿಮಾ ಸಂಸ್ಥೆಯದ್ದೇ ಸಿಂಹಪಾಲು ಎಂದು ಶ್ಲಾಘಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಮಾತನಾಡಿ, 1966ರಲ್ಲಿ ಧರ್ಮಸ್ಥಳದ ಬಾಹುಬಲಿ ಕಾರ್ಕಳದ ಮಂಗಳಪಾದೆಯಲ್ಲಿ ಕೆತ್ತಲ್ಪಟ್ಟಿತ್ತು. ಆ ವೇಳೆ ಡಾ.ಹೆಗ್ಗಡೆ ಕಾರ್ಕಳಕ್ಕೆ ಆಗಮಿಸುವ ಸಂದರ್ಭ ಪಾಂಡುರAಗ ಪ್ರಭುಗಳ ಪರಿಚಯವಾಗಿತ್ತು. ಅಂದಿನಿoದ ಇಂದಿನವರೆಗೆ ಕುಟುಂಬಗಳ ನಡುವೆ ಉತ್ತಮ ಬಾಂಧವ್ಯವಿದೆ. ಗ್ರಾಹಕರಿಗೆ ಈ ಸಂತೃಪ್ತಿಯ ಸೇವೆ ನೀಡುವುದು ಇಂದಿನ ಅಗತ್ಯ ಎಂದು ಹೇಳಿದರು.

ಸಂಸ್ಥೆಯ ಮಾಲಕ ರವಿಪ್ರಕಾಶ್ ಪ್ರಸ್ತಾವನೆಗೈದು, ಅವಿಭಜಿತ ದ.ಕ.ದಲ್ಲಿ ಪ್ರಥಮ ಮೆನ್ಸ್ – ವಮೆನ್ಸ್ ಎಥ್ನಿಕ್‌ನೊಂದಿಗೆ ಪುಡ್ ಕೋರ್ಟ್, (ಸಸ್ಯಾಹಾರಿ) ಜ್ಯೂಸ್ ಸೆಂಟರ್, ಅಲಂಕಾರಿಕ ವಸ್ತುಗಳು, ಬುರ್ಖಾ ಶಾಪ್ ಎಲ್ಲವೂ 8 ಸಾವಿರ ಚದರ ಅಡಿಯ ಒಂದೇ ಸೂರಿನಡಿ ಲಭಿಸಲಿದೆ ಎಂದು ಹೇಳಿ ಹಿರಿಯರು ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಬಗೆಯನ್ನು ಹಂಚಿಕೊoಡರು.

ಚಲನಚಿತ್ರ ನಟ ಅರವಿಂದ ಬೋಳಾರ್, ದ.ಕ. ಜಿಲ್ಲಾ ಜವುಳಿ ವರ್ತಕರ ಸಂಘದ ಅಧ್ಯಕ್ಷ ಯೋಗೀಶ್ ಭಟ್, ಕೆನರಾ ಬ್ಯಾಂಕ್‌ನ ಎಜಿಎಂ ಮತ್ತು ರೀಜನಲ್ ಹೆಡ್ ಕೆ. ಕಾಳೀ, ಕಾರ್ಕಳ ಕೆನರಾ ಬ್ಯಾಂಕಿನ ಎಜಿಎಂ ಉಮೇಶ್ ಶೆಣೈ, ರಾಜಾಪುರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ರವೀಂದ್ರ ಪ್ರಭು ಕಡಾರಿ, ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್, ಮಾರುತಿ ಗ್ಯಾಸ್‌ನ ನಿತ್ಯಾನಂದ ಪೈ, ಪೈಮ್ ಮಾಲ್ ಪಾಲುದಾರ ಮಹಾವೀರ ಹೆಗ್ಡೆ ಕುಕ್ಕುಂದೂರು ಗ್ರಾ.ಪಂ. ಅಧ್ಯಕ್ಷೆ ಶಶಿಮಣಿ ಸಂಪತ್, ಸುಮನಾ ಪಾಂಡುರoಗ ಪ್ರಭು, ಅಜೆಕಾರು ಪದ್ಮಗೋಪಾಲ ಟ್ರಸ್ಟ್ನ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಪುರಸಭೆ ಸದಸ್ಯ ಅಶ್ಪಕ್ ಅಹ್ಮದ್, ಜಾನ್ ಡಿ’ಸಿಲ್ಪ ರಾಜ್ಯ ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ ಹರಿಪ್ರಸಾದ ಪ್ರಭು, ಉಮಾನಾಥ ಪ್ರಭು, ದಿನೇಶ್ ಪ್ರಭು. ಕಿರಣ ರವಿಪ್ರಕಾಶ್ ಪ್ರಭು, ಪ್ರಜ್ವಲ್ ಪ್ರಭು, ಸಚಿನ್ ಉಪಸ್ಥಿತರಿದ್ದರು. ರಾಜೇಂದ್ರ ಭಟ್ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

error: