May 20, 2024

Bhavana Tv

Its Your Channel

ತಾತ್ಕಾಲಿಕ ನಿವೇಶನದ ಹೆಸರಿನಲ್ಲಿ ಜನರನ್ನು ರಾಜ್ಯ ಸರಕಾರದಿಂದ ವಂಚನೆ -ಹೆಬ್ರಿ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ನೇರ ಆರೋಪ

ಕಾರ್ಕಳ: ಡೀಮ್ಡ್ ಫಾರೆಸ್ಟ್ ಮತ್ತು ಕಸ್ತೂರಿರಂಗನ್ ಸಮಸ್ಸೆಯನ್ನು ಬಗೆಹರಿಸದೇ ಆ ಪ್ರದೇಶ ವ್ಯಾಪ್ತಿಯಲ್ಲಿ ತಾತ್ಕಾಲಿಕ ನಿವೇಶನದ ಹೆಸರಿನಲ್ಲಿ ಜನರನ್ನು ರಾಜ್ಯ ಸರಕಾರ ವಂಚಿಸುತ್ತಿದೆ ಎಂದು ಹೆಬ್ರಿ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ನೇರ ಆರೋಪಗೈದಿದ್ದಾರೆ.
ಕಾರ್ಕಳ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು

ಡೀಮ್ಡ್ ಸಮಸ್ಯೆ ಈಗಾಗಲೆ ಸುಪ್ರೀಂ ಕೋರ್ಟಿನ ಹಸಿರು ಪೀಠದಲ್ಲಿದ್ದು, ಪ್ರಕರಣದ ಇತ್ಯರ್ಥವಾಗದೆ ಈ ಪ್ರದೇಶ ವ್ಯಾಪ್ತಿಯಲ್ಲಿ ಯಾವುದೇ ಹಕ್ಕು ಪತ್ರ ಊರ್ಜಿತವಾಗಿರುವುದಿಲ್ಲ. ಈ ಕಾನೂನು ನಿಯಾಮಗಳನ್ನು ಉಲ್ಲಘಿಸಿದಲ್ಲಿ ನ್ಯಾಯಾಯಲದ ಉಲ್ಲಂಘನೆಯಾಗಿರುತ್ತದೆ. ಇದು ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕ, ಸಚಿವ ಸುನಿಲ್ ಕುಮಾರ್‌ಗೆ ಗೊತ್ತಿರಬೇಕು. ಗೊತ್ತಿದ್ದು ಅಧಿಕಾರಿಗಳ ದಾರಿ ತಪ್ಪಿಸಿ ತಾತ್ಕಾಲಿಕ ಷರತ್ತು ಬದ್ಧ ಹಕ್ಕು ಪತ್ರಕ್ಕೆ ಯಾವುದೇ ರೀತಿ ಮೌಲ್ಯವಿರುವುದಿಲ್ಲ. ಶಾಶ್ವತ ಹಕ್ಕು ಪತ್ರವಾಗಿರುವುದಿಲ್ಲ. ರಾಷ್ಟಿçÃಕೃತ ಬ್ಯಾಂಕ್, ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಮಂಜೂರಾಗುವುದಿಲ್ಲ. ಸಂಕಷ್ಟ ಕಾಲದಲ್ಲಿ ತಮಗೆ ಬೇಕಾದವರಿಗೆ ವರ್ಗಾಯಿಸುವ ಹಕ್ಕಿಲ್ಲ ಇಂತಹ ಹಕ್ಕು ಪತ್ರ ಬೋಗಸ್ ಆಗಿದೆ ಎಂದು ಅವರು ನೇರವಾಗಿ ಆರೋಪ ಗೈದರು.

ಫಲಾನುಭವಿಗಳಿಗೆ ನೀಡಲಾದ ಶರತ್ತುಬದ್ಧ ಹಕ್ಕು ಪತ್ರದಲ್ಲಿ ಉಲ್ಲೇಖಿಸಿದಂತೆ 10ರ ಸಾರಾಂಶದAತೆ ಸದ್ರಿ ಮಂಜುರಾತಿಯಲ್ಲಿ ಖುಮ್ಕಿ ಮಿತಿಗೆ ಸಂಬAಧಿಸಿದAತೆ ನ್ಯಾಯಾಲಯದ ಅಂತಿಮ ಅದೇಶಕ್ಕೆ ಒಳಪಟ್ಟಿರುತ್ತದೆ. ಹಾಗೂ ಡೀಮ್ಡ್ ಅರಣ್ಯ ವ್ಯಾಪ್ತಿಗೆ ಸಂಬAಧಿಸಿದAತೆ ಅರಣ್ಯ ಇಲಾಖೆಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ. ಅದುದರಿಂದ ಮಂಜೂರಾತಿಯನ್ನು ಮಾರ್ಪಡಿಸುವ ಅಥವಾ ರದ್ದುಗೊಳಿಸುವ ಹಕ್ಕು ಕಾಯ್ದಿರಿಸಿಕೊಳ್ಳಲಾಗಿದೆ. ಇಂತಹ ಹಕ್ಕು ಪತ್ರ ಹಿಂದೆ ಇದೇ ಶಾಸಕರ ನಿರ್ದೇಶನದ ಮೇರೆಗೆ ಅಂದಿನ ತಹಶೀಲ್ದಾರರು ಕೊಟ್ಟಂತಹ ತಾತ್ಕಾಲಿಕ ಹಕ್ಕು ಪತ್ರ ರದ್ದಾಗಿತ್ತು. ಅಂತಹ ಹಕ್ಕು ಪತ್ರ ಮತ್ತೊಮ್ಮೆ ಕೊಡುವುದು ಬೇಡ. ಮುಗ್ದ ಜನರನ್ನು ಸಂಕಷ್ಟ ತಳ್ಳುವುದು ಬೇಡವೆಂಬುವುದು ಕಾಂಗ್ರೆಸ್‌ನ ಸ್ವಷ್ಟವಾದ ನಿಲುವು ಆಗಿದೆ ಎಂದು ಇದೇ ಸಂದರ್ಭದಲ್ಲಿ ಮಂಜುನಾಥ ಪೂಜಾರಿ ಸ್ಪಷ್ಟಪಡಿಸಿದ್ದಾರೆ.
ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರನ್ನು ಸಮರ್ಥಿಸುವುವಾಗ ಬಿಜೆಪಿಯ ಕ್ಷೇತ್ರಾಧ್ಯಕ್ಷರು ಮತ್ತು ಪಕ್ಷದ ಇತರ ನಾಯಕರುಗಳಿಗೆ ಕಾನೂನಿನ ಮಾಹಿತಿ ಕೊರತೆಯಿದ್ದರೆ ತಾವು ತಮ್ಮ ಪಕ್ಷದ ನಾಯಕರು, ಕಾನೂನು ತಜ್ಞರಿದ್ದಾರೆ ಅವರಿಂದ ಮಾಹಿತಿಯನ್ನು ಅರಿತುಕೊಳ್ಳುವುದು ಒಳಿತು. ಕಾಂಗ್ರೆಸ್ 60 ವರ್ಷದಲ್ಲಿ ಭೂ ಸುಧಾರಣೆ ಕಾನೂನು, ಅಕ್ರಮ ಸಕ್ರಮ, 94ಸಿ ಖುಮ್ಕಿ ಹಕ್ಕು, ಆರಣ್ಯ ಕಾಯಿದೆ ಹಕ್ಕು, ಮಾಹಿತಿ ಹಕ್ಕು ಸೇರಿದಂತೆ ಜನರಿಗೆ ಅಗತ್ಯ ಇರುವಂತಹ ಸಾಮಾಜಿಕ ಹಕ್ಕುಗಳನ್ನು ಕಾಂಗ್ರೆಸ್ ಕೊಟ್ಟಿದೆ.
ಗೋಪಾಲ ಭಂಡಾರಿ ಮತ್ತು ವೀರಪ್ಪ ಮೊಯ್ಲಿ ಕೊಟ್ಟಂತಹ ಹಕ್ಕು ಪತ್ರದಿಂದ ಇವತ್ತು ಜನರು ಬದುಕುತ್ತಿದ್ದಾರೆ. ಬಡವರ ಬದುಕಿಗೆ ತೊಂದರೆಯಾಗುವ ಹಕ್ಕು ಪತ್ರಕ್ಕೆ ಕಾಂಗ್ರೆಸ್ ವಿರೋಧಿಸುತ್ತದೆ. ಇನ್ನೂ ಸರಿಪಡಿಸಲು ಅವಕಾಶ ಇದೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಪೂರ್ಣ ಬಹುಮತದಲ್ಲಿದೆ. ಕಾನೂನು ತಿದ್ದುಪಡಿ ಮಾಡಿ ಶಾಶ್ವತ ಹಕ್ಕು ಪತ್ರ ಕೊಡಿಸಿದಲ್ಲಿ ಕಾಂಗ್ರೆಸ್ ಕೂಡಾ ಅದನ್ನು ಸ್ವಾಗತಿಸಲಿದೆ ಎಂದರು.

ನೀಚ ಎಂಬುವುದು ತುಳುನಾಡಿನ ದೈವ! :-ಸಂಸ್ಕೃತಿ ಸಚಿವರಿಗೆ ತುಳು ಸಂಸ್ಕೃತಿ ಗೊತ್ತಿರಲಿ. ತುಳು ರೈತರು ತಮ್ಮ ಗೋವುಗಳನ್ನು ಕಾಪಾಡಲು ನೀಚ ದೈವವನ್ನೇ ನಂಬುತ್ತಾರೆ. ನೀಚ ಯಾವಾಗಲು ಕಾಯುವ ದೈವನಾಗಿದ್ದಾನೆ. ದೈವ, ದೇವರು, ರಾಮ, ಕೃಷ್ಣ ಎನ್ನುವ ಬಿ.ಜೆ.ಪಿ ನಾಯಕರು ಧಾರ್ಮಿಕ ಭಾವನೆಗೆ ದಕ್ಕೆ ಬರುವ ಹಾಗೂ ರಾಜಕೀಯಕ್ಕಾಗಿ ನೀಚ ಪದ ಬಳಸುವುದನ್ನು ಕಾಂಗ್ರೆಸ್ ಖಂಡಿಸುತ್ತದೆ. ಸಚಿವರು ಮತ್ತು ಹಿಂಬಾಲಕರು ತುಳು ಸಂಸ್ಕೃತಿಯ ಬಗ್ಗೆ ಬದುಕಿನ ಬಗ್ಗೆ ಮೊದಲು ತಿಳಿದುಕೊಂಡು ಪಕ್ಷ ನಿಯಮದಂತೆ ಸಂಸದೀಯ ಪದಬಳಕೆ ಬಳಸುವುದನ್ನು ಕಲಿಯಲಿ. ಶಾಸಕ ಸುನಿಲ್ ಕುಮಾರ್ ಮತ್ತು ಬಿ.ಜೆ.ಪಿ ಮುಖಂಡರು ಚುನಾವಣೆ ಸಂದರ್ಭದಲ್ಲಿ ಜನರಿಗೆ ಆಶ್ವಾಸನೆ ಕೊಟ್ಟಂತೆ ನುಡಿದಂತೆ ನಡೆಯಿರಿ. ಚುನಾವಣೆ ಹತ್ತಿರಕ್ಕೆ ಬರುವಾಗ ಮತ್ತೆ ಅದೇ ಚಾಳಿ ಮುಂದುವರಿಸುವುದನ್ನು ವಿರೋಧಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಕಾoಗ್ರೆಸ್ ಜಿಲ್ಲಾ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಕಾಂಗ್ರೆಸ್ ಕಿಸಾನ್ ಸಂಘದ ಮುಖಂಡ

ಉದಯಕುಮಾರ್ ಶೆಟ್ಟಿ , ಕಾಂಗ್ರೆಸ್ ಕಾರ್ಕಳ ತಾಲೂಕು ಶುಭದರಾವ್ ಮೊದಲಾದವರು ಉಪಸ್ಥಿತರಿದ್ದರು.

ವರದಿ: ಅರುಣ ಭಟ್ ಕಾರ್ಕಳ

error: