April 27, 2024

Bhavana Tv

Its Your Channel

ರೋಟರಿ ಸಂಸ್ಥೆ ವತಿಯಿಂದ ಇಂಟರಾಕ್ಟ್ ಸಂಸ್ಥೆಯ ಪದಗ್ರಹಣ

ಕಾರ್ಕಳ :- ಸ್ಥಳೀಯ ರೋಟರಿ ಸಂಸ್ಥೆ ವತಿಯಿಂದ ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರ್ಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿ ಇಂಟರಾಕ್ಟ್ ಸಂಸ್ಥೆಯ ಪದಗ್ರಹಣ ಕಾರ್ಯಕ್ರಮ ಗುರುವಾರ ನಡೆಯಿತು.

ಮುಖ್ಯ ಅತಿಥಿಯಾಗಿ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಎಮ್‌ಪಿಎಚ್‌ಎಫ್  ಮೋಹನ್ ಶೆಣೈ ಭಾಗವಹಿಸಿ ಪದಗ್ರಹಣ ನೆರವೇರಿಸಿದರು. ಇಂಟರಾಕ್ಟ್ ಸಂಸ್ಥೆಯ 2022-23ನೇ ಸಾಲಿನ ಅಧ್ಯಕ್ಷರಾಗಿ ನಮೃತಾ ಜೈನ್ ಅಧಿಕಾರ ಸ್ವೀಕರಿಸಿದರು. ಕಾರ್ಯದರ್ಶಿಯಾಗಿ ಯಶಿಕಾ ಆಯ್ಕೆಯಾದರು.

ರೋಟರಿ ಸಂಸ್ಥೆಯ ಚೇರ್‌ಮೆನ್ ಆಗಿರುವಂತಹ ಆರ್‌ಟಿಎನ್. ಶಶಿಕಲಾ ಹೆಗ್ಡೆ ಹಾಗೂ ಆರ್‌ಟಿಎನ್ ವಸಂತ್ ಎಂ. ಇವರು ಮಕ್ಕಳಿಗೆ ಒಂದೆರಡು ಹಿತನುಡಿಗಳನ್ನಾಡಿದರು. ರೋಟರಿ ಸಂಸ್ಥೆಯ ಅಧ್ಯಕ್ಷರಾದ ಆರ್‌ಟಿಎನ್ ಮೋಹನ್ ಶೆಣೈ ಇಂಟರಾಕ್ಟ್ ಸಂಸ್ಥೆಯ ಬಗ್ಗೆ ವಿವರಿಸಿದರು. ಆರ್‌ಟಿಎನ್ ರೇಖಾ ಉಪಾಧ್ಯಾಯ, ಆರ್‌ಟಿಎನ್ .ಅರುಣಾ ಶೆಣೈ, ಆರ್‌ಟಿಎನ್ ವಸಂತ್ ಎಂ., ಆರ್‌ಟಿಎನ್ ವೃಂದಾ ಶೆಣೈ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಹರ್ಷಿಣಿ ಕೆ. ಸ್ವಾಗತಿಸಿದರು. ಇಂಟರಾಕ್ಟ್ ಮಾರ್ಗದರ್ಶಕಿ ಸಮೀಕ್ಷಾ ವಂದಿಸಿದರು.

error: