May 3, 2024

Bhavana Tv

Its Your Channel

ಕಾರ್ಕಳ: ಅಜೆಕಾರು ಪೋಲಿಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ

ಕಾರ್ಕಳ: ಗಾಂಜಾ ಅಫೀಮು ಸೇವನೆಯಂತಹ ಪ್ರಕರಣಗಲು ಹೆಚ್ಚುತಿದ್ದು ಯುವಜನತೆ ನೇರವಾಗಿ ಭಾಗಿಯಾಗುತ್ತಿದೆ . ಅದಕ್ಕೆ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಅದರ ವಿರುದ್ಧ ಜಾಗೃತಿ ಮೂಡಿಸಬೇಕು ಎಂದು ಅಜೆಕಾರು ಠಾಣೆ ಠಾಣಾಧಿಕಾರಿ ತಿಮ್ಮೇಶ್ ಬಿ ಎನ್ ಹೇಳಿದರು ಅವರು ಬುಧವಾರ ಅಜೆಕಾರು ಬಸ್ ನಿಲ್ದಾಣ ಸಮೀಪ ಅಪರಾಧ ತಡೆ ಮಾಸಾಚರಣೆ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು .

ಕಳ್ಳತನ ಪ್ರಕರಣ ಗಳು ಹೆಚ್ಚುತಿದ್ದು ಅಪರಿಚಿತ ಸಂಶಯಾಸ್ಪದ ವ್ಯಕ್ತಿಗಳ ವಿರುದ್ಧ ಮಾಹಿತಿ ನೀಡಿ ಅದರಂತೆ ಪಟ್ಟಣದ ನಿವಾಸಿಗಳು ಮನೆಗಳನ್ನು ಬೀಗ ಹಾಕಿ ಬೇರೆಡೆಗೆ ಹೋಗುವಾಗ ಪೊಲೀಸ್ ಠಾಣೆಗೆ ಲಿಖಿತ ಪತ್ರದೊಂದಿಗೆ ಮಾಹಿತಿ ನೀಡಬೇಕು ಎಂದರು. ಅಪರಾಧ ತಡೆಯಲು ಪೋಲಿಸ್ ಇಲಾಖೆ ನಿಮ್ಮ ಜೊತೆಗಿದೆ ಎಂದು ಹೇಳಿದರು.

ಜಾಥದಲ್ಲಿ ಎ.ಎಸ್ ಐ ಚಂದ್ರ ಎ.ಕೆ ,ಸಂಜಯ್ ಸೇರಿದಂತೆ ಠಾಣಾ ಪೋಲೀಸ್ ಸಿಬ್ಬಂದಿಗಳು ಸಾರ್ವಜನಿಕರು ಭಾಗವಹಿಸಿದ್ದರು.

ವರದಿ:- ಅರುಣ ಭಟ್ಟ

error: