May 18, 2024

Bhavana Tv

Its Your Channel

ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಮಹಿಳಾ ರಕ್ಷಣೆಯ ಕುರಿತು ಕಾರ್ಯಕ್ರಮ

ಕಾರ್ಕಳ: ಸ್ವರಕ್ಷಣೆ ಹಾಗೂ ಮುನ್ನುಗ್ಗುವ ಛಾತಿ ಇವೆರಡೂ ಬದುಕಿಗೆ ಅತೀ ಅಗತ್ಯ. ವಿಶೇಷವಾಗಿ ಇವತ್ತಿನ ಸಂದರ್ಭದಲ್ಲಿ ಮಹಿಳಾ ವಿದ್ಯಾರ್ಥಿಗಳು ಸ್ವರಕ್ಷಣೆ ಮಾತ್ರವಲ್ಲ ಸದಾ ಎಚ್ಚರಿಕೆಯಿಂದ ಜೀವನ ನಿಭಾಯಿಸುವ ಅಗತ್ಯವಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಇವ್ಯಾವುವೂ ಕಂಡುಬರದು. ಅದನ್ನು ನಾವಾಗಿಯೇ ರೂಪಿಸಿಕೊಳ್ಳಬೇಕು ಎಂಬುದಾಗಿ ಕಾರ್ತಿಕ್ ಎಸ್. ಕಟೀಲ್ ಅವರು ಹೇಳಿದರು.

ಅವರು ಶ್ರೀ ಭುವನೇಂದ್ರ ಕಾಲೇಜಿನ ಮಹಿಳಾ ದೌರ್ಜನ್ಯ ಪರಿಹಾರ ಘಟಕ ಹಾಗೂ ಮಹಿಳಾ ಸಬಲೀಕರಣ ಘಟಕ ಮತ್ತು ಸುರಕ್ಷಾ ಟ್ರಸ್ಟ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ರಕ್ಷಣೆಯ ಕುರಿತಾದ ಕಾರ್ಯಕ್ರಮವನ್ನು ಉದ್ಘಾಟಿಸಿ ತರಬೇತಿ ಮಾಹಿತಿ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಎ. ಕೋಟ್ಯಾನ್ ಅವರು ಮಾತನಾಡಿ ಧೈರ್ಯ ಮತ್ತು ಪ್ರಾಮಾಣಿಕತೆಗಳು ಸ್ವರಕ್ಷಣೆಯ ಪ್ರಮುಖಾಂಗ. ವಿದ್ಯಾರ್ಥಿಗಳು ಇವೆರಡನ್ನು ಬದುಕಿನಲ್ಲಿ ಬಹುಜತನದಿಂದ ಪಾಲಿಸಿ ರೂಪಿಸಿಕೊಳ್ಳಬೇಕು ಎಂದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ದತ್ತಾತ್ರೇಯ , ತರಬೇತುದಾರರಾಗಿ ಬಂದ ಶೋಭಲತಾ ಕಟೀಲ್, , ವಿದ್ಯಾರ್ಥಿ ಪ್ರತಿನಿಧಿಗಳಾದ ನಿಶ್ಮಿತಾ, ನವಮಿ, ಸೌಮ್ಯ, ಸಿಂಚನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕರಾದ ಪ್ರೋ. ಸೋಫಿಯಾ ಸ್ವಾಗತಿಸಿ, ಇನ್ನೋರ್ವ ಸಂಯೋಜಕಿ ಪ್ರೊ. ಸ್ವರ್ಣಲತಾ ಶೆಣೈ ವಂದಿಸಿದರು. ಕು. ವಂಶಿ ಕಾರ್ಯಕ್ರಮ ನಿರೂಪಿಸಿದರು.

ವರದಿ: ಅರುಣ ಭಟ್ ಕಾರ್ಕಳ

error: