April 29, 2024

Bhavana Tv

Its Your Channel

ಮೂಡ್ಲಿ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆ

ಕಾರ್ಕಳ ; ತಾಲೂಕಿನಲ್ಲಿ ಮಂಗಳವಾರ ಬುಧವಾರ ಸಂಜೆ ಸುಮಾರು ಒಂದು ತಾಸಿಗೂ ಅಧಿಕ ಸಮಯ ಮಳೆ, ಮೂಡ್ಲಿ ಜಲಾಶಯದಲ್ಲಿ ನೀರಿನ ಮಟ್ಟ ಸ್ವಲ್ಪ ಏರಿಕೆ ಕಂಡು ನೀರಿನ ಒಳಹರಿವು ತುಸು ಹೆಚ್ಚಿದೆ.
ಕಾರ್ಕಳ ತಾಲೂಕಿನಲ್ಲಿ ಮಂಗಳವಾರ ಬುಧವಾರ ಸಂಜೆ ಸುಮಾರು ಒಂದು ತಾಸಿಗೂ ಅಧಿಕ ಹೊತ್ತು ಮಳೆಯಾಗಿದ್ದು ಪಶ್ಚಿಮ ಘಟ್ಟದ ತಪ್ಪಲಿನ ಮಾಳ ಪರಿಸರ ಸಹಿತ ಆಸುಪಾಸಿನಲ್ಲಿ ಅಧಿಕ ಮಳೆಯಾದ ಪರಿಣಾಮ ಮೂಡ್ಲಿ ಜಲಾಶಯದಲ್ಲಿ ನೀರಿನ ಮಟ್ಟ ಸ್ವಲ್ಪ ಏರಿಕೆ ಕಂಡು ನೀರಿನ ಒಳಹರಿವು ತುಸು ಹೆಚ್ಚಿದೆ ದೊಡ್ಡ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ನಿರೀಕ್ಷಿತ ನೀರಿನ ಮಟ್ಟ ಏರಿಕೆಯಾಗದೆ ತಿಳಿ ಬಣ್ಣದಲ್ಲಿ ನೀರು ಹರಿಯುತ್ತದೆ. ಸುಮಾರು ಎರಡು ತಿಂಗಳಿAದ ಮೂಡ್ಲಿಯಲ್ಲಿ ನೀರಿಲ್ಲದೆ ಮುಂಡ್ಲಿ ಜಲಾಶಯವು ಬರಿದಾಗಿದ್ದು ಕೆಲವು ದಿನಗಳಿಂದ ಸಾಧಾರಣ ಮಟ್ಟಿಗೆ ಜಲಾಶಯ ತುಂಬಿದೆ, ಮೂರು ನಾಲ್ಕು ದಿನಗಳಿಂದ ಇಲ್ಲಿನ ಪಂಪ್ ಹೌಸಿನಲ್ಲಿ ದಿನದ 24 ಗಂಟೆಯೂ ನೀರೆತ್ತುವ ಪಂಪುಗಳು ಚಾಲನೆಯಲ್ಲಿದ್ದು ಕಾಕಳ ಪುರಸಭೆ ವ್ಯಾಪ್ತಿಯಲ್ಲಿ ನೀರಿನ ಆಹಾಕಾರ ಸ್ವಲ್ಪ ಮಟ್ಟಿಗೆ ಬ್ರೇಕ್ ಬಿದ್ದಂತಾಗಿದೆ. ಗಟ್ಟ ಪ್ರದೇಶ ಮಾಳ ಹಾಗೂ ತೆಲ್ಲಾರು ಭಾಗದಿಂದ ನದಿಗಳೆರಡು ಹರಿದು ಬಂದು ಕೊಡ್ಯೆ ಜೊತೆಯಾಗಿ ಸೇರಿ ಮುಂಡ್ಲಿ ಜಲಾಶಯದ ಮೂಲಕ ಹರಿಯುತ್ತದೆ ಅಲ್ಲಲ್ಲಿ ಸಣ್ಣ ಪುಟ್ಟ ಹೊಳೆಗಳು ಸಂಧಿಸುತ್ತವೆ, ಇವೆಲ್ಲ ಒಂದಾಗಿ ಎಣ್ಣೆ ಹೊಳೆಯ ಮೂಲಕ ಸ್ವರ್ಣ ನದಿಯನ್ನು ಸೇರುತ್ತವೆ. ಉಡುಪಿ ಭಾಗಕ್ಕೆ ನೀರು ಹರಿಸುವಲ್ಲಿ ಈ ನದಿ ಮುಖ್ಯ ಪಾತ್ರ ವಹಿಸುತ್ತದೆ.
ವರದಿ ; ಅರುಣ ಭಟ್ ಕಾರ್ಕಳ

error: