May 2, 2024

Bhavana Tv

Its Your Channel

ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿ ವೇತನ ವಿತರಣೆ,

ಕಾರ್ಕಳ : ಜಿಎಸ್‌ಬಿ ಸಮಾಜ ಹಿತ ರಕ್ಷಣಾ ವೇದಿಕೆ (ರಿ.) ಮತ್ತು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ (ರಿ.)ಮುದರಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ” ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿ ವೇತನ ವಿತರಣೆ, ಶೈಕ್ಷಣಿಕ ಪ್ರೇರಣಾ ಕಾರ್ಯಾಗಾರ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ” ಆಗಸ್ಟ್ 6, ಆದಿತ್ಯವಾರದಂದು ಉಡುಪಿ ಅಂಬಾಗಿಲಿನಲ್ಲಿರುವ ” ಅಮೃತ್ ಗಾರ್ಡನ್ ಆಡಿಟೋರಿಯಂ” ನಲ್ಲಿ ಜರುಗಲಿರುವುದು.
ಬೆಳಿಗ್ಗೆ 9.30 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭವನ್ನು ಮಣಿಪಾಲ ಹೌಸಿಂಗ್ ಫೈನಾನ್ಸ್ ಮತ್ತು ಸಿಂಡಿಕೇಟ್ ಲಿಮಿಟೆಡ್ ನ ಸಂಸ್ಥಾಪಕರಾದ ಶ್ರೀ ತೋನ್ಸೆ ನಾರಾಯಣ ಪೈ ಯವರು ಉದ್ಘಾಟಸಲಿದ್ದು,
ಕಲ್ಯಾಣಪುರ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಅನಂತ ಪದ್ಮನಾಭ ಕಿಣಿಯವರು ಅಧ್ಯಕ್ಷತೆ ವಹಿಸಿಲಿರುವರು.
ದಿಕ್ಸೂಚಿ ಭಾಷಣವನ್ನು ಬೆಂಗಳೂರಿನ ವಿಪ್ರೋ ಲಿಮಿಟೆಡ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಜನರಲ್ ಮ್ಯಾನೇಜರ್ ಶ್ರೀ ಪ್ರವೀಣ್ ಕಾಮತ್ ಕುಂಬಳೆ ಅವರು ನಡೆಸಿಕೊಡಲಿರುವರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕಿನ ಸಿಬಿಓ ಶ್ರೀ ಗೋಕುಲದಾಸ್ ಪೈ , ಮೈಸೂರಿನ ಪೈ ಗ್ರೂಪ್ ಆಫ್ ಹೋಟೆಲ್ ನ ಜನರಲ್ ಮ್ಯಾನೇಜರ್ ಶ್ರೀ ಕೆ. ಮಹೇಶ್ ಕಾಮತ್ , ಉದ್ಯಾವರದ ಜಯಲಕ್ಷ್ಮಿ ಸಿಲ್ಕ್ಸ್ ನ ಆಡಳಿತ ಪಾಲುದಾರರಾದ ಶ್ರೀಮತಿ ಅಪರ್ಣ ಆರ್. ಹೆಗಡೆ ಉಪಸ್ಥಿತರಿರುವರು.
ದಿವಂಗತ ಶ್ರೀ ಎಂ. ವಿ .ಕಿಣಿ ಶ್ರದ್ಧಾಂಜಲಿ “ಸ್ಮೃತಿ ನಮನ”: ವನ್ನು ನ್ಯಾಚುರಲ್ ಐಸ್ ಕ್ರೀಮ್ ನ ಆಡಳಿತ ನಿರ್ದೇಶಕರಾದ ಶ್ರೀ ರಘುನಂದನ್ ಎಸ್. ಕಾಮತ್ ರವರು ನಡೆಸಿಕೊಡಲಿರುವರು.
ಶೈಕ್ಷಣಿಕ ಪ್ರೇರಣಾ ಕಾರ್ಯಾಗಾರ: ಅದೇ ದಿನ ಅಪರಾಹ್ನ12:00 ಗಂಟೆಯಿAದ 1:00 ಗಂಟೆಯವರೆಗೆ
ವಿದ್ಯಾರ್ಥಿಗಳಿಗೆ ” ಉನ್ನತ ಶಿಕ್ಷಣ ಮತ್ತು ಉದ್ಯೋಗಾವಕಾಶಗಳು ಹಾಗೂ ಸಂಸ್ಕಾರಯುತ ನಡವಳಿಕೆಗಳ “ಬಗ್ಗೆ ಶೈಕ್ಷಣಿಕ ಪ್ರೇರಣಾ ಕಾರ್ಯಾಗಾರವನ್ನು ತ್ರಿಶಾ ವಿದ್ಯಾ ಶೈಕ್ಷಣಿಕ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಸಿಎ ಗೋಪಾಲ ಕೃಷ್ಣ ಭಟ್ ರವರು ನಡೆಸಿಕೊಡಲಿರುವರು.
ಪ್ರತಿಭಾ ಪುರಸ್ಕಾರ: ಎಸ್.ಎಸ್.ಎಲ್. ಸಿ, ಪಿಯುಸಿ ಪದವಿ ತರಗತಿಗಳಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆ ದಾಖಲಿಸಿದ ವಿದ್ಯಾರ್ಥಿಗಳಿಗೆ ಹಾಗೂ ಇತ್ತೀಚೆಗೆ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಾಗೂ ಪಿಎಚ್ಡಿ ಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ” ವಿಶೇಷ ಪ್ರತಿಭಾ ಪುರಸ್ಕಾರ ” ಹಾಗೂ ಎಸ್. ಎಸ್. ಎಲ್. ಸಿ ಸಂಸ್ಕೃತ ವಿಷಯದಲ್ಲಿ 100 ಅಂಕಗಳ ಸಾಧನೆಗೈದ ವಿದ್ಯಾರ್ಥಿಗಳಿಗೆ ದಿವಂಗತ ಪಡುಬಿದ್ರೆ ದೇವಿದಾಸ ಶರ್ಮ ಸ್ಮಾರಕ ಪುರಸ್ಕಾರ ಪ್ರದಾನ ನಡೆಯಲಿರುವುದು.

ಸಮಾರೋಪ ಸಮಾರಂಭ: ಮಧ್ಯಾಹ್ನ 2:00 ಗಂಟೆಯಿAದ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಅನಂತ ವೈದಿಕ ಕೇಂದ್ರದ ವೇದಮೂರ್ತಿ ಶ್ರೀ ಚೇಂಪಿ ರಾಮಚಂದ್ರ ಅನಂತ ಭಟ್ ರವರು ವಹಿಸಲಿದ್ದು, ದಿಕ್ಸೂಚಿ ಭಾಷಣವನ್ನು ಇನ್ವೆಂಜರ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರಾದ ಶ್ರೀ ಸತ್ಯೇಂದ್ರ ಪೈಯವರು ಮಾಡಲಿರುವರು.

ಮುಖ್ಯ ಅತಿಥಿಗಳಾಗಿ ರಿಲಯನ್ಸ್ ರಿಟೇಲ್_ಕರ್ನಾಟಕದ ಸ್ವತ್ತು ಸ್ವಾಧೀನ ವಿಭಾಗದ ಸೀನಿಯರ್ ಮ್ಯಾನೇಜರ್ ಶ್ರೀ ಉಮೇಶ್ ಪ್ರಭು , ಜಯಲಕ್ಷ್ಮಿ ಸಿಲ್ಕ್ ಉಡುಪಿಯ ಆಡಳಿತ ಪಾಲುದಾರರಾದ ಶ್ರೀಮತಿ ಜಯಲಕ್ಷ್ಮಿ .ವಿ.ಹೆಗಡೆ, ಸಾಗರದ ಕೈಗಾರಿಕೋದ್ಯಮಿ ದಂಪತಿಗಳಾದ ಶ್ರೀ ಶಿವಾನಂದ *ಭಂಡಾರ್ಕರ್ ಮತ್ತು ಶ್ರೀಮತಿ ಉಮಾ ಭಂಡಾರ್ಕರ್ ರವರು ಉಪಸ್ಥಿತರಿರುವರು.

ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿವೇತನ ವಿತರಣೆ:
ಜಿ ಎಸ್ ಬಿ ಸಮಾಜ ಹಿತ ರಕ್ಷಣಾವೇದಿಕೆ ( ರಿ.) ಕಳೆದ 12 ವರ್ಷಗಳಿಂದ ಸಮಾಜ ಸಂಘಟನೆ ಮತ್ತು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಕೋಟೇಶ್ವರದಲ್ಲಿ ಪ್ರಪ್ರಥಮ ” ಬೃಹತ್ ಜಿಎಸ್‌ಬಿ ಸ್ವಾಭಿಮಾನ ಜಾಗ್ರತಿ ಸಮಾವೇಶ”, ಕಲ್ಯಾಣಪುರದ ನೇಜಾರಿನಲ್ಲಿ ” ಬೃಹತ್ ಜಿಎಸ್‌ಬಿ ಸಾಮಾಜಿಕ ಜಾಗೃತಿ ಸಮಾವೇಶ “, ಬೈಂದೂರು, ಚೇಂಪಿ, ಮಲ್ಪೆ , ಮೂಡಬಿದ್ರೆ, ಹಾಗೂ ಮಂಗಳೂರಿನಲ್ಲಿ ” ಬೃಹತ್
ಜಿ. ಎಸ್. ಬಿ ಸಾಮಾಜಿಕ ಜಾಗೃತಿ ಪ್ರಾದೇಶಿಕ ಸಮಾವೇಶ”, ಕಾರ್ಕಳದಲ್ಲಿ ತಾಲೂಕು ಮಟ್ಟದ ಸಮಾವೇಶ, ಹಾಗೂ ಹೆಜಮಾಡಿಯಲ್ಲಿ ಅಭೂತಪೂರ್ವವಾದ ” ಬೃಹತ್ ಜಿ.ಎಸ್. ಬಿ ವಿಶ್ವ ಸಮ್ಮೇಳನ “ವನ್ನು ಆಯೋಜಿಸಿ ಯಶಸ್ವಿಯಾಗಿರುತ್ತದೆ.

ಉಡುಪಿ ಜಿಲ್ಲೆಯ ಜಿಎಸ್‌ಬಿ ಸಮಾಜದ 8000 ಕ್ಕೂ ಮಿಕ್ಕಿ ಕುಟುಂಬಗಳ ಸಮೀಕ್ಷೆ ಮಾಡಿ ” ಜಿ.ಎಸ್.ಬಿ. ಡೈರೆಕ್ಟರಿ” ಪ್ರಕಟಿಸಿದ್ದು, ಕುಟುಂಬ ಚೈತನ್ಯ ನಿಧಿ ,ಆರೋಗ್ಯ ಚೈತನ್ಯ ನಿಧಿ ,ವಿದ್ಯಾ ಪೋಷಕ ನಿಧಿ ಸಾಮಾಜಿಕ ಯೋಜನೆಗಳ ಮೂಲಕ ಆರ್ಥಿಕವಾಗಿ ಹಿಂದುಳಿದಿರುವ ಸಮಾಜದ ಕುಟುಂಬಗಳಿಗೆ ಸಹಾಯ ಹಸ್ತವನ್ನು ನೀಡುತ್ತಾ ಬರುತ್ತಿದೆ.

ಆರ್ಥಿಕವಾಗಿ ತೀರಾ ಹಿಂದುಳಿದಿರುವ, ಎರಡು ಕುಟುಂಬಗಳಿಗೆ ಮನೆ ನಿರ್ಮಾಣ ಹಾಗೂ ಎಂಟು ಮನೆಗಳಿಗೆ ಉಚಿತ ಶೌಚಾಲಯ ,ಸ್ನಾನ _ಗೃಹದ ವ್ಯವಸ್ಥೆ ಮಾಡಿಕೊಡಲಾಗಿದೆ.

ಭಾರತೀಯ ಸೇನೆಯ ಗಾಯಾಳು ಸೈನಿಕರ ಕಲ್ಯಾಣ ನಿಧಿ ಖಾತೆಗೆ, 10,000ಕ್ಕಿಂತಲೂ ಹೆಚ್ಚಿನ ಸಮಾಜ ಬಾಂಧವರಿAದ ಸಂಗ್ರಹಿಸಿದ ಒಂದು ಕೋಟಿ, ಒಂದು ಲಕ್ಷ 87 ಸಾವಿರ ರೂಪಾಯಿ ಮೊತ್ತದ ದೇಣಿಗೆಯನ್ನು ಅಂದಿನ ರಕ್ಷಣಾ ಸಚಿವರಾಗಿದ್ದ ಶ್ರೀ ಮನೋಹರ ಪ್ರಭು ಪಾರೀಕರ್ ರವರಿಗೆ ” ವಿಶ್ವ ಜಿ ಎಸ್ ಬಿ ಸಮ್ಮೇಳನದ ವೇದಿಕೆ”ಯಲ್ಲಿ ಹಸ್ತಾಂತರಿಸಲಾಗಿದೆ.

ಕಳೆದ 9 ವರ್ಷಗಳಿಂದ 1700 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ, 2.23 ಕೋಟಿ ಮೌಲ್ಯದ ವಿದ್ಯಾರ್ಥಿ ವೇತನವನ್ನು ಸಮಾಜದ ದಾನಿಗಳ ಸಹಭಾಗಿತ್ವದಿಂದ ವಿತರಿಸಿದೆ.

ಈ ವರ್ಷದ ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿವೇತನ ಯೋಜನೆ ಯಡಿಯಲ್ಲಿ 500 ಕ್ಕೂ ಹೆಚ್ಚಿನ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳಿಗೆ ” ಶೈಕ್ಷಣಿಕ ದತ್ತು ಯೋಜನೆ “ಯ ಮೂಲಕ ಸುಮಾರು 75 ಲಕ್ಷ ರೂಪಾಯಿ ವಿದ್ಯಾರ್ಥಿವೇತನವನ್ನು ವಿತರಿಸಲಿದೆ ಎಂದು ಜಿಎಸ್‌ಬಿ ಸಮಾಜ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀ ಜಿ ,ಸತೀಶ್ ಹೆಗಡೆ, ಕೋಟ, ಸಂಚಾಲಕರಾದ ಶ್ರೀ ಆರ್. ವಿವೇಕಾನಂದ ಶೆಣೈ, ಪ್ರಧಾನ ಕಾರ್ಯದರ್ಶಿ ಶ್ರೀ ಸಾಣೂರು ನರಸಿಂಹ ಕಾಮತ್ ಹಾಗೂ ” ವಿದ್ಯಾ ಪೋಷಕ ನಿಧಿ” ವಿದ್ಯಾರ್ಥಿ ವೇತನ ಯೋಜನೆಯ ಅಧ್ಯಕ್ಷರಾದ ಶ್ರೀ ಸಿಎ ಎಸ್.ಎಸ್. ನಾಯಕ್ ಹಾಗೂ ಸಂಚಾಲಕರಾದ ಶ್ರೀ ವಿಜಯಕುಮಾರ್ ಶೆಣೈ ಯು ವರು ಪತ್ರಿಕಾಗೋಷ್ಠಿಯ ಮೂಲಕ ತಿಳಿಸಿರುತ್ತಾರೆ.
ವರದಿ ; ಅರುಣ ಭಟ್ ಕಾರ್ಕಳ

error: