November 27, 2023

Bhavana Tv

Its Your Channel

ಶಾಸಕ ಸುನಿಲಕುಮಾರ ರಿಂದ ಸುದ್ದಿಗೋಷ್ಟಿ

ಕಾರ್ಕಳ; ಹಲವು ದಿನಗಳಿಂದ ಕಾರ್ಕಳ ತಾಲೂಕಿನ ಪ್ರಸಿದ್ಧವಾಗಿರುವ ಪರಶುರಾಮ ಥೀಮ್ ಪಾರ್ಕ್ ನ ಬಗ್ಗೆ ಕೆಲವುವ್ಯಕ್ತಿಗಳು ಧಕ್ಕೆ ತರುವಂತ ವಿಷಯಗಳ ಕುರಿತಂತೆ ಮಾತುಕತೆ ಮಾಡುತ್ತಿದ್ದಾರೆ ಈ ಥೀಮ್ ಪಾರ್ಕಿಗೆ ರಾಜಕೀಯ ಬಣ್ಣ ಲೇಪಿಸುವಂತ ಕೆಲಸ ಕಾಂಗ್ರೆಸ್ ಪರೋಕ್ಷವಾಗಿ ಮಾಡುತ್ತಿದೆ ಎಂದು ಶಾಸಕ ಸುನಿಲಕುಮಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಪರಶುರಾಮ್ ಥೀಮ್ ಪಾರ್ಕನ್ನು ಸೇರಿಸಿಕೊಂಡು ಕಾರ್ಕಳದ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ಕೂಡಿರಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಇಲಾಖೆಯ ಜವಾಬ್ದಾರಿ. ಪರಶುರಾಮ ಥೀಮ್ ಪಾರ್ಕ್ ನ ಗುಣಮಟ್ಟದಲ್ಲಿ ಲೋಪ ದೋಷ ಉಂಟಾದಲ್ಲಿ ಇಲಾಖೆ ವತಿಯಿಂದ ತನಿಖೆ ಮಾಡಲಿ ನಾನು ಈ ಕಾರ್ಯಕ್ಕೆ ಸಂಪೂರ್ಣ ಬೆಂಬಲವನ್ನು ಕೊಡುತ್ತೇನೆ. ಕಳೆದ ಆರು ತಿಂಗಳಿAದ ಕಾರ್ಕಳದ ಅಭಿವೃದ್ಧಿಯನ್ನು ಅಪಹಾಸ್ಯ ಮಾಡುವಂತಹ ಒಂದು ಗುಂಪು ಹುಟ್ಟಿಕೊಂಡಿದೆ. ಇದರ ನೇತೃತ್ವವನ್ನು ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಯವರು ವಹಿಸಿಕೊಂಡಿರುತ್ತಾರೆ. ಕಾರ್ಕಳ ತಾಲೂಕಿನ ಅಭಿವೃದ್ಧಿ ವಿಷಯದಲ್ಲಿ ಅವರು ವಿಘ್ನ ಸಂತೋಷ ವನ್ನ ವ್ಯಕ್ತಪಡಿಸುತ್ತಾರೆ. ಕಾರ್ಕಳದ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಹೀಯಾಳಿಸುವ ಕಾರ್ಯ ಕಾರ್ಕಳದಲ್ಲಿ ನಡೆಯುತ್ತದೆ. ಇದನ್ನ ಯಾವುದೇ ಕಾರಣಕ್ಕೂ ನಾವು ಸಹಿಸಿಕೊಳ್ಳುವುದಿಲ್ಲ ವೆಂದು ಕಾರ್ಕಳ ಕ್ಷೇತ್ರದ ಶಾಸಕರಾದ ವಿ. ಸುನಿಲ್ ಕುಮಾರ್ ಕಾರ್ಕದ ಪ್ರವಾಸಿ ಮಂದಿರದಲ್ಲಿ ಜರುಗಿದ ಪತ್ರಿಕಾಗೋಷ್ಠಿ ಯನ್ನು ಉದ್ದೇಶಿಸಿ ಮಾತನಾಡಿದರು. ಸಂದರ್ಭದಲ್ಲಿ ಮನಿರಾಜ್ ಶೆಟ್ಟಿ, ನವೀನ್ ನಾಯಕ್, ಜಯರಾಮ್ ಸಲಿಯಾನ್, ಪ್ರವೀಣ್ ಸಾಲಿಯಾನ್, ವಿಕ್ರಮ್ ಹೆಗಡೆ, ಉದಯ ಹೆಗಡೆ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ವರದಿ ; ಅರುಣ ಭಟ್, ಕಾರ್ಕಳ

error: