
ಕಾರ್ಕಳ : ಬೈಲೂರು ಪರಶುರಾಮ ಮೂರ್ತಿಯ ಪರಿಶುದ್ಧತೆ ಪರಿಶೀಲನೆ ನಡೆಸಬೇಕೆಂದು ಆಗ್ರಹಿಸಿ ದಿವ್ಯ ನಾಯಕ್ ಅವರ ನೇತೃತ್ವದ ತಂಡ ಕಳೆದ ಆರು ದಿನಗಳಿಂದ ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ಅನಿದಿಷ್ಟವಾದಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು ಸೆಪ್ಟೆಂಬರ್ 7ರಂದು ಕುಂದಾಪುರ ಸಹಾಯಕ ಆಯುಕ್ತರಾದ ರಶ್ಮಿ ಅವರು ಸತ್ಯಾಗ್ರಹ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿದರು.
ಈ ಸಂದರ್ಭ ಹೋರಾಟಗಾರರ ಬಳಿ ಮಾತನಾಡಿದ ಅವರು ಪ್ರತಿಯೊಂದು ಯೋಜನೆಯು ಕಾಮಗಾರಿ ಪೂರ್ಣಗೊಂಡ ಬಳಿಕ ಮೂರನೇ ಪಾರ್ಟಿ ಅವರಿಂದ ಗುಣಮಟ್ಟ ಪರಿಶೀಲನೆ ನಡೆಸುತ್ತೇವೆ. ಹಾಗೆಯೇ ಒಂದು ತಿಂಗಳ ಒಳಗೆ ಈ ಪರಶುರಾಮನ ಮೂರ್ತಿಯ ಸಂಪೂರ್ಣ ಪರಿಶೀಲನೆ ಯಾಗಲಿದೆ ಎಂದು ತಿಳಿಸಿ ಉಪವಾಸ ಸತ್ಯಾಗ್ರಹ ಕೈ ಬಿಡುವಂತೆ ಮನವಿ ಮಾಡಿದರು. ಪ್ರತಿಭಟನ ಗಾರರಾದ ಚಿತ್ತರಂಜನ್ ಶೆಟ್ಟಿ ಅವರು ಪರಿಶೀಲನೆ ಕುರಿತು ಇಂದು ಸಂಜೆಯೊಳಗೆ ಪತ್ರಿಕಾ ಹೇಳಿಕೆ ಬಂದಲ್ಲಿ ಮಾತ್ರ ಉಪವಾಸ ಸತ್ಯಾಗ್ರಹ ಬಿಡುದಾಗಿ ಹೇಳಿದರು. ಸಹಾಯಕ ಅ ಯುಕ್ತರಾದ ರಶ್ಮಿ ಅವರು ಎರಡು ತಿಂಗಳ ಒಳಗೆ ಪರಿಶೀಲನೆ ನಡೆಸುವುದಾಗಿ ಹೇಳಿದಾಗ ಒಪ್ಪದ ಪ್ರತಿಭಟನೆ ಗಾರರು ಎರಡು ತಿಂಗಳ ಅವಧಿಯಲ್ಲಿ ಮೂರ್ತಿ ಬದಲಾವಣೆಗಾಗಿ ಎಂದು ಪ್ರಶ್ನಿಸಿದರು. ಕೇವಲ 15 ದಿನದ ಒಳಗೆ ಒಂದು ಮೂರ್ತಿಯನ್ನು ಪ್ರತಿಷ್ಠೆ ಮಾಡಲಾಗುತ್ತದೆ ಎಂದಾದರೆ ಅದೇ ಮೂರ್ತಿಯನ್ನು ಒಂದು ವಾರದೊಳಗೆ ಪರಿಶೀಲನೆ ನಡೆಸಲು ಸಾಧ್ಯವಿಲ್ಲವೇ ಎಂದು ಸತ್ಯಾಗ್ರಹಿ ವಿವೇಕಶೆಟ್ಟಿ ಪ್ರಶ್ನಿಸಿದರು. ಅದಲ್ಲದೆ ಪರಶುರಾಮನ ಮೂರ್ತಿ ಬಳಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಅಲ್ಲದೆ ಪರಿಶೀಲನೆ ಆಗುವವರೆಗೆ ಅಲ್ಲಿ ಯಾವುದೇ ಕಾಮಗಾರಿಕೆಗಳನ್ನು ನಡೆಸಲು ಅನುಮತಿ ನೀಡಬಾರದು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಆಯುಕ್ತರಲ್ಲಿ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಕಾರ್ಕಳ ತಾಲೂಕು ತಹಶೀಲ್ದಾರ್ ಅನಂತ ಕೃಷ್ಣ, ಜಿಲ್ಲಾ ಕಾಂಗ್ರೆಸ್ ವಕ್ತಾರ ಶುಭದರಾವ್, ಮಹಿಳಾ ಘಟಕದ ನಗರ ಅಧ್ಯಕ್ಷ ಕಾಂತಿ ಶೆಟ್ಟಿ, ಪುರಸಭೆ ಮಾಜಿ ಅಧ್ಯಕ್ಷ ಸುಬ್ಬಿತ್ ಎನ್ನಾರ್, ಕುಕ್ಕುಂದೂರು ಮಾಜಿ ಪಂಚಾಯತ್ ಸದಸ್ಯ ರುಕ್ಮಯ್ಯ ಶೆಟ್ಟಿಗಾರ್ ಮುಂತಾದವರು ಉಪಸ್ಥಿತರಿದ್ದರು
ವರದಿ : ಅರುಣ ಭಟ್, ಕಾರ್ಕಳ
More Stories
ಪಾದಚಾರಿ ಮೇಲೆ ಕ್ರೇನ್ ಹರಿದು ಸ್ಥಳದಲ್ಲೆ ಸಾವು,
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ