May 13, 2024

Bhavana Tv

Its Your Channel

ವಿಶೇಷ ಚೆನ್ನೆಮಣೆ ಪ್ರಾತ್ಯಕ್ಷಿಕೆ ಮತ್ತು ಸ್ಪರ್ಧೆ

ಕಾರ್ಕಳ : ಎಸ್.ವಿ.ಟಿ ವನಿತಾ ಪದವಿ ಪೂರ್ವ ಕಾಲೇಜು ಕಾರ್ಕಳ ಇವರ ಆಶ್ರಯದಲ್ಲಿ ಸುವರ್ಣ ಸಂಭ್ರಮದ ಅಂಗವಾಗಿ ಜಾನಪದ ಕ್ರೀಡೆಗಳ ಅಳಿವು ಮತ್ತು ಹೊಳವು ಯುವ ಪೀಳಿಗೆಯ ಕೈಯಲ್ಲಿ ಆಟಿ ತಿಂಗಳ ವಿಶೇಷ ಚೆನ್ನೆಮಣೆ ಪ್ರಾತ್ಯಕ್ಷಿಕೆ ಮತ್ತು ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಶಿಕ್ಷಣ ಸಂಯೋಜಕರಾದ ಬಾಲಕೃಷ್ಣ ನಾಯಕ್ ಉದ್ಘಾಟಿಸಿ ಮಾತನಾಡುತ್ತಾ ಜಾನಪದ ಕ್ರೀಡೆಗಳ ಉಳಿವಿಗಾಗಿ ಹಮ್ಮಿಕೊಂಡಿರುವ ಇಂತಹ ಸ್ಪರ್ಧೆ ಅಪರೂಪದ ಸ್ಪರ್ಧೆಯಾಗಿದೆ. ಇಂತಹ ಸ್ಪರ್ಧೆಗಳು ಮುಂದಿನ ದಿನಗಳಲ್ಲಿ ಎಲ್ಲಾ ಕಡೆ ಪಡೆಯುವಂತಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ವಿ ಎಜ್ಯುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಕೆ ಪಿ ಶೆಣೈ ಮಾತನಾಡುತ್ತಾ ಅಳಿವಿನ ಅಂಚಿನಲ್ಲಿರುವ ಚೆನ್ನೆಮಣೆಯಂತಹ ಜಾನಪದ ಕ್ರೀಡೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಅನಿವಾರ್ಯತೆ ಇದೆ. ಕಾಲೇಜಿನ ಸುವರ್ಣ ಸಂಭ್ರಮದ ಈ ಸಂದರ್ಭದಲ್ಲಿ ಇಂತಹ ಸ್ಪರ್ಧೆಗಳನ್ನು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವುದು ಸಂತೋಷವನ್ನು ನೀಡಿದೆ. ಈ ಚೆನ್ನೆಮಣೆ ಪ್ರಾತ್ಯಕ್ಷಿಕೆ ಮತ್ತು ಸ್ಪರ್ಧೆ ಎಲ್ಲರಿಗೂ ಸ್ಫೂರ್ತಿ, ಪ್ರೇರಣೆಯನ್ನು ನೀಡಲಿ ಎಂದರು.
ಚೆನ್ನೆಮಣೆ ಆಟ _ಅದ್ಭುತವಾದ ಏಕಾಗ್ರತೆಯನ್ನು, ಸೃಜನಶೀಲ ವ್ಯಕ್ತಿತ್ವವನ್ನು, ಗಣಿತ ಶಾಸ್ತ್ರದ ಪರಿಜ್ಞಾನವನ್ನೂ, ವೈಚಾರಿಕ ಮಹತ್ವವನ್ನೂ, ಧಾರ್ಮಿಕ ಮನೋಭಾವವನ್ನು, ಜಾನಪದ ಕ್ರೀಡೆ ಮತ್ತು ಅದರ ಮಹತ್ವವನ್ನೂ, ಜಾನಪದ ಕಥೆಗಳನ್ನೂ, ಮಾತ್ರವಲ್ಲದೆ ಕೌಟುಂಬಿಕ ಸಂಬAಧಗಳನ್ನೂ, ಹಳೆ ತಲೆಮಾರಿನಿಂದ ಇಂದಿನ ಯುವ ಪೀಳಿಗೆಗೆ ವರ್ಗಾಯಿಸುವುದು ಮಾತ್ರವಲ್ಲದೆ, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿಯೂ ಇದೆ ಎಂದು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಹಿರಿಯ ಕಲಾವಿದ ಚಂದ್ರನಾಥ ಬಜಗೋಳಿ ಯವರು ನುಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ರಾಮದಾಸ ಪ್ರಭು, ಮುಖ್ಯೋಪಾಧ್ಯಾಯರಾದ ಯೋಗೇಂದ್ರ ನಾಯಕ್ , ತೀರ್ಪುಗಾರರಾದ ಯಶೋಧರ ಶೆಟ್ಟಿ ಮಾಳ ಉಪಸ್ಥಿತರಿದ್ದರು.
ಚೆನ್ನೆಮಣೆ ಪ್ರಾತ್ಯಕ್ಷಿಕೆ ಮತ್ತು ಸ್ಪರ್ಧೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಎಪ್ಪತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು ಹಾಗೂ ಹದಿನೆಂಟು ಚೆನ್ನೆಮಣೆ ಸ್ಪರ್ಧೆಗೆ ಬಳಸಿರುವುದು ವಿಶೇಷವಾಗಿತ್ತು.
ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಕುಮಾರಿ ಸುವೀಕ್ಷಾ ಸ್ವಾಗತಿಸಿದರು. ಕಾರ್ಯದರ್ಶಿ ಕುಮಾರಿ ಮನೀಕ್ಷಾ ವಂದಿಸಿದರು.
ಹತ್ತನೇ ತರಗತಿಯ ವಿದ್ಯಾರ್ಥಿನಿ ಕು. ಸಂದರ್ಶಿನಿ ನಿರೂಪಿಸಿದರು.
ಸ್ಪರ್ಧಾ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ರಾಮದಾಸ್ ಪ್ರಭು ಹಾಗೂ ಹಿರಿಯ ಮುಖ್ಯೋಪಾಧ್ಯಾಯರಾದ ಯೋಗೇಂದ್ರ ನಾಯಕ್ ಸ್ಪರ್ಧಾ ವಿಜೇತರಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ಚಂದ್ರನಾಥ ಬಜಗೋಳಿ, ತೀರ್ಪುಗಾರರಾದ ಯಶೋಧರ ಶೆಟ್ಟಿ ಮಾಳ, ಶಿಕ್ಷಕರಾದ ಹರೀಶ್ ಶೆಟ್ಟಿ, ಸುಧಾಕರ, ನಾಗರಾಜ್ ಬಿ,
ಸುಬ್ರಹ್ಮಣ್ಯ ಉಪಾಧ್ಯಾಯ, ಶ್ರೀಮತಿ ಪ್ರತಿಮಾ ದೇವದಾಸ್, ಶ್ರೀಮತಿ ಶಕುಂತಲಾ, ಶ್ರೀಮತಿ ಶ್ರೀದೇವಿ, ಶ್ರೀಮತಿ ಸ್ವಪ್ನಾ, ಶ್ರೀಮತಿ ಚಂದ್ರಿಕಾ , ಶ್ರೀಮತಿ ಆಶಾ, ಸುರೇಶ್ ಎಂ, ಸುನಿಲ್ ಎಸ್ ಶೆಟ್ಟಿ ಉಪಸ್ಥಿತರಿದ್ದರು.
ಕುಮಾರಿ ಸಂದರ್ಶಿನಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನಾ ಮಾತುಗಳನ್ನಾಡಿದ ಶಿಕ್ಷಕ ಶ್ರೀ ದೇವದಾಸ್ ಕೆರೆಮನೆ ವಂದಿಸಿದರು.
ವರದಿ : ಅರುಣ ಭಟ್, ಕಾರ್ಕಳ

error: