May 6, 2024

Bhavana Tv

Its Your Channel

ಬಂಟಕಲ್ ಕಾಲೇಜಿನಲ್ಲಿ ಅಂತರಾಷ್ಟಿçÃಯ ಯೋಗ ದಿನ ಆಚರಣೆ.

ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಘಟಕ, ಎನ್ ಸಿ ಸಿ ಘಟಕ ಮತ್ತು ಯೋಗ ಮತ್ತು ಫಿಟ್‌ನೆಸ್ ಘಟಕವು ಸ್ವಾತಂತ್ರö್ಯ ದಿನದ ಅಮೃತ ಮಹೋತ್ಸವ ಮತ್ತು ಅಂತರಾಷ್ಟೀಯ ಯೋಗ ದಿನದ ಅಂಗವಾಗಿ ದಿನಾಂಕ 21 ಜೂನ್ 2023 ರಂದು “ವಸುಧೈವ ಕುಟುಂಬಕಮ್” ಎಂಬ ವಿಷಯದಡಿಯಲ್ಲಿಅಂತರಾಷ್ಟಿçÃಯ ಯೋಗ ದಿನವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ. ಎಂ ವೆಂಕಟೇಶ ಮೆಹಂದಳೆ ಮತ್ತು ಶ್ರೀ. ಕೆ ರಾಘವೇಂದ್ರ ಭಟ್, ಜಿಲ್ಲಾ ಪ್ರಭಾರಿ, ಭಾರತ್ ಸ್ವಾಭಿಮಾನ್ ಟ್ರಸ್ಟ್, ಉಡುಪಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀ ಎಂ ವೆಂಕಟೇಶ ಮೆಹಂದಳೆಯವರು ಮಾತನಾಡಿ ಅಂತರಾಷ್ಟಿçÃಯ ಯೋಗ ದಿನದ ಮಹತ್ವದ ಬಗ್ಗೆ ವಿವರಿಸಿದರು. ಯೋಗದ ನಿಯಮಿತವಾದ ಅಭ್ಯಾಸದಿಂದ ವಿದ್ಯಾರ್ಥಿಗಳಿಗೆ ಮಾನಸಿಕ ಮತ್ತು ದೈಹಿಕಆರೋಗ್ಯ ಪಡೆಯಲು ಮತ್ತು ಒತ್ತಡ, ಖಿನ್ನತೆಯನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ಶ್ರೀ ಎಂ ವೆಂಕಟೇಶ ಮಹಂದಳೆ ಮತ್ತು ಶ್ರೀ ಕೆ ರಾಘವೇಂದ್ರ ಭಟ್ ಯೋಗ ಪ್ರಾರ್ಥನೆಯೊಂದಿಗೆ ಯೋಗ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿ ತಾಡಾಸನ, ವ್ರಕ್ಷಾಸನ, ತ್ರಿಕೋನಾಸನ, ಭದ್ರಾಸನ , ವಕ್ರಾಸನ, ಶಶಾಂಕಾಸನ, ಭುಜಂಗಾಸನ, ಶವಾಸನ ಮತ್ತು ಪ್ರಾಣಯಾಮ ಧ್ಯಾನ ಮುಂತಾದ ಸರಳ ಆಸನಗಳನ್ನು ವಿದ್ಯಾರ್ಥಿ ಮತ್ತು ಸಿಬ್ಬಂದಿ ವರ್ಗದವರಿಗೆ ಪ್ರದರ್ಶಿಸಿ ಆಸನದ ಮಹತ್ವದ ಬಗ್ಗೆ ತಿಳಿಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಮಾತನಾಡಿ ವಿದ್ಯಾರ್ಥಿಗಳಿಗೆ ಯೋಗ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿದರು.
ವಿದ್ಯಾರ್ಥಿನಿ ನಿಧಿಪಾಟ್ಕರ್ ಸ್ವಾಗತಿಸಿದರು, ದರ್ಶನ್‌ರಾಜ್ ಪ್ರಾರ್ಥಿಸಿದರು.ಸಂಸ್ಥೆಯ ಉಪಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್, ರಾಷ್ಟಿçÃಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಶ್ರೀನಾಗರಾಜ್ , ಎನ್ ಸಿ ಸಿ ಘಟಕದ ಸಂಯೋಜಕರಾದ ಶ್ರೀ ಕಾರ್ತಿಕ್ ವಿ, ರಸಾಯನ ಶಾಸ್ತç ವಿಭಾಗದ ಪ್ರಾಧ್ಯಾಪಕಿಯಾದ ಡಾ. ರವಿಪ್ರಭಾ, ಸಿವಿಲ್ ವಿಭಾಗದ ಪ್ರಾಧ್ಯಾಪಕರಾದ ರೋಶನ್ ಕೋಟ್ಯಾನ್, ಅಧ್ಯಾಪಕರು, ಸಿಬ್ಬಂದಿಗಳುಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

error: