May 3, 2024

Bhavana Tv

Its Your Channel

ಶ್ರೀಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಯಂಗಡಿಯಲ್ಲಿಪ್ರಾಥಮಿಕ ಶಾಲಾ ವಿಭಾಗದ ಪಾಲಕ ಶಿಕ್ಷಕ ಹಾಗೂ ಆಡಳಿತ ಮಂಡಳಿಯ ಸಭೆ

ಕುಂದಾಪುರ ; ಶ್ರೀಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಯಂಗಡಿಯಲ್ಲಿ ದಿನಾಂಕ 01-08-2023 ಮತ್ತು 02-08-2023 ರಂದು2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಪಾಲಕರ ಶಿಕ್ಷಕರ ಮತ್ತು ಆಡಳಿತ ಮಂಡಳಿಯ ಸಭೆ ನಡೆಯಿತು.
ಈ ಸಭೆಯ ಅಧ್ಯಕ್ಷತೆ ವಹಿಸಿದ ಶ್ರೀಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ, ಪ್ರಾಂಶುಪಾಲರೂ ಆದ ಶ್ರೀಶರಣಕುಮಾರ ಅವರು ಮಾತನಾಡುತ್ತಾ ಈ ವಿದ್ಯಾಸಂಸ್ಥೆಯು ಮಕ್ಕಳ ಕಲಿಕೆಗೆಪೂರಕವಾದ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ಪಾಲಕರ ಸಹಕಾರದಿಂದ ಸಂಸ್ಥೆ ಬೆಳೆಯುತ್ತಿದೆ. ಮಕ್ಕಳ ಕಲಿಕೆಯಲ್ಲಿ ಪಾಲಕರ ಜವಾಬ್ದಾರಿ ಬಹುಮುಖ್ಯಪಾತ್ರ ವಹಿಸುತ್ತದೆ. ಶಾಲಾ ಶಿಕ್ಷಕರೊಂದಿಗೆ ಪೋಷಕರೂ ನಿರಂತರ ಸಂಪರ್ಕದಲ್ಲಿದ್ದು, ಮಕ್ಕಳ ಔನ್ನತ್ಯಕ್ಕೆ ಶ್ರಮಿಸೋಣ ಎಂದುಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಸುಜಾತಾ ಸದಾರಾಮ ಮಾತನಾಡುತ್ತಾ, ಪಾಲಕರು ಮಕ್ಕಳನ್ನು ಸ್ಪರ್ಧಾತ್ಮಕಯುಗದಲ್ಲಿ ಬೆಳೆಸುವಾಗ ಅತ್ಯಂತ ಜವಾಬ್ದಾರಿಯುತ ನಡೆಯನ್ನು ಹೊಂದಿರಬೇಕಾಗುತ್ತದೆ. ಮಕ್ಕಳ ವಿವಿಧ ಬೇಡಿಕೆಗಳನ್ನು ಈಡೇರಿಸುವಲ್ಲಿ ಯಾವುದೇ ಬಗೆಯ ಪೈಪೋಟಿಗೆ ಇಳಿಯದೇ ಸರಳ ಜೀವನ ಹಾಗೂ ಉನ್ನತ ಚಿಂತನೆಯನ್ನು ಹೊಂದುವAತೆ ಪಾಲಕರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಐ.ಸಿ.ಎಸ್.ಇ. ಪಠ್ಯಕ್ರಮ, ಪರೀಕ್ಷೆಗಳು, ವಿದ್ಯಾರ್ಥಿಗಳ ಮನೆಗೆಲಸ, ವಿದ್ಯಾರ್ಥಿಗಳ ವರ್ತನೆ ಮತ್ತು ದಿನಚರಿಯ ಕುರಿತು ಶಿಕ್ಷಕಿಯರಾದ ಶ್ರೀಮತಿ ಅರ್ಚನಾ ಎಸ್. ಸುವರ್ಣ ಮತ್ತು ಶ್ರೀಮತಿ ಸುಪ್ರಿಯಾ ಪಿ. ಪಾಲಕರಿಗೆ ಮಾಹಿತಿ ತಿಳಿಸಿದರು. ಕಾರ್ಯಕ್ರಮವನ್ನು ಶಿಕ್ಷಕಿಯರಾದ ಶ್ರೀಮತಿ ದೀಪಿಕಾ ದೇವಾಡಿಗ ಮತ್ತು ಶ್ರೀಮತಿ ಶ್ರುತಿ ನಿರ್ವಹಿಸಿದರು.
ಈ ಸಮಯದಲ್ಲಿ ಉಪಪ್ರಾಂಶುಪಾಲರಾದ ಶ್ರೀರಾಮ ದೇವಾಡಿಗ, ಪೋಷಕರು ಹಾಗೂ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.

error: