May 10, 2024

Bhavana Tv

Its Your Channel

ಅಪರಿಚಿತ ವ್ಯಕ್ತಿಯ ಶವ ಪತ್ತೆ:

ಭಟ್ಕಳ: ತಾಲೂಕಿನ ಶಂಸುದ್ದೀನ್ ಸರ್ಕಲ್ ಸಮೀಪದ ಬಸ್ ನಿಲ್ದಾಣದ ಎದುರಿನ ಅಂಗಡಿ ಮುಂಬಾಗದಲ್ಲಿ ಸುಮಾರು ೫೫ ರಿಂದ ೬೦ ವಯಸ್ಸಿನ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದ ಘಟನೆ ರವಿವಾರ ನಡೆದಿದೆ.
೫.೬ ಎತ್ತರ, ಕಪ್ಪು ಬಿಳಿ ಮಿಶ್ರಿತ ಕೂದಲು, ಕಂದು ಮೆ?ಬಣ್ಣ, ದುಂಡಗಿನ ಮುಖ, ಸಾಧಾರಣ ಮೆ?ಕಟ್ಟನ್ನು ಹೊಂದಿದ್ದಾನೆ. ಈತನು ಕಂದು ಬಣ್ಣದ ಪ್ಯಾಂಟ್, ಬಿಳಿ ಚೆಕ್ಸ್ ಗೆರೆಯುಳ್ಳ ಬಿಳಿಬಣ್ಣದ ಪೂರ್ಣ ತೋಳಿನ ಅಂಗಿಯನ್ನು ಧರಿಸಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲಿಸಿ, ಅತಿಯಾದ ಕುಡಿತ ದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.ಈತ ನಗರದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಎನ್ನಲಾಗಿದೆ. ಮೃತ ದೇಹವನ್ನು ಪುರಸಭೆಗೆ ಹಸ್ತಾಂತರಿಸಿದ್ದು ಪುರಸಭೆ ಪೌರ ಕಾರ್ಮಿಕರು ಮತ್ತು ಪೋಲಿಸರು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: