May 18, 2024

Bhavana Tv

Its Your Channel

೧ ಕೋಟಿ ಅರಣ್ಯ ಪರಿಸರ ಮೌಲ್ಯ ನಾಶ; ಸೂಕ್ತ ಕಾನೂನು ಕ್ರಮಕ್ಕೆ ಅಗ್ರಹ.

ಯಲ್ಲಾಪುರ: ಜಿಲ್ಲೆಯ ಯಲ್ಲಾಪುರ ತಾಲೂಕಿನ ಜೀವ ವೈವಿಧ್ಯ ಸೂಕ್ಷ ಪ್ರದೇಶವಾದ ದೇಹಳ್ಳಿ ಮತ್ತು ಅನಗೋಡ ಗ್ರಾಮ ಪಂಚಾಯಿತ ವ್ಯಾಪ್ತಿಯಲ್ಲಿ ವ್ಯಾಪಕವಾದ ಅರಣ್ಯನಾಶ ಮತ್ತು ಖನಿಜಾಂಶಯುಕ್ತ ಮಣ್ಣು ಕಳ್ಳಸಾಗಣಿಯಿಂದ ಸುಮಾರು ೧ ಕೋಟಿ ರೂಪಾಯಿಯಷ್ಟು ಅರಣ್ಯ ಪರಿಸರ ಮೌಲ್ಯ ನಾಶವಾಗಿದ್ದು, ಅರಣ್ಯ ಕಾನೂನನ್ನು ಅರಣ್ಯಾಧಿಕಾರಿಗಳೇ ಉಲ್ಲಂಘಿಸಿ ಪರಿಸರ ನಾಶಕ್ಕೆ ಕಾರಣವಾಗಿದ್ದು ಖಂಡನಾರ್ಹ. ಅಂತಹ ಅರಣ್ಯಾಧಿಕಾರಿ ಮೇಲೆ ತಕ್ಷಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೇ ಉಗ್ರ ಹೋರಾಟ ಮಾಡಲಾಗುವದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಸರಕಾರಕ್ಕೆ ಅಗ್ರಹಿಸಿದ್ದಾರೆ.
ಅವರು ಇಂದು, ಪರಿ¸ Àರ ನಾಶಕ್ಕೆ ಕಾರಣವಾದ ಅನಗೋಡ, ಬೀಸಗೋಡ, ಕುಂಬ್ರಾಳ ಪ್ರದೇಶಕ್ಕೆ ಭೇಟ್ಟಿ ನೀಡಿದ ನಂತರ ಪತ್ರಕರ್ತರೊಂದಿಗೆ ಅರಣ್ಯಮಾರಣ ಹೋಮವಾಗಿರುವ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.
ಬಡವರು, ರೈತರು ಜೀವನಕ್ಕಾಗಿ, ವಾಸ್ತವ್ಯಕ್ಕಾಗಿ ಅರಣ್ಯ ಭೂಮಿ ಸಾಗುವಳಿ ಮಾಡುವರ ಮೇಲೆ ವಿನಾಕಾರಣ ದೌರ್ಜನ್ಯ, ಕಿರುಕುಳ ಮಾಡಿ ಹಿಂಸಿಸುವ ಅರಣ್ಯ ಇಲಾಖೆಯ ಸಿಬ್ಬಂದಿಗಳು ಇಂತಹ ಕಾನೂನು ಬಾಹಿರ ಕ್ರತ್ಯಕ್ಕೆ ಪ್ರೇರಕವಾಗಿರುವದು ವಿಷಾದಕರ. ನಿರಂತರ ಹಲವು ದಿನಗಳಿಂದ ಅಪಕೃತ್ಯ ಜರಗುತ್ತಿದ್ದರೂ ಅರಣ್ಯ ಇಲಾಖೆ ಮೌನವಾಗಿರುವದು ಖೇದಕರ ಎಂದು ಅವರು ಹೇಳಿದರು.
ದೇಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಕುಂಬ್ರಾಳದಲ್ಲಿ ಹತ್ತರಿಂದ ೫೦ ವರ್ಷದ ಸಿಸಂ, ನಂದಿ, ಮತ್ತಿ, ಸಾಗುವನಿ ಮುಂತಾದ ಬೆಲೆಬಾಳುವ ಮರ ಕಡಿದು, ಮಣ್ಣಿನಲ್ಲಿ ಹುಗಿದು ಸಾಕ್ಷö್ಯ ನಾಶಮಾಡಿ ಸುಮಾರು ೨೫೦ ರಿಂದ ೩೦೦ ಕ್ಕಿಂತ ಹೇಚ್ಚಿನ ಗಿಡ-ಮರ ನಾಶಕ್ಕೆ ಕಾರಣವಾಗಿರುವದು ಅರಣ್ಯಅಧಿಕಾರಿಗಳ ಕರ್ತವ್ಯ ಚ್ಯುತಿ ವೆಸಗಿದ್ದಾರೆ. ಸದ್ರಿ ಪ್ರದೇಶವು ಕಾಳಿನದಿ ಹಿನ್ನೀರು ಪ್ರದೇಶ ಅಂಚಿನಲ್ಲಿರುವದರಿAದ ಭೂ ಕುಸಿತ, ಔಷಧಯುಕ್ತ ಸೂಕ್ಷö್ಮ ಗಿಡಗಳು ವನ್ಯಜೀವಿಗಳಿಗೆ ಆತಂಕ, ಸಂಪ್ರದಾಯುಕ್ತ ಜೇನು ಅಭಿವೃದ್ಧಿಗೆ ಮಾರಕ, ವಿವಿಧ ವಿಧದಲ್ಲಿ ಜೀವ ವೈವಿಧ್ಯತೆ ನಾಶ ಮುಂತಾದ ಪರಿಸರ ಹಾನಿಕರ ಕೃತ್ಯಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷö್ಯತನ ಕಾರಣವೆಂದು ರವೀಂದ್ರ ನಾಯ್ಕ ವಿವರಿಸಿದರು.

ಖನಿಜಯುಕ್ತ ಮಣ್ಣು ಕಳ್ಳಸಾಗಾಣಿ:
ಅನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ಬೀಸಗೋಡ ಗ್ರಾಮದ ಸುತ್ತಮುತ್ತ ದಿನದಿಂದ ದಿನಕ್ಕೆ ಅರಣ್ಯ ಪ್ರದೇಶದಲ್ಲಿ ಅಕ್ರಮ ಪ್ರವೇಶ ಮಾಡಿ ವ್ಯಾಪಕವಾಗಿ ಬೆಲೆಬಾಳುವ ಖನಿಜಯುಕ್ತ ಮಣ್ಣು ಕಳ್ಳತನವಾದರೂ ಅರಣ್ಯ ಇಲಾಖೆ ನಿದ್ರೆಯಲ್ಲಿರುವದು ಖಂಡನಾರ್ಹ. ಖನಿಜಯುಕ್ತ ಮಣ್ಣು ಕಳ್ಳಸಾಗಣಿ ಕುರಿತು ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ ಕಾನೂನು ಬಾಹಿರ ಕೃತ್ಯಕ್ಕೆ ವ್ಯಾಪಕವಾದ ಅರಣ್ಯ ಅಧಿಕಾರಿಯ ಮೇಲೆ ತಕ್ಷಣ ಕಾನೂನು ಕ್ರಮ ಅವಶ್ಯ ಎಂದು ರವೀಂದ್ರ ನಾಯ್ಕ ಅಗ್ರಹಿಸಿದ್ದರು.

error: