December 19, 2024

Bhavana Tv

Its Your Channel

ಭಟ್ಕಳ -ಲಾಕ್‌ಡೌನ್ ಆದೇಶ ಉಲ್ಲಂಘಿಸುತ್ತಿರುವವರನ್ನು ಪತ್ತೆ ಹಚ್ಚಲು ಡ್ರೋನ್ ಕಣ್ಗಾವಲು

ಭಟ್ಕಳ:/ಉತ್ತರ ಕನ್ನಡ:
ಸೋಮವಾರದಂದು ಭಟ್ಕಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದಂತೆ ಪಟ್ಟಣವೂ ದೇಶದಲ್ಲಿಯೇ ಹಾಟ್ ಸ್ಪಾಟ್ ಆಗಿದ್ದು, ಪಟ್ಟಣದ ಸಾಕಷ್ಟು ರಸ್ತೆಯಲ್ಲಿ ಜನರು ಗುಂಪು ಗುಂಪಾಗಿ ನಿಲ್ಲುತ್ತಿರುವ ಬಗ್ಗೆ ಗಮನಿಸಿದ ಪೊಲೀಸರು ಈ ಡ್ರೋನ್ ಕಾರ್ಯಾಚರಣೆ ಮೂಲಕ ಜನರ ಓಡಾಟವನ್ನು ಪತ್ತೆ ಹಚ್ಚಲು ಸುಲಭವಾಗಲಿದೆ ಎಂದು ಡಿವೈಎಸ್ಪಿ ಗೌತಮ್ ಕೆ.ಸಿ ಅವರು ಮಾಧ್ಯಮಕ್ಕೆ ತಿಳಿಸಿದರು. ನಂತರ ಡ್ರೋನ್ ಕಾರ್ಯಾಚರಣೆಗಿಳಿದಿದ್ದು ಪಟ್ಟಣ ವ್ಯಾಪ್ತಿಯ ಸಂಶುದ್ದೀನ್ ಸರ್ಕಲ್, ಮುಗ್ದುಂ ಕಾಲೋನಿ, ಸುಲ್ತಾನಿ ಸ್ಟ್ರೀಟ್, ಕಾರ್ ಸ್ಟ್ರೀಟ್, ಚಿನ್ನದ ಪಳ್ಳಿ ರಸ್ತೆ, ಚೌಕ ಬಜಾರ್, ತಂಜೀA ರಸ್ತೆ, ಚೆನ್ನಪಟ್ಟಣ ದೇವಸ್ಥಾನ ರಸ್ತೆ, ಹೂವಿನ ಬಜಾರ್, ಸದ್ದಾಪ್ ಕೋಲ್ಡ್ ಡ್ರಿಂಕ್ಸ್ ಸಮೀಪ, ಜಾಲಿ ಕ್ರಾಸ್, ಜಾಲಿ, ನವಾಯತ್ ಕಾಲೋನಿ ಸೇರಿದಂತೆ ಜನಸಂದಣಿಯ ಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋನ್ ಕಾರ್ಯಾಚರಣೆ ನಡೆಸಲಾಯಿತು

ಭಟ್ಕಳದಲ್ಲಿ ಸ್ವತಃ ಡ್ರೋನ್ ಹಾರಿಸುವ ಮೂಲಕ ಲಾಕ್ ಡೌನ್ ನಿಯಮ ಪಾಲನೆಯ ಕುರಿತು ಡಿವೈಎಸ್‌ಪಿ ಗೌತಮ್ ಕೆ.ಸಿ ಪರಿಶೀಲನೆ ನಡೆಸಿದರು, ಕಾರವಾರ ಜಿಲ್ಲಾ ಅಪರಾಧ ವಿಭಾಗದ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ ಹಾಗೂ ನಗರ ಠಾಣೆ ಪಿಎಸ್‌ಐ ಎಚ್.ಕುಡಕುಂಟಿ, ಹಾಗೂ ಪೊಲೀಸ್ ಸಿಬ್ಬಂದಿ ಡ್ರೋನ್ ಹಾರಿಸುವ ವೇಳೆ ಉಪಸ್ಥಿತರಿದ್ದರು. ಈಗಾಗಲೇ ಭಟ್ಕಳ ಸಹಿತ ಎಲ್ಲಾ ಕಡೆಯೂ ಲಾಕ್ ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿರುವ ಜೊತೆಯಲ್ಲಿ ಜನ ಸಾಮಾನ್ಯರಿಗೂ ತೊಂದರೆಯಾಗದAತೆ ಕ್ರಮ ತೆಗೆದುಕೊಳ್ಳುವ ಮೂಲಕ ಭಟ್ಕಳ ಉಪ ವಿಭಾಗದ ಪೊಲೀಸರು ಸಾರ್ವಜನಿಕರ ವಿಶ್ವಾಸ ಗಳಿಸುತ್ತಿದ್ದಾರೆ.

error: