November 14, 2024

Bhavana Tv

Its Your Channel

ಜಿಲ್ಲೆಯ ೨೬ ಜನಕ್ಕೆ ಮಂಗನಕಾಯಿಲೆ

ಹೊನ್ನಾವರ ಎ. ೦೧ : ಸದ್ದು ಮಾಡುವ ಕೊರೊನಾ ಮಧ್ಯೆ ಸದ್ದಿಲ್ಲದೇ ೨೬ಜನರಿಗೆ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಕಾಡಿದೆ. ಇವರಲ್ಲಿ ೨೫ಜನ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿ ಒಬ್ಬರು ದಕ್ಷಿಣ ಕನ್ನಡದ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾಗಿದ್ದಾರೆ. ಮಂಗನ ಕಾಯಿಲೆ ಚಿಕಿತ್ಸೆಯನ್ನು ಆರೋಗ್ಯ ಕರ್ನಾಟಕ ಯಾದಿಯಲ್ಲಿ ಸೇರಿಸಲಾಗಿದ್ದು ಬಿಪಿಎಲ್ ಕಾರ್ಡುದಾರರು ಮಾನ್ಯತೆ ಪಡೆದ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಪ್ರಕಟಿಸಲಾಗಿದೆ.
೧೪ಜನ ಸಿದ್ದಾಪುರದಿಂದ, ೧ ಕುಮಟಾ, ೧ ಅಂಕೋಲಾ, ಹೊನ್ನಾವರದ ಗೇರಸೊಪ್ಪಾದಿಂದ ೬, ಸಂಶಿಯಿAದ ೨, ಖರ್ವಾದಿಂದ ಒಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನೆರಡು ತಿಂಗಳು ಮಳೆ ಬೀಳುವವರೆಗೆ ಮಂಗನ ಕಾಯಿಲೆ ತೀವ್ರವಾಗುವ ಸಂಭವ ಇದ್ದು ಈ ಪರಿಸ್ಥಿತಿಯಲ್ಲಿ ಲಸಿಕೆ ಪಡೆದರೂ ಅದರ ಪರಿಣಾಮವಾಗಲು ಮೂರು ತಿಂಗಳು ಬೇಕಾಗುವುದರಿಂದ ಲಸಿಕೆ ಪ್ರಯೋಜನವಾಗುತ್ತಿಲ್ಲ. ತೀವ್ರ ಜ್ವರ ಕಾಡಿದವರು ತಕ್ಷಣ ತಮ್ಮ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಬರಬೇಕು ಅಥವಾ ತಾಲೂಕಾ ಆಸ್ಪತ್ರೆಗೆ ಬರಬೇಕು, ಅಲ್ಲಿಂದ ಅವರಿಗೆ ಅಗತ್ಯವಿದ್ದರೆ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ಕಳಿಸಿಕೊಡಲಾಗುವುದು ಎಂದು ತಿಳಿದುಬಂದಿದೆ. ಕಾಡಿಗೆ ಹೋಗುವುದನ್ನು ನಿಲ್ಲಿಸಬೇಕು, ಕಾಡಿನಲ್ಲಿ ವಾಸಿಸುವವರು ಆರೋಗ್ಯ ಇಲಾಖೆಯ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪ್ರಕಟಿಸಲಾಗಿದೆ.

error: