April 23, 2024

Bhavana Tv

Its Your Channel

ಭಟ್ಕಳ ಬೆಳಕೆಯ ಧ್ರುತಿ ಸರ್ಜಿಕಲ್ ಸೋಲುಶನ್ ಪ್ರೈ ಲಿಮಿಟೆಡ್ ಇಲ್ಲಿ ತಯಾರಾಗುತ್ತಿದೆ ಕರೋನಾ ಪರ್ಸನಲ್ ಪ್ರೋಟೆಕ್ಟಿವ್ ಕಿಟ್.

ಭಟ್ಕಳ: ಸದ್ಯ ದೇಶವ್ಯಾಪಿ ಕೊರೋನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಘೋಷಣೆಯಾಗಿದ್ದು, ಬಹುತೇಕ ಎಲ್ಲಾ ಕಂಪೆನಿಗಳು, ವ್ಯವಹಾರ ಕೇಂದ್ರಗಳು,ಕಾರ್ಮಿಕರನ್ನು ಅವಲಂಬಿಸಿರುವ ಪ್ಯಾಕ್ಟರಿಗಳು ಬಂದ್ ಆಗಿದ್ದು, ಆದರೆ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆಯ ಧ್ರುತಿ ಸರ್ಜಿಕಲ್ ಸೋಲುಶನ್ ಪ್ರೈ ಲಿಮಿಟೆಡ್ ಸರ್ಜಿಕಲ ಪ್ಯಾಕ್ಟರಿಯಲ್ಲಿ ವೈದ್ಯರಿಗೆ ಹಾಗೂ ಕೊರೊನಾ ಕರ್ತವ್ಯನಿರತ ಆಸ್ಪತ್ರೆಗಳಿಗೆ ಅವಶ್ಯಕವಾಗಿರುವ ಕಿಟ್ ತಯಾರಿಕೆಯಲ್ಲಿ ಹಗಲಿರುಳು ಪ್ರಯತ್ನಿಸುತ್ತಿದ್ದಾರೆ.

ಇಲ್ಲಿನ ಸಿಬ್ಬಂದಿಗಳು ಕೂಡ ದೇಶ ಸೇವೆ ಹಾಗೂ ಆಪತ್ಕಾಲದಲ್ಲಿ ನೆರವಾಗುವ ಉದ್ದೇಶದಿಂದ ಹಗಲಿರುಳು ಕಿಟ್ ತಯಾರಿಕೆಯಲ್ಲಿ ಪರಿಶ್ರಮಪಡುತ್ತಿದ್ದಾರೆ. ಬೆಳಕೆಯ ಧೃತಿ ಸರ್ಜಿಕಲ್‌ನ ಈಗಾಗಲೇ ೨೫ ಸಾವಿರ ಪಿಪಿಇ ಕಿಟ್ ತಯಾರಿಸಲಾಗಿದ್ದು, ಇನ್ನು ಸಹ ಕಿಟ್ ತಯಾರಿಕೆಗೆ ಎಲ್ಲೆಡೆಯಿಂದ ಡಿಮಾಂಡ ಹೆಚ್ಚಾಗಿದ್ದು, ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲವಾಗಿದೆ. ಈ ನಡುವೆ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಸಹಕಾರದಿಂದ ಕಿಟ್ ತಯಾರಿಕೆಗೆ ಎಲ್ಲಾ ಸಹಕಾರ, ಬೆಂಬಲ ವ್ಯಕ್ತವಾಗಿದ್ದು ಇದರಿಂದ ಕಿಟ್ ತಯಾರಿಕೆಯಲ್ಲಿ ನಮಗೆ ಇನ್ನಷ್ಟು ಉತ್ತೇಜನ ಸಿಕ್ಕಿದಂತಾಗಿದೆ.

ಪ್ರಸ್ತುತ ಪರ್ಸನಲ್ ಪ್ರೋಟೆಕ್ಟಿವ್ ಕಿಟ್ ತಯಾರು ಮಾಡುತ್ತಿದ್ದು ಚೈನಾದಲ್ಲಿ ೨ ತಿಂಗಳ ಹಿಂದೆ ಕೊರೊನಾ ಕಂಡುಬoದಾಗಲೇ ಬೆಂಗಳೂರಿನಿoದ ಬೇಡಿಕೆ ಬಂದಿದೆ. ಎರಡು ತಿಂಗಳಿoದ ಇದನ್ನು ತಯಾರಿಸುತ್ತಿದ್ದು ಪ್ರಸ್ತುತ ಮಂಗಳೂರು, ಉಡುಪಿ, ಕಾರವಾರ ಜಿಲ್ಲೆಯಿಂದ ವ್ಯಾಪಕ ಬೇಡಿಕೆಯಿದೆ. ಬೇಡಿಕೆಗೆ ತಕ್ಕಷ್ಟು ಪೂರೈಸಲು ಸಾಧ್ಯವಾಗುತ್ತಿಲ್ಲ. ಇದನ್ನು ಕೊರೊನಾ ಪ್ರೊಟೆಕ್ಷನ್ ಕಿಟ್ ಆಗಿ ಬಳಸಲಾಗುತ್ತಿದೆ. ಇದರೊಂದಿಗೆ ಕಲಬುರಗಿ ಜಿಲ್ಲಾಧಿಕಾರಿಗಳು ಸಹ ನಮ್ಮನ್ನು ಸಂಪರ್ಕಿಸಿದ್ದು, ಕಿಟ್ ಪೂರೈಕೆಗೆ ಅವರು ಬೇಡಿಕೆಯನ್ನಿಟ್ಟಿದ್ದು ಪೂರೈಕೆಯಾಗುತ್ತಿದೆ. ಜೊತೆಗೆ ರಾಜ್ಯ, ಕೇಂದ್ರ ಸರಕಾರದಿಂದಲೂ ೧೦೦ ಕ್ಕೆ ೧೦೦ ಸಹಕಾರ ನೀಡಿದ್ದು, ಫ್ಯಾಕ್ಟರಿಯಲ್ಲಿನ ಕಾರ್ಮಿಕರು ಸಹ ದೇಶ ಸೇವೆಯ ರೀತಿಯ ಹಗಲಿರುಳು ಕೆಲಸ ನಡೆಸುತ್ತಿದ್ದೇವೆ. ಪ್ಯಾಕ್ಟರಿಗಳಿಗೆ ವೃತ್ತ ನಿರೀಕ್ಷಕರು, ಕಂದಾಯ ಇಲಾಖೆಯ ಅಧಿಕಾರಿಗಳು ಬೇಟಿ ನೀಡಿ ಕಾರ್ಮಿಕರಿಗೆ ಧೈರ್ಯ ತುಂಬಿದ್ದಾರೆ. ಕಂಪೆನಿ ಸಿಬ್ಬಂದಿಗಳು ಕೂಡ ಕೊರೊನಾ ಅಗತ್ಯ ಪರಿಕರ ಪೂರೈಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಹು ಬೇಡಿಕೆಯ ಪ್ರೋಟೆಕ್ಟಿವ್ ಕಿಟ್ ಈ ಭಾಗದಲ್ಲಿ ಸಿದ್ದವಾಗುತ್ತಿರುವುದು ಇನ್ನಷ್ಟು ಹೆಮ್ಮೆಯ ವಿಚಾರವಾಗಿದೆ. ಮಾರಕ ರೋಗ ಕರೋನಾ ವಕ್ಕರಿಸಿದ ದಿನದಿಂದ ದೃತಿ ಸರ್ಜಿಕಲ್ ಫ್ಯಾಕ್ಟರಿಗೆ ಬಿಡುವೆ ಇಲ್ಲ ಎನ್ನುವಂತಾಗಿದೆ. ಈ ತುರ್ತು ಸಂದರ್ಭದಲ್ಲಿ ವ್ಯವಹಾರಿಕವಾಗಿ ಕಿಟ್ ಉತ್ಪಾದನೆಯನ್ನು ನೋಡದೆ ಸೇವೆ ಉದ್ದೇಶಕ್ಕಾಗಿ ಸಂಸ್ಥೆಯ ಮುಖ್ಯಸ್ಥ ಹಗಲು ರಾತ್ರಿ ನಡೆಸುತ್ತಿದ್ದಾರೆ. ಈ ಕಿಟ್ ನಲ್ಲಿ ವೈದ್ಯರಿಗೆ ಗ್ಲೌಸ್, ತಲೆಧರಿಸಿಸುವ ಕ್ಯಾಪ್, ಮಾಸ್ಕ್, ಗೌನ್, ಶೂ ಲೆಗ್ಗಿಂಗ್, ಏಪ್ರಾನ್ ಗಳು ಬರುತ್ತವೆ. ಇದನ್ನು ವಿವಿಧ ಸ್ಥರಗಳಲ್ಲಿಇಲ್ಲಿ ಉತ್ಪಾದಿಸಲಾಗುತ್ತಿದೆ. ಇಲ್ಲಿನ ನೌಕರರ ಆರೋಗ್ಯವನ್ನು ಮನದಲ್ಲಿರಿಸಿ ಅವರಿಗೆ ವೈದ್ಯಕೀಯ ಚೆಕ್ ಅಪ್, ಧರಿಸಲು ಮಾಸ್ಕ್, ಗ್ಲೌಸ್, ತಲೆಗೆ ಸ್ಕಾರ್ಪ್ ನೀಡಲಾಗುತ್ತಿದೆ. ಹೈಜಿನ್ ಉದ್ದೇಶಕ್ಕೆ ಬಿಸಿ ನೀರು ನೀಡಲಾಗುತ್ತಿದ್ದು, ತೊಳೆಯಲು ಹ್ಯಾಂಡ್ ಸ್ಯಾನಿಟೈಸರ್ ನೀಡಲಾಗುತ್ತಿದೆ. ಸದ್ಯ ಸೇವಾ ಮನೋಭಾವವಿರುವ ಉತ್ಸಾಹಿ ನೌಕರ ಸಹಕಾರದಿಂದ ಕಿಟ್ ತಯಾರಿಸಲಾಗುತ್ತಿದ್ದು, ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಇಲ್ಲಿಂದಲೆ ಪಿಪಿಇ ಕಿಟ್ ಸರಬರಾಜು ಮಾಡಲಾಗುತ್ತಿದೆ.

ಹೊರರಾಜ್ಯದಿಂದ ಕಚ್ಚಾ ವಸ್ತುಗಳ ಖರೀದಿ: ಜಿಲ್ಲೆಯಲ್ಲಿಯೇ ಒಂದೇ ಒಂದು ಸರ್ಜಿಕಲ್ ಫ್ಯಾಕ್ಟರಿ ಇದಾಗಿದ್ದು, ಪಿಪಿಇ ಕಿಟ್ ತಯಾರಿಕೆಗೆ ಬೇಕಾದ ಎಲ್ಲಾ ಕಚ್ಛಾ ವಸ್ತುಗಳನ್ನು ಹೊರರಾಜ್ಯವಾದ ಗುಜರಾತ್, ಹಿಮಾಚಲಪ್ರದೇಶ, ಮಧ್ಯಪ್ರದೇಶ, ಆಂದ್ರಪ್ರದೇಶ, ದೆಹಲಿ, ಕೇರಳ, ಪುಣೆ ಹಾಗೂ ರಾಜ್ಯದ ಬೆಂಗಳೂರಿನಿoದಲೂ ಕಚ್ಚಾವಸ್ತುಗಳು ಬರುತ್ತಲಿದೆ. ಈ ಮೊದಲೇ ಕಚ್ಛಾ ಸಾಮಗ್ರಿಯನ್ನು ಫ್ಯಾಕ್ಟರಿಗೆಯಲ್ಲಿ ಸಂಗ್ರಹಿಸಲಾಗಿದ್ದು ಈ ವೇಳೆ ಅಷ್ಟಾಗಿ ಸಮಸ್ಯೆಯಾಗಿಲ್ಲ. ಇದರ ಜೊತೆಗೆ ಜಿಲ್ಲಾಧಿಕಾರಿ ಸಹಕಾರದಿಂದ ನಿರಂತರವಾಗಿ ಉತ್ಪಾದನೆ ಮಾಡಿ ರಾಜ್ಯ ಮೂಲೆ ಮೂಲೆ ಕಳುಹಿಸಲಾಗುತ್ತಿದೆ.

ಕಳೆದ ಮೂರು ವರ್ಷ ಹಿಂದೆ ೩ ವರ್ಷದ ಹಿಂದೆ ತಯಾರಾದ ಸರ್ಜಿಕಲ್ ಫ್ಯಾಕ್ಟರಿ ಇದಾಗಿದ್ದು, ಕೆಲಸಗಾರರನ್ನು ತೀರಾ ಸ್ನೇಹ ಬಾಂಧವ್ಯದಿAದ ನೋಡಿಕೊಳ್ಳುತ್ತಿದ್ದು, ಕೆಲಸಗಾರರಿಗೆ ಎಲ್ಲಾ ರೀತಿಯ ಮೂಲಭುತ ವ್ಯವಸ್ಥೆಯ ಜೊತೆಗೆ ಉತ್ತಮ ಸಂಬಳ, ಆರೋಗ್ಯ ವಿಮಾ, ಸೇವಾ ಭದ್ರತೆ ಸೌಲಭ್ಯವನ್ನು ಕಲ್ಪಿಸಿದ್ದಾರೆ. ಮುಂಜಾನೆ ೮:೩೦ ರಿಂದ-ಸAಜೆ ೫ ಗಂಟೆಗೆಯ ವರೆಗೆ ನಿತ್ಯ ಕೆಲಸದ ಅವಧಿ ನಡೆಯುತ್ತಲಿದ್ದು ಈ ಕೋರೋನಾ ಮಹಾಮಾರಿ ಆರಂಭದ ದಿನದಿಂದ ಓವರ ಟೈಮ್ ಕೆಲಸ ಮಾಡುತ್ತಿದ್ದಾರೆ. ಒಟ್ಟು ೧೫೦ಕ್ಕೂ ಅಧಿಕ ಕಾರ್ಮಿಕರು ವಿವಿಧ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸರ್ಜಿಕಲ್ ಫ್ಯಾಕ್ಟರಿಗೆ ಬೆನ್ನೆಲುಬಾಗಿ ಕಾರ್ಮಿಕರ ನಿಲ್ಲಲಿದ್ದಾರೆ. ಭಟ್ಕಳ ಸುತ್ತಮುತ್ತ ಸ್ಥಳಿಯವಾಗಿ ಯುವತಿಯರು, ಯುವಕರು ಸರ್ಜಿಕಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಎಲ್ಲರು ನುರಿತು ಕೆಲಸಗಾರರಾಗಿದ್ದಾರೆ. ಈ ಕೋರೋನಾ ಮಹಾಮಾರಿ ಆರಂಭದ ದಿನದಿಂದ ಬಿಹಾರ ರಾಜ್ಯದಿಂದ ಫ್ಯಾಕ್ಟರಿಯಲ್ಲಿ ಕಾರ್ಮಿಕರನ್ನು ನೇಮಿಸಿಕೊಂಡು ಕೆಲಸ ಮಾಡಿಸುತ್ತಿದ್ದಾರೆ..

ಈ ಸಂದರ್ಭದಲ್ಲಿ ನಮ್ಮ ವಾಹಿನಿಯ ಜೊತೆ ಮ್ಯಾನೆಜಿಂಗ್ ಡೈರಕ್ಟರ್ ಶರತ್ ಕುಮಾರ್ ಶೆಟ್ಟಿ ಮಾತನಾಡಿ ಪ್ರಧಾನಿ ಕಚೇರಿಯಿಂದ ಸರ್ಜಿಕಲ್ ಫ್ಯಾಕ್ಟರಿಗೆ ದೂರವಾಣಿ ಕರೆ ಬಂದಿದೆ, ದೇಶಾದ್ಯಂತ ಕೋರೋನಾ ರಣಕೇಕೆ ಹಾಕುತ್ತಿದ್ದು, ಈ ನಡುವೆ ಶಂಕಿತರು, ಸೋಂಕಿತರನ್ನು ತಪಾಸಣೆ, ಚಿಕಿತ್ಸೆ ಮಾಡಲು ವೈದ್ಯರಿಗೆ ಹಾಗೂ ಕೊರೊನಾ ಕರ್ತವ್ಯನಿರತ ಆಸ್ಪತ್ರೆಗಳಿಗೆ ಅವಶ್ಯಕವಾಗಿರುವ ಕಿಟ್ ಬೇಡಿಕೆಗೆ ತೀರಾ ಅವಶ್ಯವಿದ್ದು, ಈ ಹಿನ್ನೆಲೆ ಭಟ್ಕಳದ ಬೆಳಕೆಯ ಧ್ರುತಿ ಸರ್ಜಿಕಲ್ ಸೋಲುಶನ್ ಪ್ರೈ ಲಿಮಿಟೆಡ್ ಸರ್ಜಿಕಲ ಪ್ಯಾಕ್ಟರಿಗೆ ಪ್ರಧಾನಮಂತ್ರಿ ಕಛೇರಿಯಿಂದ ಕಿಟ್ ಹಾಗೂ ಮಾಸ್ಕ ತಯಾರಿಕೆಯ ಪೂರೈಕೆ ಹೆಚ್ಚಿಸಲು ಹೆಲಿಕ್ಯಾಪ್ಟರನಿಂದ ಕಚ್ಚಾ ವಸ್ತುಗಳ ಪೂರೈಕೆಗೆ ನಿಮಗೆ ಅನೂಕೂಲವಾಗುವ ಸ್ಥಳಕ್ಕೆ ನೀಡಲಿದ್ದು ಪಿಪಿಇ ಕಿಟ್ ಹಾಗೂ ಮಾಸ್ಕಗೆ ಎಲ್ಲಾ ಸಹಕಾರ ನೀಡಲಿರುವ ಬಗ್ಗೆ ದೂರವಾಣಿ ಕರೆ ಬಂದಿದ್ದು, ಇದು ಸಹ ಇನ್ನಷ್ಟು ಪ್ರೋತ್ಸಾಹಕ್ಕೆ ಕಾರಣವಾಗಿದೆ ಎಂದರು.

ಒಟ್ಟಾರೆಯಾಗಿ ಕೊರೋನಾ ಎರ್ಮಜೆನ್ಸಿ ಸಂದರ್ಭದಲ್ಲಿ ಅತೀ ಅಗತ್ಯವಾಗಿ ವೈದ್ಯಕೀಯ ಕಿಟ್ ಹಗಲು ರಾತ್ರಿ ತಯಾರಾಗಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ಸೇರುತ್ತಿದೆ. ಇದರಿಂದ ಕರೋನಾ ರೋಗಿಗಳ ಶುಶ್ರೂಷೆಯಲ್ಲಿ ತೊಡಗುವ ವೈದ್ಯರು ಮತ್ತು ನರ್ಸಗಳು ಆರೋಗ್ಯ ಸುರಕ್ಷೆಯಾಗುತ್ತಿದೆ ಎಂದರೆ ತಪ್ಪಾಗಲಾರದು.

error: