May 15, 2024

Bhavana Tv

Its Your Channel

ಎಸ್‌ಪಿ ಡಾ. ಸುಮನ್.ಡಿ.ಪೆನ್ನೇಕರ್ ಭಟ್ಕಳ ಠಾಣೆಗೆ ಭೇಟಿ

ಭಟ್ಕಳ: ಉತ್ತರಕನ್ನಡ ಜಿಲ್ಲಾ ಎಸ್‌ಪಿ ಡಾ. ಸುಮನ್.ಡಿ.ಪೆನ್ನೇಕರ್ ಮಂಗಳವಾರ(ಡಿ.೭) ಭಟ್ಕಳ ಠಾಣೆಗೆ ಭೇಟಿ ನೀಡಿ ಪ್ರಸ್ತುತ ವಿದ್ಯಾಮಾನಗಳ ಕುರಿತು ಪೊಲೀಸ್ ಅಧಿಕಾರಗಳೊಂದಿಗೆ ಚರ್ಚೆ ನಡೆಸಿದರು. ಒಮಿಕ್ರಾನ್ ತಡೆಗೆ ಇಲಾಖೆ ಸಿದ್ದತೆಯ ಕುರಿತು ಮಾಹಿತಿ ನೀಡಿದರು.

ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಭಟ್ಕಳ ಠಾಣೆಗೆ ಭೇಟಿ ನೀಡಿದರು. ಇಲ್ಲಿನ ಪ್ರಸ್ತುತ ವಿದ್ಯಾಮಾನಗಳ ಕುರಿತು ಡಿವೈಎಸ್‌ಪಿ, ಸಿಪಿಐ, ಪಿಎಸ್‌ಐ ಗಳೊಂದಿಗೆ ಚರ್ಚೆ ನಡೆಸಿದರು.

ರಾಜ್ಯದಲ್ಲಿ ಒಮ್ರಿಕಾನ ತಡೆಗೆ ತಪಾಸಣೆ ಹೆಚ್ಚಿಸಲಾಗಿದ್ದು ಕಾರವಾರದ ಮಾಜಾಳಿ ಮತ್ತು ಭಟ್ಕಳ ತಾಲೂಕಿನ ಶಿರಾಲಿಯ ತಪಾಸಣಾ ಕೇಂದ್ರಗಳನ್ನು ಕೋವಿಡ್ ಗೇಟ್ ಆಗಿ ಪರಿವರ್ತಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಆರೋಪಿಗಳ ಹೆಡೆಮುರಿ ಕಟ್ಟಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಬಳಿಕ ಪಟ್ಟಣದ ಚೆನ್ನಪಟ್ಟಣ ಹನುಮಂತ ದೇವಸ್ಥಾನದಿಂದ ಭಟ್ಕಳ ಹೂವಿನ ಪೇಟೆ, ಸಾಗರ ರಸ್ತೆಯಲ್ಲಿ ತೆರಳಿ ಪರೀಶಿಲನೆ ನಡೆಸಿದರು. ನೂತನವಾಗಿ ನಿರ್ಮಾಣವಾಗುತ್ತಿರುವ ಪೊಲೀಸ್ ಸಮುದಾಯ ಭವನ, ಗ್ರಾಮಾಂತರ ಠಾಣೆ, ಮುರ್ಡೇಶ್ವರ ಪೊಲೀಸ್ ಠಾಣೆಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಡಿವೈಎಸ್‌ಪಿ ಬೆಳ್ಳಿಯಪ್ಪ.ಯು, ಸಿಪಿಐಗಳಾದ ದಿವಾಕರ ಪಿ, ಮಹಾಬಲೇಶ್ವರ ನಾಯ್ಕ, ಪಿಎಸ್‌ಐಗಳದ ಎಚ್.ಕುಡಗಂಟಿ, ಸುಮಾ ಆಚಾರ್ಯ, ಯಲ್ಲಪ್ಪಾ ಮಾದರ, ಭರತ ನಾಯಕ, ರತ್ನಾ ಕೆ ಸೇರಿ ಇತರರು ಇದ್ದರು

error: