May 18, 2024

Bhavana Tv

Its Your Channel

ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಮ್ಮ ನಾಡು-ನುಡಿಪರ ಬೇಡಿಕೆಗಳಿಗೆ ಸ್ಪಂದಿಸುವoತೆ ಮನವಿ

ಕಾರವಾರ:– ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು, ಉತ್ತರಕನ್ನಡ ಜಿಲ್ಲೆಗೆ ಸಂಬಧಿಸಿದ ಕೆಲ ನಾಡು-ನುಡಿಪರ ಬೇಡಿಕೆಗಳಿಗೆ ಸ್ಪಂದಿಸುವAತೆ ಜಿಲ್ಲಾಧಿಕಾರಿ ಉತ್ತರ ಕನ್ನಡ ಇವರಿಗೆ ಮನವಿ ಮಾಡಿಕೊಂಡಿದ್ದಾರೆ,

ಮನವಿಯಲ್ಲಿ ಕೆಲವು ವಿಷಯಗಳನ್ನು ಉಲ್ಲೇಖಿಸಿದ್ದು ಜಿಲ್ಲೆಯ ಕೆಲ ಬ್ಯಾಂಕುಗಳಲ್ಲಿ ಅದರಲ್ಲೂ ವಿಶೇಷವಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡ ಬಾರದ ಉದ್ಯೋಗಿಗಳೇ ಹೆಚ್ಚಾಗಿದ್ದು ಇದರಿಂದ ಬ್ಯಾಂಕಿನ ಗ್ರಾಹಕರು ಹಾಗೂ ಅಧಿಕಾರಿಗಳ ನಡುವೆ ಸಂಹವನದ ಕೊರತೆಯಾಗುತ್ತಿದೆ. ಕೆಲವು ಬ್ಯಾಂಕಿನ ಸಿಬ್ಬಂದಿಗಳು ಹಿಂದಿ, ಇಂಗ್ಲೀಷ್ ಭಾಷೆಯನ್ನು ಬಳಸುವುದರಿಂದ ಬಹುತೇಕ ಗ್ರಾಮೀಣ ಭಾಗದ ಗ್ರಾಹಕರಿಗೆ ಹಾಗೂ ನಗರ ಪ್ರದೇಶದಲ್ಲಿ ಹಿಂದಿ, ಇಂಗ್ಲೀಷ್ ಬಾರದವರಿಗೆ ಸಂಪರ್ಕದ ಸಮಸ್ಯೆಯಾಗುತ್ತಿದೆ. ಈ ಹಿಂದೆಯೇ ಕನ್ನಡ ಅಭಿವೃದ್ದಿ ಪ್ರಾಧಿಕಾರ ಹೊರ ರಾಜ್ಯದವರು ಕರ್ನಾಟಕದಲ್ಲಿ ಯಾವುದೇ ಇಲಾಖೆ ಹಾಗೂ ಬ್ಯಾಂಕುಗಳಲ್ಲಿ ನೇಮಕಗೊಂಡು ಕೆಲಸ ಮಾಡುವವರು ಆರು ತಿಂಗಳೊಳಗೆ ಕನ್ನಡ ಭಾಷೆ ಓದಲು ಬರೆಯಲು ಕಲಿತುಕೊಳ್ಳತಕ್ಕದ್ದು ಎಂಬ ಆದೇಶ ನೀಡಿತ್ತು. ಸರಕಾರ ಕೂಡಾ ಇದನ್ನು ಸಮ್ಮತಿಸಿದೆ. ಆದರೆ ಬಹುತೇಕ ಉದ್ಯೋಗಿಗಳು ಈ ನಿಯಮ ಪಾಲಿಸುತ್ತಿಲ್ಲ. ಇದು ಬಹಳಷ್ಟು ಸಮಸ್ಯೆಯಾಗುತ್ತಿದೆ. ಹಾಗಾಗಿ ಈ ಬಗ್ಗೆ ತಮ್ಮಲ್ಲಿ ನಿವೇದಿಸಿಕೊಳ್ಳುವುದೇನೆಂದರೆ ಸರಕಾರದ ನಿರ್ದೇಶನದಂತೆ ಜಿಲ್ಲೆಯ ಬ್ಯಾಂಕ್ ಹಾಗೂ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಕನ್ನಡ ಬಾರದ ಎಲ್ಲ ಉದ್ಯೋಗಿಗಳಿಗೂ ಆರು ತಿಂಗಳೊಳಗೆ ಕನ್ನಡ ಓದಲು, ಬರೆಯಲು ಕಲಿತುಕೊಳ್ಳಲು ನಿರ್ದೇಶಿಸುವುದು. ಒಂದೊಮ್ಮೆ ಆರು ತಿಂಗಳ ನಂತರವೂ ಇದೇ ಸಮಸ್ಯೆ ಮುಂದುವರೆದರೆ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕಾರಿ ಸಮಿತಿಯಲ್ಲಿ ಚರ್ಚಸಿ, ಜಿಲ್ಲೆಯ ಹಿರಿ ಕಿರಿಯ ಸಾಹಿತಿಗಳ, ಕನ್ನಡಪರ ಹೋರಾಟಗಾರರ, ಚಿಂತಕರ ಜೊತೆ ಸಮಾಲೋಚಿಸಿ ಮುಂದಿನ ಯೋಜನೆ ರೂಪಿಸಲಾಗುವುದು. ಸಂದರ್ಭ ಬಂದರೆ ಹೋರಾಟವೂ ಅನಿವಾರ್ಯವಾಗಬಹುದು.
ಸರಕಾರ ಈಗಾಗಲೇ ಎಲ್ಲ ಅಂಗಡಿ-ಮಳಿಗೆ ಹಾಗೂ ಸರಕಾರಿ, ಅರೆ ಸರಕಾರಿ, ಖಾಸಗಿ ಕಚೇರಿಗಳ ನಾಮಫಲಕಗಳನ್ನು ಕನ್ನಡಕ್ಕೆ (ಮೇಲ್ಭಾಗದಲ್ಲಿ ಶೇ. 60 ರಷ್ಟು ) ಆದ್ಯತೆ ನೀಡಿ ಅಳವಡಿಸುವಂತೆ ಆದೇಶಿಸಿದೆ. ಆದರೆ ಬಹುತೇಕ ಸ್ಥಳಗಳಲ್ಲಿ ಇದನ್ನು ಪಾಲಿಸುತ್ತಿಲ್ಲ. ಜೊತೆಗೆ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ರಸ್ತೆ ಹಾಗೂ ಬೇರೆ ಸ್ಥಳಗಳಲ್ಲಿಯೂ ಬೇರೆ ಭಾಷೆಗಳಿಂದ ನಾಮ ಫಲಕ ಬರೆಯಲಾಗುತ್ತಿದೆ. ಇದು ಕನ್ನಡ ನಾಡಲ್ಲಿ ಕನ್ನಡಕ್ಕೆ ಮಾಡುವ ಅವಮಾನವೇ ಆಗಿದೆ. ಹಾಗಾಗಿ ಸರಕಾರವೇ ನಿರ್ದೇಶಿಸಿರುವಂತೆ ಎಲ್ಲ ಸರಕಾರಿ, ಅರೆ ಸರಕಾರಿ, ಖಾಸಗಿ ಕಾರ್ಯಾಲಯ, ಬ್ಯಾಂಕ್, ಶಾಲಾ-ಕಾಲೇಜು, ಹಾಗೂ ವೃತ್ತ, ರಸ್ತೆಗಳು ಮತ್ತು ಮನೆಗಳಿಗೆ ಕಡ್ಡಾಯವಾಗಿ ಆದ್ಯತೆಯ ಮೇರೆಗೆ ಕನ್ನಡ ಭಾಷೆಯಲ್ಲಿಯೇ ನಾಮಫಲಕ ಅಳವಡಿಸುವಂತಾಗಬೇಕು. ಈ ಬಗ್ಗೆ ಜಿಲ್ಲಾಡಳಿತದಿಂದಲೇ ಒಂದು ಸುತ್ತೋಲೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ, ಗ್ರಾಮ ಪಂಚಾಯತಗಳಿಗೆ, ಸರಕಾರಿ ಕಚೇರಿ ಹಾಗೂ ಬ್ಯಾಂಕು ಇತರೆ ಕಚೇರಿಗಳಿಗೆ ಹೋಗವಂತಾದರೆ ಪರಿಣಾಮಕಾರಿಯಾಗಿರುತ್ತದೆ. ಆ ನಿರೀಕ್ಷೆಯಲ್ಲಿರುತ್ತೇವೆ.

ಉತ್ತರ ಕನ್ನಡ ಜಿಲ್ಲೆಯ ಗಡಿ ತಾಲೂಕಾದ ಕಾರವಾರಕ್ಕೆ ಗಡಿ ಕನ್ನಡ ಭವನ ಮಂಜೂರಾಗಿದ್ದು, ಕೆಲ ಸಮನ್ವಯದ ಕೊರತೆರಯಿಂದಾಗಿ ಅದರ ಹಣ ಮರಳಿ ಹೋಗಿರುವ ಮಾಹಿತಿಯಿದೆ. ಇದು ಬೇಸರದ ಸಂಗತಿ. ಈ ಬಗ್ಗೆ ಪರಿಶೀಲಿಸಿ, ಆ ಹಣ ಮರಳಿ ಬರುವಂತೆ ಕ್ರಮ ಕೂಗೊಳ್ಳಬೇಕು. ಹಾಗೂ ಸೂಕ್ತ ಸ್ಥಳದಲ್ಲಿ ನಿವೇಶನ ನೀಡಿ, ಗಡಿ ಕನ್ನಡ ಭವನ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಈ ಕೆಲಸಕ್ಕೆ ಸಂಬAಧಿಸಿ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲ ರೀತಿಯಿಂದಲೂ ಸಹಕಾರ ನೀಡುತ್ತದೆ.

ಉತ್ತರ ಕನ್ನಡ ಜಿಲ್ಲೆಯ ಪ್ರತೀ ತಾಲೂಕುಗಳಲ್ಲಿ ಸಾಹಿತ್ಯ ಭವನ / ಕನ್ನಡ ಭವನದ ಅವಶ್ಯತೆಯಿದ್ದು, ಈ ಬಗ್ಗೆ ನಿವೇಶನಕ್ಕಾಗಿ ಪ್ರತೀ ತಾಲೂಕು ಕೇಂದ್ರದ ಸ್ಥಳೀಯ ಸಂಸ್ಥೆಗಳಿಗೆ (ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ) ನಿರ್ದೇಶನ ನೀಡಬೇಕು. ಹಾಗೂ ಇದರ ಜೊತೆಗೆ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ದ ಪ್ರದೇಶಗಳಾದ ಕುಮಟಾದ ಗೋಕರ್ಣ, ಭಟ್ಕಳದ ಮುರುಡೇಶ್ವರ, ಶಿರಸಿಯ ಬನವಾಸಿ, ಜೋಯಿಡಾದ ರಾಮನಗರದಲ್ಲಿಯೂ ಕೂಡಾ ಸಾಹಿತ್ಯ ಭವನ / ಕನ್ನಡ ಭವನ ನಿರ್ಮಿಸುವಂತಾಗಬೇಕು. ಜೊತೆಗೆ ಪ್ರತೀ ತಾಲೂಕುಗಳಲ್ಲಿ ಸಾಹಿತ್ಯ ಭವನ / ಕನ್ನಡ ಭವನಕ್ಕಾಗಿ ಸರಕಾರಕ್ಕೊಂದು ಪ್ರಸ್ತಾವನೆ ಸಲ್ಲಿಸಿ, ತಮ್ಮಿಂದಾದ ಸಹಕಾರ ನೀಡಬೇಕು.
ಜಿಲ್ಲಾ ರಂಗ ಮಂದಿರದ ಸಭಾಂಗಣವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡಬೇಕು.
ಜಿಲ್ಲೆಯ ತಾಲೂಕು ಕೇಂದ್ರವೂ ಸೇರಿದಂತೆ ಹಲವೆಡೆ ಸಾಹಿತಿಗಳ, ರಾಷ್ಟ್ರ ಪುರುಷರ, ಹೋರಾಟಗಾರರ ಪುತ್ಥಳಿಗಳನ್ನು ನಿರ್ಮಿಸಲಾಗಿದೆ. ಈ ನಾಡಿನ ಏಕತೆ ಮತ್ತು ಸೌಹಾರ್ದತೆಗಾಗಿ ಈ ಎಲ್ಲ ಪುತ್ಥಳಿಗಳ ಮೇಲೆ ಆ ಭಾಗದ ಆಡಳಿತದಿಂದಲೇ ಕನ್ನಡ ಬಾವುಟವನ್ನು ಅಳವಡಿಸುವಂತೆ ಕ್ರಮ ಕೈಗೊಳ್ಳಬೇಕು. ಹಾಗೆ ಆದಲ್ಲಿ ಎಲ್ಲಡೆ ಭಾಷಾ ಬಾಂದವ್ಯ ಬೆಳೆಯಲು, ಬೆಸೆಯಲು, ಕನ್ನಡದ ಅಸ್ಮಿತೆ ಉಳಿಯಲು ಸಾದ್ಯ ಈ ಎಲ್ಲ ಸಂಗತಿಗಳನ್ನು ಆದ್ಯತೆಯ ಮೇರೆಗೆ ತೆಗೆದುಕೊಂಡು, ಕ್ರಮ ಕೈಗೊಳ್ಳುವಂತೆಯೂ, ಕನ್ನಡದ ಕೈಂಕರ್ಯಕ್ಕೆ ಜೊತೆಯಾಗುವಂತೆಯೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ಕನ್ನಡ ಇವರು ಜಿಲ್ಲಾಧಿಕಾರಿ ಉತ್ತರ ಕನ್ನಡ ಹಾಗೂ ಉಸ್ತುವಾರಿ ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ,

error: