ಶಿರಸಿ: ಪ್ರಸಕ್ತ ವರ್ಷದ ಪ್ರಾರಂಭದಲ್ಲಿ ಕೋರೋನಾ ಕೋವಿಡ್-೧೯ ಸಂದರ್ಭದಲ್ಲಿ ಕಾರ್ಮಿಕರಿಗೆ ಆರ್ಥೀಕ ಸಹಾಯ ನೀಡುವ ಉದ್ದೇಶದಿಂದ ರಾಜ್ಯ ಸರಕಾರವು ಪ್ರತಿ ಕಾರ್ಮಿಕರಿಗೂ ರೂಪಾಯಿ ೫ ಸಾವಿರ ನೀಡಲು ನಿರ್ಧರಿಸಿದ್ದು, ಸರಕಾರ ಘೋಷಣೆ ಮಾಡಿ ೪ ತಿಂಗಳಾದರೂ ಶಿರಸಿ ತಾಲೂಕಿನಲ್ಲಿ ಸಾವಿರಾರು ಕಾರ್ಮಿಕರಿಗೆ ಆರ್ಥೀಕ ಸಹಾಯಧನ ಇಂದಿನವರೆಗೂ ತಲುಪದೇ ಇರುವುದರಿಂದ ಅತೀ ಶೀಘ್ರದಲ್ಲಿ ಆರ್ಥೀಕ ಸಹಾಯ ಧನ ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿಗೆ ಕಾರ್ಮಿಕ ಮುಖಂಡರು ಅಗ್ರಹಿಸಿದ್ದಾರೆ.
ಶಿರಸಿ ತಾಲೂಕಿನ ವಿವಿಧ ಕಾರ್ಮಿಕ ಸಂಘಟನೆಯ ಪ್ರಮುಖರು ಇಂದು ಸ್ಥಳೀಯ ತಹಶೀಲದಾರ ಮೂಲಕ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಿದರು.
ಶಿರಸಿ ತಾಲೂಕಿನಲ್ಲಿ ಮಾರ್ಚ ೨೯,೨೦೨೦ ರವರೆಗೆ ಕಾರ್ಮಿಕ ಕಲ್ಯಾಣ ಮಂಡಳಿಗೆ ನೋಂದಾಯಿತವಾಗಿರುವ ೨೫೨೪ ಕಾರ್ಮಿಕರಿದ್ದು ಇಂದಿನವರೆಗೂ ಕೇವಲ ೭೮೮ ಕಾರ್ಮಿಕರಿಗೆ ಮಾತ್ರ ಸಹಾಯಧನ ತಲುಪಿದ್ದು ಇರುತ್ತದೆ ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಕೋರೋನಾ ಕೋವಿಡ್-೧೯ ಸಂಕಷ್ಟದಿAದ ಇಗಾಗಲೇ ಸಾಕಷ್ಟು ಆರ್ಥೀಕ ತೊಂದರೆ ಅನುಭವಿಸುತ್ತಿದ್ದು ನೋಂದಾಯಿತ ಕಾರ್ಮಿಕರಿಗೆ ಸರಕಾರ ಘೋಷಿಸಿದ ಆರ್ಥೀಕ ಸಹಾಯಧನ ಶೀಘ್ರ ಬಿಡುಗಡೆ ಮಾಡಿ ಕಾರ್ಮಿಕರಿಗೆ ನೇರವಾಗಬೇಕೆಂದು ಮನವಿಯಲ್ಲಿ ಕಾರ್ಮಿಕ ಮುಖಂಡರು ವಿನಂತಿಸಿಕೊAಡಿದ್ದಾರೆ.
ಮನವಿ ಕೋಡುವ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ಜುಜೆ ಬಾಬು ಡಿಸೋಜಾ, ಅಶೋಕ ಪಡ್ತಿ, ರಾಜು, ಕಮಲಾಕರ ಆಚಾರಿ, ನಂದನ ಆಚಾರಿ, ಕೃಷ್ಣ ಮುಂತಾದವರು ಉಪಸ್ಥಿತರಿದ್ದರು.
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ