May 1, 2024

Bhavana Tv

Its Your Channel

ಜಾಲಿಯಲ್ಲಿ ನಿರ್ಮಿಸಲು ಉದ್ದೇಶಿಸಿದ ಪದವಿ ಕಾಲೇಜನ್ನು ಭಟ್ಕಳ ತಾಲೂಕಿನ ವೆಂಕಟಾಪುರ ಗ್ರಾಮದ ಕರಾವಳಿ ಪೊಲೀಸ್ ಠಾಣಾ ಹತ್ತಿರ ಅಥವಾ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನಿರ್ಮಿಸಿ, ಮುಂದೆ ವಿದ್ಯಾರ್ಥಿಗಳಿಗೆ ಆಗುವ ಅನಾನುಕೂಲತೆಯನ್ನ ತಪ್ಪಿಸಿ . ಇಲ್ಲವಾದರೆ ವಿದ್ಯಾರ್ಥಿಗಳ ಜೊತೆಗೂಡಿ ಉಗ್ರ ಹೋರಾಟ ಮಾಡಬೇಕಾಗುತ್ತದೆ. – ಭಟ್ಕಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಂತೋಷ ನಾಯ್ಕ್ .

ಭಟ್ಕಳ ತಾಲೂಕಿಗೆ ಈ ಹಿಂದೆಯೇ ಮಾಜಿ ಸಚಿವರಾದ ಮಾನ್ಯ ಶಿವಾನಂದ ನಾಯ್ಕ್ ರವರ ಶಾಸಕತ್ವದ ಅವಧಿಯಲ್ಲಿ ಒಂದು ಸರಕಾರಿ ಪದವಿ ಕಾಲೇಜನ್ನು ಮಂಜೂರಿ ತಂದು ಕಳೆದ ಹತ್ತಾರು ವರ್ಷಗಳಿಂದ ಪದವಿ ಕಾಲೇಜು ಒಂದು ಖಾಸಗಿಯವರ ಕಟ್ಟಡದಲ್ಲಿ ಬಾಡಿಗೆ ಆಧಾರದಮೇಲೆ ನಡೆಯುತ್ತಿದೆ. ಈ ಹಿಂದೆ ಮಾನ್ಯ ಸಿದ್ದರಾಮಯ್ಯ ನವರ ಮುಖ್ಯಮಂತ್ರಿ ಅವಧಿಯಲ್ಲಿ ಸದರಿ ಕಾಲೇಜಿಗೆ ಕಟ್ಟಡ ನಿರ್ಮಿಸಲು ಸಾಕಷ್ಟು ಹಣವನ್ನು ಮಾಜಿ ಶಾಸಕರಾದ ಮಾನ್ಯ ಮಾಂಕಾಳ್ ವೈದ್ಯ ರವರು ಮಂಜೂರಿ ತಂದಿದ್ದು ಕಾಮಗಾರಿಯ ಉದ್ಘಾಟನೆಯನ್ನೂ ಕೂಡ ಸಿದ್ದರಾಮಯ್ಯ ನವರು ಮಾಡಿದ್ದು, ಕಾಲೇಜು ಕಟ್ಟಲು ಸರಿಯಾದ ಯೋಗ್ಯವಾದ ಸ್ಥಳ ಪರೀಶೀಲನೆಯ ಹಂತದಲ್ಲಿ ಇರುವಾಗ ಸಿದ್ದರಾಮಯ್ಯನವರ ಸರಕಾರದ ಅವಧಿ ಮುಗಿದಿತ್ತು. ಕಾರಣ ಕಾಲೇಜಿನ ಕಟ್ಟಡ ಕಾಮಗಾರಿ ಪ್ರಾರಂಬಿಸಿರಲಿಲ್ಲ. ಈಗ ಈ ಮೊದಲೇ ಮಂಜೂರಿಯಾದ ಸದ್ರಿ ಕಾಲೇಜನ್ನು ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕರಿಕಲ್ ರಸ್ತೆಯ ಪಕ್ಕದಲ್ಲಿರುವ ಸ್ಥಳದಲ್ಲಿ ನಿರ್ಮಿಸಲು ಸಂಭAದ ಅಧಿಕಾರಿಗಳು ಮಾನ್ಯ ಶಾಸಕರ ಸೂಚನೆಯ ಮೇರಿಗೆ ಪುನ್ಹ ಮತ್ತೊಮ್ಮೆ ಕಾಮಗಾರಿ ಉದ್ಘಾಟನೆ ಮಾಡಲು ತಯಾರಿ ನಡೆಸಿರುತ್ತಾರೆ. ಆ ಭಾಗದಲ್ಲಿ ಕಾಲೇಜನ್ನು ನಿರ್ಮಿಸಿದಲ್ಲಿ ಆಗಬಹುದಾದಂತಹ ಅನುಕೂಲ, ಹಾಗೂ ಅನಾನುಕೂಲದ ಬಗ್ಗೆ ಯೋಚಿಸದೆ ತರಾತುರಿಯಲ್ಲಿ ಕಾಮಗಾರಿಯ ಶಂಕುಸ್ಥಾಪನೆ ಮಾಡಲು ತಯಾರಿ ನಡೆಸಿರುತ್ತಾರೆ. ಆದರೆ ಜಾಲಿಗ್ರಾಮದಲ್ಲಿ ಕಾಲೇಜು ನಿರ್ಮಿಸಲು ಹೊರಟ ಸ್ಥಳವು ಭಟ್ಕಳ ಪಟ್ಟಣದಿಂದ ಹಾಗೂ ರಾಷ್ಟೀಯ ಹೆದ್ದಾರಿಯಿಂದಲೂ ಸುಮಾರು ೪ ಕಿಲೋ ಮೀಟರ್ ದೂರದಲ್ಲಿದ್ದು ಯಾವುದೇ ವಾಹನ ಸೌಕರ್ಯ ಸರಕಾರಿ ಹಾಗೂ ಖಾಸಗಿ ಸಂಚಾರಿ ವಾಹನಗಳು ಓಡಾಡದೇ ಇರುವಂತ ಸ್ಥಳವಾಗಿದ್ದು ಮೇಲೆ ಹೇಳಿದ ಸ್ಥಳದಲ್ಲಿ ಕಾಲೇಜನ್ನು ನಿರ್ಮಿಸಿದಲ್ಲಿ ವಿದ್ಯಾರ್ಥಿಗಳು ತಮ್ಮ ತಮ್ಮ ಹಳ್ಳಿಗಳಿಂದ ಭಟ್ಕಳಕ್ಕೆ ಬಂದು ಭಟ್ಕಳದಿಂದ ೪ ಕಿ ಮೀ ದೂರ ನಡೆದು ಹೋಗಿ ಬರ ಬೇಕಾಗುವ ಪರಿಸ್ಥಿತಿ ಉಂಟಾಗಿ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಹಾಗೂ ಅನಾನುಕೂಲವಾಗುತ್ತದೆ. ಆದರೆ ಸದ್ರಿ ಕಾಲೇಜನ್ನು ಭಟ್ಕಳತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಹಾದು ಹೋದ ರಾಷ್ಟೀಯ ಹೆದ್ದಾರಿಯ ಪೂರ್ವ ಹಾಗೂ ಪಶ್ಚಿಮ ದಿಕ್ಕಿನಲ್ಲಿ ಸಾಕಷ್ಟು ಸರಕಾರಿ ಸ್ಥಳ ಖಾಲಿ ಇರುವ ಕರಾವಳಿ ಪೊಲೀಸ್ ಠಾಣೆಯ ಪಕ್ಕದಲ್ಲಿ ಇರುವ ಸರಕಾರಿ ಸ್ಥಳದಲ್ಲಿ ನಿರ್ಮಿಸಿದಲ್ಲಿ ಸದ್ರಿ ಸ್ಥಳವು ತಾಲೂಕಿನ ಮದ್ಯದ ಸ್ಥಳವೂ ಹಾಗೂ ರಾಷ್ಟ್ರೀಯ ಹೆದ್ಧಾರಿಯ ಪಕ್ಕದಲ್ಲೇ ಇರುವುದರಿಂದ ವಿದ್ಯಾರ್ಥಿಗಳಿಗೆ ಹೋಗಿ ಬರಲೂ ಹತ್ತಿರವೂ ವಾಹನ ಸೌಲಭ್ಯವೂ ಇರುವಂತಾಗಿ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ ವಾಗುತ್ತದೆ. ಕಾರಣ ಭಟ್ಕಳ ವಿದ್ಯಾರ್ಥಿಗಳ ಪರವಾಗಿ ಮತ್ತು ಭಟ್ಕಳದ ಜನತೆಯ ಪರವಾಗಿ ಮಾನ್ಯ ಶಾಸಕರಲ್ಲಿ ಹಾಗೂ ಸಂಭAದ ಪಟ್ಟ ಅಧಿಕಾರಿಗಳಲ್ಲಿ ಈ ಮೂಲಕ ಮಾಡಿಕೊಳ್ಳುವ ಮನವಿ ಏನೆಂದರೆ ವಿದ್ಯಾರ್ಥಿಗಳಿಗೆ, ಹಾಗೂ ನಾಗರಿಕರಿಗೆ ಅನುಕೂಲವಾಗುವಂತೆ ಜಾಲಿಯಲ್ಲಿ ನಿರ್ಮಿಸಲು ಉದ್ದೇಶಿಸಿದ ಪದವಿ ಕಾಲೇಜನ್ನು ಭಟ್ಕಳ ತಾಲೂಕಿನ ವೆಂಕಟಾಪುರ ಗ್ರಾಮದ ಕರಾವಳಿ ಪೊಲೀಸ್ ಠಾಣಾ ಹತ್ತಿರ ಅಥವಾ ರಾಷ್ಟ್ರೀಯ ಹೆದ್ದಾರಿಯ ಪೂರ್ವಕ್ಕೆ ದಿಕ್ಕಿನೆಡೆಗೆ ಕೇವಲ ೨೦೦ ಮೀಟರ್ ದೂರದಲ್ಲಿರುವ ಸರಕಾರಿ ಸ್ಥಳದಲ್ಲಿ ನಿರ್ಮಿಸಿ, ಮುಂದೆ ವಿದ್ಯಾರ್ಥಿಗಳಿಗೆ ಆಗುವ ಅನಾನುಕೂಲತೆಯನ್ನ ತಪ್ಪಿಸಿ . ಇಲ್ಲವಾದರೆ ವಿದ್ಯಾರ್ಥಿಗಳ ಜೊತೆಗೂಡಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: