May 16, 2024

Bhavana Tv

Its Your Channel

ಸರಕಾರಿ ಪದವಿ ಪೂರ್ವ ಕಾಲೇಜಿಗೆ ಸಂಬOಧಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ ಅವರ ಹೇಳಿಕೆಗೆ ಬಿ.ಜೆ.ಪಿ. ಮಂಡಳದ ವತಿಯಿಂದ ತೀವ್ರ ಆಕ್ಷೇಪ

ಭಟ್ಕಳ:ತಾಲ್ಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಸಂಬoಧಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ ಅವರ ಹೇಳಿಕೆಗೆ ಬಿ.ಜೆ.ಪಿ. ಮಂಡಳದ ವತಿಯಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು ಅವರ ಹೇಳಿಕೆಯ್ನು ಮಂಡಳದ ಅಧ್ಯಕ್ಷ ಸುಬ್ರಾಯ ದೇವಡಿಗ ಖಂಡಿಸಿದ್ದಾರೆ.

ಭಾನುವಾರ ಇಲ್ಲಿನ ಪ್ರವಾಸಿಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಚಿವ ಶಿವಾನಂದ ನಾಯ್ಕರ ಕಾಲದಲ್ಲಿಯೇ ಭಟ್ಕಳದಲ್ಲಿ ಪ್ರಾರಂಭಗೊoಡಿತ್ತು. ಅಲ್ಲಿಂದ ಇಲ್ಲಿಯ ತನಕ ೧೦ ವರ್ಷಗಳ ಕಾಲ ಆಡಳಿತ ನಡೆಸಿದ್ದ ಕಾಂಗ್ರೇಸ್‌ನವರು ಏಕೆ ಭಟ್ಕಳ ನಗರದಲ್ಲಿ ಸೂಕ್ತ ಜಾಗವನ್ನು ಹುಡುಕಿ ಸ್ವಂತ ಕಟ್ಟಡ ಕಟ್ಟಲು ಪ್ರಯತ್ನ ಮಾಡಲಿಲ್ಲ? ಈಗ ಜಾಲಿಯಲ್ಲಿ ಆಗುತ್ತಿರುವ ಶಂಕು ಸ್ಥಾಪನೆಗೆ ಕಾಂಗ್ರೇಸ್‌ನ ಅಧ್ಯಕ್ಷರು ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಉತ್ತರಿಸಲಿ ಎಂದು ಬಿಜೆಪಿ ತಾಲೂಕಾಧ್ಯಕ್ಷ ಸುಬ್ರಾಯ ದೇವಾಡಿಗ ಪ್ರಶ್ನಿಸಿದ್ದಾರೆ.
ಬಿಜೆಪಿ ಅಭೀವೃದ್ದಿ ಕಾಮಗಾರಿಗಳನ್ನು ಸಹಿಸದ ಕಾಂಗ್ರೇಸನವರು ಹತಾಶೆಯಿಂದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಥಮ ದರ್ಜೆ ಕಾಲೇಜಿಗೆ ಹೆಬಳೆಯಲ್ಲಿ ಶಂಕು ಸ್ಥಾಪನೆ ಮಾಡಿದ್ದಾರೆ. ಮತ್ಯಾಕೆ ಇನ್ನೊಂದು ಶಂಕುಸ್ಥಾಪನೆ ಎಂದು ಕೇಳುತ್ತಿದ್ದಾರೆ. ಆದರೆ ಇವರು ಚುಣಾವಣೆ ತುರಾತುರಿಯಲ್ಲಿ ಹೆಬಳೆಯಲ್ಲಿ ಮಂಜೂರಾದ ಜಾಗದಲ್ಲಿ ಅನುದಾನ ಬಿಡುಗಡೆ ಮಾಡದೇ ಶಂಕುಸ್ಥಾಪನೆ ಮಾಡಿ ಹೋಗಿದ್ದಾರೆ. ಈಗ ನಮ್ಮ ಶಾಸಕರು ನಿರಂತರ ಪ್ರಯತ್ನ ಮಾಡಿ ಜಾಲಿಯಲ್ಲಿ ಸ್ವಂತ ಜಾಗ ಮಂಜೂರಿ ಜೋತೆಗೆ ಅನುದಾನ ಕೂಡ ಹಾಕಿಸಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಮಾಜಿ ಅಧ್ಯಕ್ಷ ರಾಜೇಶ ನಾಯ್ಕ ಮಾತನಾಡಿ ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸರಿಯಾದ ಮೂಲಭೂತ ಸೌಕರ್ಯವಿರದ ಕಾರಣ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಕಳೇದ ಹಲವಾರು ವರ್ಷಗಳಿಂದ ಎಲ್ಲ ವಿದ್ಯಾರ್ಥಿಗಳ ಕೂಗು ಕಾಲೇಜಿಗೆ ಸ್ವಂತ ಕಟ್ಟಡ ಬೇಕು ಎನ್ನುವುದು. ಅದಕ್ಕಾಗಿ ನಮ್ಮ ಶಾಸಕರು ಅವಿರತ ಪ್ರಯತ್ನ ಮಾಡಿ ಅತೀ ಕಡಿಮೆ ಅವಧಿಯಲ್ಲಿ ಜಾಗವನ್ನು ಮಂಜೂರಿ ಮಾಡಿಸಿಕೊಂಡು ಬಂದಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ.
ಕಾಂಗ್ರೇಸ್‌ನ ಬ್ಲಾಕ್ ಅಧ್ಯಕ್ಷರು ವ್ಯಥಾ ಆರೋಫ ಮಾಡುವ ಬದಲು ನಗರ ಪ್ರದೇಶದಲ್ಲಿ ೫ ಎಕರೆ ಸರ್ಕಾರಿ ಭೂಮಿ ಖಾಲಿ ಇದ್ದರೆ ತೋರಿಸಿಕೋಡಲಿ ಎಂದು ತಿಳಿಸಿದರು. ಜಾಲಿಯಲ್ಲಿ ಒಟ್ಟೂ ೪೦ ಎಕರೆ ಸರ್ಕಾರಿ ಜಮೀನಿದ್ದು ಅದರಲ್ಲಿ ಪ್ರಥಮ ದಜೇ ಕಾಲೇಜು ಜೋತೆಗೆ ಪಿಯು ಕಾಲೇಜು ಹಾಗು ಐಟಿಐ ಕಾಲೇಜು ಹಾಗೂ ಸಮುದಾಯ ಆರೋಗ್ಯ ಕೇಂದ್ರ ಕೂಡ ಇಲ್ಲೇ ಮುಂದಿನ ದಿನಗಳಲ್ಲಿ ಸ್ಥಾಪನೆಯಾಗುವುದರಿಂದ ಅಲ್ಲಿನ ಸುತ್ತಮುತ್ತಲಿನ ಪ್ರದೇಶ ಅಭೀವೃದ್ದಿ ಕಾಣುವುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಳಿಯ ಪ್ರಮುಖರಾದ ಮೋಹನ ನಾಯ್ಕ, ರವಿ ನಾಯ್ಕ, ಹಾಗೂ ಕಾಲೇಜು ಅಭೀವೃದ್ದಿ ಸಮಿತಿ ಸದಸ್ಯರಾದ ಭಾಸ್ಕರ ದೈಮನೆ, ಶಿವಾನಿ ಶಾಂತರಾಮ, ಬಿಜೆಪಿ ಮುಖಂಡರಾದ ದಿನೇಶ ನಾಯ್ಕ, ಕೃಷ್ಣ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

error: