May 5, 2024

Bhavana Tv

Its Your Channel

ಗುಳ್ಳಾಪುರ ಅರಣ್ಯ ಸಿಬ್ಬಂದಿಗಳ ದೌರ್ಜನ್ಯ: ಸೂಕ್ತ ಕ್ರಮಕ್ಕೆ ಆಗ್ರಹ. ಜಿಲ್ಲಾದ್ಯಂತ ಹೋರಾಟಕ್ಕೆ ಎಚ್ಚರಿಕೆ.

ಭಟ್ಕಳ: ಸಾಂಕ್ರಾoಮಿಕ ರೋಗ ಕೋರೋನಾ ಕೋವೀಡ್ ಹಾಗೂ ತೀವೃ ಅತೀವೃಷ್ಟಿಯ ಸಂದರ್ಭದಲ್ಲಿ ಯಲ್ಲಾಪುರ ತಾಲೂಕ ಗುಳ್ಳಾಪುರ ಗ್ರಾಮದಲ್ಲಿ ಅನಾಧಿಕಾಲದಿಂದ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ಈರಮ್ಮ ದೇವರಾಜ ಆಚಾರಿ ಅತಿಕ್ರಮಣದಾರಳ ಸಾಗುವಳಿಗೆ ಆತಂಕ ಉಂಟುಮಾಡಿರುವ ಹಿನ್ನೆಲೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿರುವ ಅರಣ್ಯ ಸಿಬ್ಬಂದಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ತೀರ್ವ ಹೋರಾಟ ಮಾಡಲಾಗುವುದೆಂದು ಅಗ್ರಹಿಸಿ ತಾಲೂಕಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಪ್ರಮುಖರು ಇಂದು ಮುಖ್ಯ ಮಂತ್ರಿಗೆ ಮನವಿ ಅರ್ಪಿಸಿದರು.

ಇಂದು ಸ್ಥಳಿಯ ಎ.ಸಿ ಕಛೇರಿಯ ಮೂಲಕ ಮುಖ್ಯಮಂತ್ರಿಗಳಿಗೆ ಹೋರಾಟಗಾರರ ಸಮಿತಿಯ ನೀಯೋಗವು ಮನವಿ ನೀಡಿತು.

ಅರಣ್ಯ ಸಿಬ್ಬಂದಿಗಳ ಕಾನೂನು ಬಾಹಿರ ಕೃತ್ಯಕ್ಕೆ ಸ್ಥಳೀಯ ಹೋರಾಟಗಾರ ವೇದಿಕೆಯು ಪ್ರಬಲವಾಗಿ ಖಂಡಿಸುತ್ತಾ, ಪದೇ ಪದೇ ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣದಾರರ ಮೇಲೆ ದಬ್ಬಾಳಿಕೆ ದೌರ್ಜನ್ಯ ಜರುಗುತ್ತಿರುವುದು ವಿಷಾದಕರ. ಇಂತಹ ಕಾನೂನು ಬಾಹಿರ ಕೃತ್ಯವನ್ನು ಅರಣ್ಯ ಸಿಬ್ಬಂದಿಗಳಿoದ ಆಗುತ್ತಿರುವುದನ್ನು ತಕ್ಷಣ ನಿಯಂತ್ರಿಸಬೇಕೆoದು ಹೋರಾಟಗಾರರ ವೇದಿಕೆಯು ಅಗ್ರಹಿಸಿದೆ.

ಪಹಣಿ ಪತ್ರಿಕೆಯಲ್ಲಿ ೧೯೭೩-೭೪ ಇಸ್ವಿಯಿಂದಲೂ ಅತಿಕ್ರಮಣದಾರಂತ ಹೆಸರು ನಮೂದಿದ್ದು ೧೯೮೦-೮೧ ರಿಂದ ವಾಸ್ತವ್ಯದ ಮನೆಗೆ ಮನೆ ನಂ ಇರುವುದಲ್ಲದೇ, ೧೯೭೮ ರ ಪೂರ್ವ ಹಾಗೂ ಅರಣ್ಯ ಹಕ್ಕು ಕಾಯಿದೆಯಲ್ಲಿ ಮಂಜೂರಿಗೆ ಅರ್ಜಿ ಸಲ್ಲಿಸಿದಾಗಲೂ ಅರಣ್ಯ ಸಿಬ್ಬಂದಿಗಳ ದುರ್ನಡತೆ ಖಂಡನಾರ್ಹ ಹಾಗೂ ಕಾನೂನು ವಿರೋಧ ಕೃತ್ಯವಾಗಿದೆ. ಎಂದು ಹೋರಾಟ ಸಮಿತಿಯು ಅರಣ್ಯ ಸಿಬ್ಬಂದಿಗಳ ವರ್ತನೆ ಆಕ್ಷೇಪಿಸಿದೆ

 ಹೋರಾಟಗಾರ ವೇದಿಕೆಯ ಜಿಲ್ಲಾ ಸಂಚಾಲಕರಾದ ದೇವರಾಜ ಗೊಂಡ, ಪಾಂಡುರAಗ ನಾಯ್ಕ ಬೆಳಕೆ, ಸಯ್ಯದ ಅಲಿ, ರಿಜವಾನ್ ಸಿದ್ದಿಕಾ, ಕಯಂ ಕೋಲ,  ಸಬೀರ್ ಹಸನ, ದೇವಿದಾಸ ನಾಯ್ಕ ಕಟಗೇರಿ, ಶಾಂತಿ ಮೋಗೆರ, ನಾರಾಯಣ ಕೃಷ್ಣ ನಾಯ್ಕ, ಮುಂತಾದವರು ನೀಯೋಗದಲ್ಲಿ ಉಪಸ್ಥಿತರಿದ್ದರು.
error: