May 5, 2024

Bhavana Tv

Its Your Channel

ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘ ವತಿಯಿಂದ ಸೋಮವಾರ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ

ಹೊನ್ನಾವರ : ಈಡಿಗ ಬಿಲ್ಲವ ನಾಮಧಾರಿ ಸಮಾಜದ ೨೬ ಉಪ ಪಂಗಡಗಳ ಒಳಗೊಂಡ ಸಮಾಜದ ಬೇಡಿಕೆಗಳನ್ನು ಈಡೆರಿಸಿವಂತೆ ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘ ವತಿಯಿಂದ ಸೋಮವಾರ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಿದರು.
ಈಡಿಗ, ನಾಮಧಾರಿ, ಬಿಲ್ಲವ ಸೇರಿದಂತೆ ಸಮಾಜದ ೨೬ ಉಪಫಮಗಡಗಳು ರಾಜ್ಯದಲ್ಲಿದ್ದು ೧ ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿದೆ. ರಾಜ್ಯದ ನಾಲ್ಕನೇ ದೊಡ್ಡ ಸಮಾಜ ಎನ್ನುವ ಮನ್ನಣಿ ಇದ್ದರೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರ್ಕಾರಕ್ಕೆ ಹಲವು ಬಾರಿ ಮನವಿ ನೀಡಿದರೂ ಸ್ಪಂದಿಸಿಲ್ಲ. ಕುಲಕಸಬಾದ ಮೂರ್ತಿಗಾರಿಕೆ ಸರ್ಕಾರದ ನೀತಿ ನಿಯಮವಳಿಗೆ ಬಲಿಯಾಗಿದೆ. ಅಲ್ಲದೆ ಪರ್ಯಾಯವಾಗಿ ವ್ಯವಸಾಯ ಆಯ್ಕೆ ಮಾಡಿಕೊಂಡರೂ ಆರ್ಥಿಕ ಮುಗ್ಗಟ್ಟು ಅನುಭವಿಸುವ ಜೊತೆ ರಾಜಕೀಯವಾಗಿಯೂ ಹಿಂದುಳೀದ ಸಮಾಜ ಎನ್ನುವ ಹಣೆಪಟ್ಟಿ ಹೊಂದಿದೆ. ಶೈಕ್ಷಣಿಕವಾಗಿ ಅಭಿವೃದ್ದಿಗಾಗಿ ಸಮಾಜವನ್ನು ಪ್ರವರ್ಗ ೧ಕ್ಕೆ ಸೇರಿಸಬೇಕು. ೨೬ ಉಪಪಂಗಡಗಳಿಗೆ ಪ್ರತೈಕ ಅಭಿವೃದ್ದಿ ನಿಗಮ ಸ್ಥಾಪಿಸುವ ಜೊತೆ ೫೦೦ ಕೋಟಿ ಮೀಸಲಿಡಬೇಕು. ಭೂರಹಿತ ರೈತರಿಗೆ ಸರ್ಕಾರಿ ಜಮೀನು ಮಂಜೂರಿ ಮಾಡಿ ಮನೆ ನಿವೇಶನದ ಹಕ್ಕುಪತ್ರ ನೀಡಬೇಕು. ಮಂಗಳೂರಿನ ಅಂತರಾಷ್ಟಿçÃಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ಕಾರುಣಿಕ ಕೋಟಿ ಚೆನ್ನಯ್ಯರವರ ಹೆಸರಿಡಬೇಕು. ಅರಣ್ಯ ಅತಿಕ್ರಮಣದಾರ ಸಮಸ್ಯೆಗಳಿಗೆ ಶಿಘ್ರವಾಗಿ ಸ್ಪಂದಿಸಬೇಕು. ಬಹುಮುಖ್ಯವಾಗಿ ಸಮಾಜದ ಸಿಂಗದೂರು ಚೌಡೇಶ್ವರಿ ದೇವಾಲಯಕ್ಕೆ ಸರ್ಕಾರ ನೇಮಿಸಿರುವ ಮೇಲ್ವಿಚಾರಣ ಹಾಗೂ ಸಲಹಾ ಸಮಿತಿ ರದ್ದುಪಡಿಸಿ ಸಮಾಜದ ರಾಮಪ್ಪನವರಿಗೆ ನೀಡಬೇಕು. ಈ ಆಡಳಿತದ ವಿಷಯದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡದಂತೆ ಮನವಿ ಸಲ್ಲಿಸಲಾಯಿತು.
ತಹಶೀಲ್ದಾರ ವಿವೇಕ ಶೇಣ್ವಿ ಮನವಿ ಸ್ವೀಕರಿಸಿದರು.
ಮನವಿ ನೀಡಿದ ಬಳಿಕ ಸಂಘದ ಅಧ್ಯಕ್ಷ ಧನಂಜಯ ನಾಯ್ಕ ಮಾತನಾಡಿ ಪ್ರಮುಖ ೬ ಬೇಡಿಕೆ ಇಟ್ಟು ಮನವಿ ನೀಡಲಾಗಿದೆ. ದೊಡ್ಡ ಸಮಾಜವಾದರೂ ಇದುವರೆಗೆ ಶೈಕ್ಷಣಿಕವಾಗಿ ರಾಜಕೀಯವಾಗಿ ಪ್ರಗತಿ ಕಂಡಿಲ್ಲ. ಸಮಾಜಕ್ಕೆ ಸಿಗಬಹುದಾದ ಹಲವು ಸೌಲಭ್ಯದಿಂದ ನಾವು ವಂಚಿತರಾಗುತ್ತಿದ್ದೇವೆ. ಪ್ರವರ್ಗ ೨ಎ ದಿಂದ ಪ್ರವರ್ಗ ೧ಕ್ಕೆ ಸೇರಿಸದಾಗ ಶೈಕ್ಷಣಿಕವಾಗಿ ಹಲವು ಸೌಲಭ್ಯಗಳು ದೊರೆಯಲಿದೆ. ಸಮಾಜದ ಅಭಿವೃದ್ದಿಗೆ ನಿಗಮ ಸ್ಥಾಪಿಸಬೇಕು. ಇತ್ತಿಚಿಗೆ ಸಮಾಜದ ದೇವಾಲಯದಲ್ಲಿ ಒಂದಾದ ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯಕ್ಕೆ ನೇಮಕ ಮಾಡಿದ ಸಲಹಾ ಸಮಿತಿ ರದ್ದುಪಡಿಸಿ ಸರ್ಕಾರದ ಹಸ್ತಕ್ಷೇಪ ಮಾಡದಂತೆ ಆಗ್ರಹಿಸಿದರು. ಸರ್ಕಾರ ಬೇಡಿಕೆ ಈಡೇರಿಸುವ ಭರವಸೆ ಇದ್ದು, ಬೇಡಿಕೆ ಈಡೇರದೇ ಹೊದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂತೋಷ ನಾಯ್ಕ, ದಿನೇಶ ನಾಯ್ಕ, ಪಾಡುರಂಗ ನಾಯ್ಕ, ಗೋಪಾಲ ನಾಯ್ಕ, ಜಗದೀಶ ನಾಯ್ಕ, ಮಹೇಶ ನಾಯ್ಕ, ಸಂದೀಪ ನಾಯ್ಕ, ಅಜಿತ್ ನಾಯ್ಕ ಮತ್ತಿತರರು ಹಾಜರಿದ್ದರು.

error: