May 4, 2024

Bhavana Tv

Its Your Channel

ಅಪೂರ್ಣವಾಗಿರುವ ಜಿಲ್ಲಾ ಕ್ರೀಡಾಂಗಣ ಕಾಮಗಾರಿ ಪೂರ್ಣಗೊಳಿಸುವ ದಿಸೆಯಲ್ಲಿ ಸರ್ಕಾರ ಅತಿ ಶ್ರೀಘದಲ್ಲಿ ಇನ್ನುಳಿದ ಹಣ ಬಿಡುಗಡೆ ಮಾಡುಬೇಕೆಂದು ಸ್ವಂದನಾ ಸ್ಪೋರ್ಟ್ಸ ಅಕ್ಯಾಡಮಿ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹ

ಶಿರಸಿ: ಸ್ಥಳೀಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಮೂಲಭೂತ ಸೌರ್ಕಯ ಮತ್ತು ಸೌಲಭ್ಯಕ್ಕೆ ಕಾಮಗಾರಿ ಡಿಸೆಂಬರ್ ಅಂತ್ಯದಲ್ಲಿ ಪೂರ್ಣಗೊಳ್ಳಬೇಕಾದ ಕಾರ್ಯ ಹಣಕಾಸು ತೊಂದರೆಯಿAದ ಅಪೂರ್ಣವಾಗಿರುವ ಕ್ರೀಡಾಂಗಣ ಕಾಮಗಾರಿ ಪೂರ್ಣಗೊಳಿಸುವ ದಿಸೆಯಲ್ಲಿ ಸರ್ಕಾರ ಅತಿ ಶ್ರೀಘದಲ್ಲಿ ಇನ್ನುಳಿದ ಹಣ ಬಿಡುಗಡೆ ಮಾಡುಬೇಕೆಂದು ಸ್ವಂದನಾ ಸ್ಪೋರ್ಟ್ಸ ಅಕ್ಯಾಡಮಿ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿಯೇ ಅತಿ ದೊಡ್ಡ ಕ್ರೀಡಾಂಗಣದ ಆವರಣ ಹೊಂದಿದೆ ಎಂದು ಖ್ಯಾತಿ ಪಡೆದಿರುವ ಸ್ಥಳೀಯ ಕ್ರೀಡಾಂಗಣವು ತನ್ನದೇ ಆದ ಮೂಲಭೂತ ಸೌರ‍್ಯ ತರಬೇತುದಾರ, ವೈಜ್ಞಾನಿಕ ಕ್ರೀಡಾ ಸಾಮಗ್ರಿ, ವಿವಿಧ ಕ್ರೀಡಾ ಅಂಕಣ ಸ್ವಚತೆ, ಆವರಣಕ್ಕೆ ಗೋಡೆ , ರಾತ್ರಿ ವೇಳೆ ಬೆಳಕಿನ ಕೊರತೆ, ಮುಂತಾದವುಗಳಿAದ ಸೌಲಭ್ಯ ವಂಚಿತವಾದ ಕ್ರೀಡಾಂಗಣದ ಅಔಇವೃದ್ದಿಗೆ ಸಾರ್ವಜನಿಕ ವಲಯದಿಂದ ಸಾಕಷ್ಟು ಟೀಕೆ ಬಂದಿರುವ ಹಿನ್ನೆಲೆಯಲ್ಲಿ ಹಿಂದಿನ ಉಸ್ತುವಾರಿ ಸಚಿವ ಆರ್ ದೇಶಪಾಂಡೆಯವರ ಸೂಚನೆ ಮೇರೆಗೆ ತದನಂತರ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ನಿರ್ದೇಶನದ ಹಿನ್ನೆಲೆಯಲ್ಲಿ ರೂ ೧ ಕೋಟಿ ಅನುದಾನ ಬಿಡುಗಡೆಗೊಂಡಿತ್ತು..
ಪ್ರಥಮ ಹಂತದ ಕಾಮಗಾರಿಗೆ ೨೫ ಲಕ್ಷ ಬಿಡುಗಡೆ ಆಗಿ ೧ ವರ್ಷವಾದ ಮೇಲೆ ಸದ್ರಿ ವರ್ಷದ ಜನವರಿಯಲ್ಲಿ ಕಾಮಗಾರಿಗೆ ಸಭಾಧ್ಯಕ್ಷ ಉದ್ಘಾಟಿಸಿದ ನಂತರ ಕಾಮಗಾರಿ ಪೂರ್ತಿಗೊಳಿಸಲು ಮೇ ತಿಂಗಳು ನಿಗದಿಗೊಳಿಸಲಾಗಿತ್ತು. ಕೋವಿಡ್ ಕಾರಣದಿಂದ ಸದ್ರಿ ಅವಧಿ ಪ್ರಸಕ್ತ ವರ್ಷದ ಡಿಸೆಂಬರ್ ಅಂತ್ಯದವರೆಗೆ ಇಲಾಖೆ ಮುಂದುವರೆಸಿತ್ತು ಆದರೆ ಸರ್ಕಾರ ಕಾಮಗಾರಿ ಪೂರ್ತಿಗೊಳ್ಳದೆ ಕ್ರೀಡಾಂಗಣದ ಸೌಲಭ್ಯ ಪಡೆದುಕೊಳ್ಳುವಲ್ಲಿ ಕ್ರೀಡಾಟಡುಗಳು ವಿಫಲರಾಗುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ಓಟದ ಪಥ ಕಾಮಗಾರಿ ಚಾಲ್ತಿಯಲ್ಲಿದ್ದರೆ ಓಟದ ಪಥದ ಒಳಾಂಗಣದ ಒಳಚರಂಡಿ ಕಾಮಗಾರಿ ಪೂರ್ತಿ ಆಗದಿರುವುದು ಇನ್ನಿತರ ಮೂಲಭೂತ ಸೌಲಭ್ಯ ಸ್ಯಾಂಡ್ (ರೇತಿ) , ಪಿಟ್, ಜಿಗಿತ, ಎಸೆತ, ಅಂಕಣಕ್ಕೆ ಭದ್ರತಾ, ಬೆಳಕು ಬಣ್ಣ ಮುಂತಾದ ಕಾಮಗಾರಿಗಳಿಗೆ ಹಣದ ಅಡಚಣೆಯಿಂದ ಕಾಮಗಾರಿ ಸ್ಥಗಿತಗೊಂಡಿರುವುದು ಖೇದಕರ.
ಈ ಹಿನ್ನೆಯಲ್ಲಿ ಸರ್ಕಾರವು ಅತಿ ಶ್ರೀಘದಲ್ಲಿ ಘೋಷಿಸಿದ ಕಾಮಗಾರಿಯ ಹಣ ಬಿಡುಗಡೆ ಮಾಡಿ ತುರ್ತು ಕಾಮಗಾರಿ ಪೂರ್ತಿಗೊಳಿಸುವುದರರೊಂದಿಗೆ ಕ್ರೀಡಾಚಟುವಟಿಕೆಗೆ ಶ್ರೀಘ ಅವಕಾಶ ಮಾಡಿಕೊಡಬೇಕೆಂದು ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.

error: